ವಿಶ್ವದ ಡೇಂಜರಸ್​ ಬೌಲರ್​ ಬುಮ್ರಾ ಈ ಐಪಿಎಲ್​ನಲ್ಲಿ ಒಂದೇ ಒಂದು ವಿಕೆಟ್​ ಪಡೆದಿಲ್ಲ ಏಕೆ? ಇಲ್ಲಿದೆ ನೋಡಿ ಅಚ್ಚರಿ ಕಾರಣ...Jasprit Bumrah

ವಿಶ್ವದ ಡೇಂಜರಸ್​ ಬೌಲರ್​ ಬುಮ್ರಾ ಈ ಐಪಿಎಲ್​ನಲ್ಲಿ ಒಂದೇ ಒಂದು ವಿಕೆಟ್​ ಪಡೆದಿಲ್ಲ ಏಕೆ? ಇಲ್ಲಿದೆ ನೋಡಿ ಅಚ್ಚರಿ ಕಾರಣ...Jasprit Bumrah
ವಿಶ್ವದ ಡೇಂಜರಸ್​ ಬೌಲರ್​ ಬುಮ್ರಾ ಈ ಐಪಿಎಲ್​ನಲ್ಲಿ ಒಂದೇ ಒಂದು ವಿಕೆಟ್​ ಪಡೆದಿಲ್ಲ ಏಕೆ? ಇಲ್ಲಿದೆ ನೋಡಿ ಅಚ್ಚರಿ ಕಾರಣ...Jasprit Bumrah
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವದ ಡೇಂಜರಸ್​ ಬೌಲರ್​ ಯಾರೆಂದು ಕೇಳಿದರೆ ಥಟ್ಟನೆ ನಮ್ಮ ನೆನಪಿಗೆ ಜಸ್​ಪ್ರೀತ್​ ಬುಮ್ರಾ
  • ತನ್ನ ಮಾರಕ ಬೌಲಿಂಗ್​ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್​ಮನ್​​ಗಳ ವಿಕೆಟ್​ಗಳನ್ನು ಕಬಳಿಸುತ್ತಾರೆ
  • ಈ ಹಿಂದೆ ಸೋಲುವ ಪಂದ್ಯಗಳನ್ನೂ ಏಕಾಂಗಿಯಾಗಿ ಬುಮ್ರಾ ಗೆಲ್ಲಿಸಿಕೊಟ್ಟಿದ್ದಾರೆ
  • ಇಂಥಾ ವಿಶ್ವ ದರ್ಜೆಯ ಬೌಲರ್​ ಇಂದು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ
  • ಪ್ರಸ್ತುತ ಐಪಿಎಲ್​ ಟೂರ್ನಿಯಲ್ಲಿ ಬುಮ್ರಾ ಬತ್ತಳಿಕೆಗೆ ಈವರೆಗೂ ಒಂದೇ ಒಂದು ವಿಕೆಟ್​ ಬೀಳದಿರಲು ಕಾರಣವೇನು?
Jasprit Bumrah : ಪ್ರಸ್ತುತ ವಿಶ್ವದ ಡೇಂಜರಸ್​ ಬೌಲರ್​ ಯಾರೆಂದು ಕೇಳಿದರೆ ಥಟ್ಟನೆ ನಮ್ಮ ನೆನಪಿಗೆ ಜಸ್​ಪ್ರೀತ್​ ಬುಮ್ರಾ. ತನ್ನ ಮಾರಕ ಯಾರ್ಕರ್​, ಭಯಾನಕ ಬೌನ್ಸರ್​ ಮತ್ತು ಚಾಣಾಕ್ಷತೆಯ ಸ್ಲೋ ಬಾಲ್​ಗಳ ಮೂಲಕ ಎದುರಾಳಿ ಬ್ಯಾಟ್ಸ್​ಮನ್​​ಗಳ ವಿಕೆಟ್​ಗಳನ್ನು ಹೊಡೆದುರುಳಿಸುವ ಬುಮ್ರಾ, ಡೆತ್​ ಓವರ್​ ಸ್ಪೆಷಲಿಸ್ಟ್​ ಅಂತಾನೇ ಖ್ಯಾತಿ ಪಡೆದಿದ್ದಾರೆ. ತಮ್ಮ ಮೊನೆಚಾದ ಬೌಲಿಂಗ್​ ದಾಳಿಯಿಂದಾಗಿ ಸೋಲುವ ಪಂದ್ಯಗಳನ್ನೂ ಏಕಾಂಗಿಯಾಗಿ ಬುಮ್ರಾ ಗೆಲ್ಲಿಸಿಕೊಟ್ಟಿದ್ದಾರೆ. ಇಂಥಾ ವಿಶ್ವ ದರ್ಜೆಯ ಬೌಲರ್​ ಇಂದು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಬುಮ್ರಾ ಬತ್ತಳಿಕೆಗೆ ಒಂದೇ ಒಂದು ವಿಕೆಟ್​ ಬಿದ್ದಿಲ್ಲ. ಅಷ್ಟಕ್ಕೂ ಬುಮ್ರಾಗೆ ಏನಾಯಿತು? ಬೌಲಿಂಗ್​ನಲ್ಲಿ ತಮ್ಮ ಲಯ ಕಳೆದುಕೊಂಡ್ರಾ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳವ ಪ್ರಯತ್ನ ಮಾಡೋಣ.
ಅಂದಹಾಗೆ, ಬುಮ್ರಾ ಅವರು ಮುಂಬೈ ಇಂಡಿಯನ್ಸ್​ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದುವರೆಗೂ ಐದು ಪಂದ್ಯಗಳನ್ನು ಆಡಿರುವ ಬುಮ್ರಾ, ಒಂದೇ ಒಂದು ವಿಕೆಟ್​ ಪಡೆದಿಲ್ಲ. ಅಲ್ಲದೆ, ತಮ್ಮ ಬಾಲ್​ಗಳಿಂದ 164 ರನ್​ ಬಿಟ್ಟುಕೊಡುವ ಮೂಲಕ ದುಬಾರಿಯಾಗಿದ್ದಾರೆ. ಈ ಹಿಂದೆ ಕಡಿಮೆ ಎಕನಾಮಿ ರೇಟ್​ ಕಾಯ್ದುಕೊಳ್ಳುತ್ತಿದ್ದ ಬುಮ್ರಾ, ಈ ಬಾರಿ 8.63ರ ಎಕನಾಮಿ ರೇಟ್​ನೊಂದಿಗೆ ದುಬಾರಿ ಬೌಲರ್​ ಆಗಿದ್ದಾರೆ.
ಪವರ್​ ಪ್ಲೇನಲ್ಲಿ ವಿಕೆಟ್​ಗಳನ್ನು ಕಬಳಿಸುವ ತಾಕತ್ತು ಹೊಂದಿರುವ ಈ ಬಲಗೈ ಬೌಲರ್​, ಡೆತ್​ ಓವರ್​ಗಳಲ್ಲಿ ಮಾರಕ ಯಾರ್ಕರ್​ಗಳ ಮೂಲಕ ಪಂದ್ಯದ ಗತಿಯನ್ನೇ ಬದಲಿಸುತ್ತಾರೆ. ಆದರೆ, ಈ ಸೀಸನ್​ನಲ್ಲಿ​ ತಮ್ಮ ಪ್ರಭಾವ ಬೀರುವಲ್ಲಿ ಬುಮ್ರಾ ಹಿಂದೆ ಉಳಿದಿದ್ದಾರೆ. ಯುವ ಬ್ಯಾಟರ್​ಗಳು ಕೂಡ ಬುಮ್ರಾ ಬೌಲಿಂಗ್​ ಅನ್ನು ನಿರ್ಭಯವಾಗಿ ಎದುರಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ, 15 ವರ್ಷದ ವೈಭವ್​ ಸೂರ್ಯವಂಶಿ ಒಂದೇ ಓವರ್​ನಲ್ಲಿ ಬುಮ್ರಾಗೆ ಎರಡು ಸಿಕ್ಸರ್​ ಬಾರಿಸಿದ್ದನ್ನು ನೆನಪು ಮಾಡಿಕೊಳ್ಳಬಹುದು. ಹಾಗಾದರೆ, ಬುಮ್ರಾರ ಈ ಕಳಪೆ ಪ್ರದರ್ಶನಕ್ಕೆ ಕಾರಣ ಏನು?

