

‘ಕ್ರಾಸ್‌ಫಿಟ್ 9ಒನ್’ (CrossFit 9one) ವತಿಯಿಂದ ಆಯೋಜಿಸಲಾದ ವಾರ್ಷಿಕ 24 ಗಂಟೆಗಳ ರೋಯಿಂಗ್ ಚಾಲೆಂಜ್‌ನಲ್ಲಿ 100ಕ್ಕೂ ಹೆಚ್ಚು ಕ್ರೀಡಾಪಟುಗಳು, ಉದ್ಯಮಿಗಳು, ಕೋಚ್‌ಗಳು ಮತ್ತು ಫಿಟ್‌ನೆಸ್ ಉತ್ಸಾಹಿಗಳು ಸಕ್ರಿಯವಾಗಿ ಭಾಗವಹಿಸಿದರು. ಆಗಸ್ಟ್ 16ರಂದು ಆರಂಭಗೊಂಡ ಈ ಸವಾಲಿನಲ್ಲಿ ಒಲಿಂಪಿಯನ್‌ಗಳು, ಐರನ್‌ಮ್ಯಾನ್ ಅಥ್ಲೀಟ್‌ಗಳು, HYROX ಸ್ಪರ್ಧಿಗಳು ಮತ್ತು ಉದ್ಯಮ ಕ್ಷೇತ್ರದ ಪ್ರಮುಖರು ಪಾಲ್ಗೊಂಡು ಸಮಾಜಮುಖಿ ಕಾರ್ಯಗಳಿಗೆ ನಿಧಿ ಸಂಗ್ರಹಿಸಿದರು.