ಅಂಧರ ಟಿ20 ವಿಶ್ವಕಪ್​: ಭಾರತದ ಮಹಿಳೆಯರಿಗೆ ಸತತ 4ನೇ ಜಯ, ಸೆಮೀಸ್​ ಖಾತ್ರಿ

ಅಂಧರ ಟಿ20 ವಿಶ್ವಕಪ್​: ಭಾರತದ ಮಹಿಳೆಯರಿಗೆ ಸತತ 4ನೇ ಜಯ
ಅಂಧರ ಟಿ20 ವಿಶ್ವಕಪ್​: ಭಾರತದ ಮಹಿಳೆಯರಿಗೆ ಸತತ 4ನೇ ಜಯ
Published on

ಪ್ರಮುಖ ಮುಖ್ಯಾಂಶಗಳು

  • ಭಾನುವಾರ ಪಾಕಿಸ್ತಾನ ಎದುರು ಮುಖಾಮುಖಿ
  • ಕೊಲಂಬೊದಲ್ಲಿ ನಡೆಯಲಿದೆ ಪಂದ್ಯ
  • ಸತತ 5ನೇ ಜಯದ ನಿರೀಕ್ಷೆಯಲ್ಲಿ ಭಾರತ
ಬೆಂಗಳೂರು: ಆತಿಥೇಯ ಭಾರತ ತಂಡ ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ (blind womens t20 cricket world cup) ಸತತ 4ನೇ ಗೆಲುವಿನೊಂದಿಗೆ ಅಜೇಯ ಓಟ ಮುಂದುವರಿಸಿದ್ದು, ಸೆಮಿಫೈನಲ್​ ಪ್ರವೇಶವನ್ನೂ ಖಾತ್ರಿಪಡಿಸಿಕೊಂಡಿದೆ. ತಿರುಮೇನಹಳ್ಳಿಯ ಸಂಪ್ರಸಿದ್ಧಿ ಸ್ಪೋರ್ಟ್ಸ್​ ಎಸ್ಟಾಡಿಯೊದಲ್ಲಿ ಶನಿವಾರ ನಡೆದ ತನ್ನ 4ನೇ ಲೀಗ್​ ಪಂದ್ಯದಲ್ಲಿ ಭಾರತ ತಂಡ ಅಮೆರಿಕ ವಿರುದ್ಧ 10 ವಿಕೆಟ್​ಗಳಿಂದ ಸುಲಭ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್​ಗೆ ಇಳಿದ ಅಮೆರಿಕ 8 ವಿಕೆಟ್​ಗೆ 60 ರನ್​ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಭಾರತ ತಂಡ 3.3 ಓವರ್​ಗಳಲ್ಲೇ ವಿಕೆಟ್​ ನಷ್ಟವಿಲ್ಲದೆ 61 ರನ್​ ಗಳಿಸಿ ಜಯ ಸಾಧಿಸಿತು.

ಭಾನುವಾರ ಪಾಕ್​ ಎದುರಾಳಿ
ಭಾರತ ತಂಡ ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ತನ್ನ 5ನೇ ಹಾಗೂ ಅಂತಿಮ ಲೀಗ್​ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ಶನಿವಾರ ಆಡಿದ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು ವಿಕೆಟ್​ ನಷ್ಟವಿಲ್ಲದೆ 331 ರನ್​ ಗಳಿಸಿ 211 ರನ್​ಗಳಿಂದ ದಾಖಲೆಯ ಗೆಲುವು ಸಾಧಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net