ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್, ಫಾರ್ಮ್ನಲ್ಲಿರುವ ಸಂಜು ಸ್ಯಾಮ್ಸನ್ ಜೊತೆ ಓಪನಿಂಗ್ ಬರುತ್ತಲೇ ಇರುವುದು ಸಿಎಸ್ಕೆ ಅಭಿಮಾನಿಗಳಿಗೆ ಕಿಂಚಿತ್ತು ಇಷ್ಟವಿಲ್ಲ. ಇಷ್ಟಾದರೂ ಬಂದ ರುತುರಾಜ್, ಒಂದು ಹಂತಕ್ಕೆ ಕ್ರೀಸ್ಗೆ ಅಂಟಿ ನಿಂತರೆ, ಅತ್ತ ಫ್ಯಾನ್ಸ್ಗಳ ಅಪಾರ ನಿರೀಕ್ಷೆಯನ್ನು ಸ್ಯಾಮ್ಸನ್ ಹುಸಿ ಮಾಡಿದರು. 11 ರನ್ಗೆ ಔಟ್ ಆಗಿ ಪೆವಿಲಿಯನ್ಗೆ ಹೋದರು. ಅವರ ಬೆನ್ನಲ್ಲೇ ಉರ್ವಿಲ್ ಪಟೇಲ್ (4), ಸರ್ಫರಾಜ್ ಖಾನ್ (0) ಮತ್ತು ಡೇವಾಲ್ಡ್ ಬ್ರೆವಿಸ್ (2) ವಿಕೆಟ್ ಕಳೆದುಕೊಂಡರು.