ಬೆಂಗಳೂರು: ಭಾರತೀಯ ಕ್ರಿಕೆಟ್ಗೆ ಹೊಸ ಆತ್ಮವಿಶ್ವಾಸವನ್ನು ತುಂಬಿದ, ಎಂಥದ್ದೇ ಸಂಕಷ್ಟದ ಪರಿಸ್ಥಿತಿಯಿಂದ ಪುಟಿದೆದ್ದು ಬರಬಹುದು ಎಂಬ ಪಾಠವನ್ನು ಕಲಿಸಿದ, ವಿಶ್ವ ಕ್ರಿಕೆಟ್ನಲ್ಲಿ ಆಸ್ಟ್ರೆಲಿಯಾದ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ, 2000ದ ಮ್ಯಾಚ್ ಫಿಕ್ಸಿಂಗ್ ಹಗರಣದ ಬಳಿಕ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೆ ಆಟದ ಮೇಲೆ ನಂಬಿಕೆ ಮೂಡಿಸಿದ ಮತ್ತು ಭಾರತ ತಂಡವನ್ನು "ಟೀಮ್ ಇಂಡಿಯಾ' ಎಂಬ ಸಂಟಿತ ಶಕ್ತಿಯಾಗಿ ಬದಲಾಯಿಸಿದ 2001ರ ಕೋಲ್ಕತ ಟೆಸ್ಟ್ ಪಂದ್ಯಕ್ಕೆ ಈಗ 25 ವರ್ಷಗಳ ಸಂಭ್ರಮ. ಈ ಪಂದ್ಯದ 3ನೇ ದಿನ ಫಾಲೋಆನ್ಗೆ ಸಿಲುಕಿದ್ದ ಆತಿಥೇಯ ಭಾರತ ತಂಡ, ವಿವಿಎಸ್ ಲಕ್ಷ್ಮಣ್ (vvs laxman)-ರಾಹುಲ್ ದ್ರಾವಿಡ್ (rahul dravid) ಅದ್ಭುತ ಜತೆಯಾಟದಿಂದ ಪವಾಡಸದೃಶ ರೀತಿಯಲ್ಲಿ ಗೆದ್ದು, ಸ್ಟೀವ್ ವಾ ಸಾರಥ್ಯದ ಆಸ್ಟ್ರೇಲಿಯಾ ತಂಡದ ಸೊಕ್ಕು ಮುರಿದಿತ್ತು.