ಕಾರಣ ಬಿಚ್ಚಿಟ್ಟ ಇರ್ಫಾನ್​ ಪಠಾಣ್​

ಅಂದಹಾಗೆ, ಬುಮ್ರಾ ಅವರ ಕಳಪೆ ಫಾರ್ಮ್​ಗೆ ಕಾರಣ ಏನು ಅನ್ನೋದನ್ನು ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ವಿವರಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ನಿಧಾನಗತಿಯ ಎಸೆತಗಳನ್ನು ಅಂದರೆ ಸ್ಲೋ ಬಾಲ್​ಗಳನ್ನು ಎಸೆಯುತ್ತಿದ್ದು, ಅದಕ್ಕೆ ಬೆಲೆ ತೆರುತ್ತಿದೆ ಎಂದು ಹೇಳಿದರು.
ವಿಕೆಟ್​ಗಳನ್ನು ಕಬಳಿಸುವಲ್ಲಿ ಜಸ್​​​ಪ್ರೀತ್​ ಬುಮ್ರಾ ಬೌಲಿಂಗ್​ ತುಂಬಾನೇ ಮುಖ್ಯ. ಆತನ ಫಾರ್ಮ್​ನಲ್ಲಿ ಯಾವುದೇ ಪ್ರಮುಖ ಕೊರತೆ ಇಲ್ಲ ಆದರೆ, ಈ ಸೀಸನ್​ನಲ್ಲಿ ಬುಮ್ರಾರ ಸರಾಸರಿ ಬೌಲಿಂಗ್​ ವೇಗ ಗಂಟೆಗೆ 130 ಕಿ.ಮೀ ಇದೆ. ಶೇ. 44 ರಷ್ಟು ಸ್ಲೋ ಬಾಲ್​ಗಳನ್ನು ಬುಮ್ರಾ ಬಳಸುತ್ತಿದ್ದಾರೆ ಎಂದು ಇರ್ಫಾನ್​ ಪಠಾಣ್​ ಅವರು ತಮ್ಮ ಯುಟ್ಯೂಬ್​ ಚಾನೆಲ್​ನಲ್ಲಿ ಹೇಳಿದರು.

ತರಬೇತಿಯ ಅಗತ್ಯವೇ ಇಲ್ಲ

ಅಷ್ಟಕ್ಕೂ ಜಸ್​ಪ್ರೀತ್​ ಬುಮ್ರಾ ಈ ರೀತಿ ಮಾಡುತ್ತಿರುವುದು ಏಕೆ? ಎಂದು ಪ್ರಶ್ನೆ ಮಾಡಿರುವ ಇರ್ಫಾನ್​ ಪಠಾಣ್​, ನಾವು ಇದರ ಬಗ್ಗೆ ಇನ್ನಷ್ಟು ಆಳವಾಗಿ ಯೋಚಿಸಬೇಕೆಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ನನ್ನ ಪ್ರಕಾರ, ಬುಮ್ರಾ ಅವರು ವೇಗದ ಎಸೆತಗಳನ್ನು ಹೆಚ್ಚು ಎಸೆದು, ಸ್ಲೋ ಬಾಲ್​ಗಳನ್ನು ಕಡಿಮೆ ಮಾಡಿದರೆ, ಉತ್ತಮ ಫಲಿತಾಂಶಗಳು ಬಂದೇ ಬರುತ್ತವೆ. ಅಂದಹಾಗೆ, ಇದು ತುಂಬಾ ಸರಳ ಪರಿಹಾರವಾಗಿದೆ. ಹೇಳಬೇಕೆಂದರೆ, ಬುಮ್ರಾಗೆ ತರಬೇತಿಯ ಅಗತ್ಯವೇ ಇಲ್ಲ. ಆದರೆ, ಸದ್ಯದ ಸಂಖ್ಯೆಗಳು ಬುಮ್ರಾ ಬೌಲಿಂಗ್​ನಲ್ಲಿ ಏನಾಗುತ್ತಿದೆ ಎಂಬುದನ್ನು ತೋರಿಸುತ್ತಿವೆ ಎಂದು ಇರ್ಫಾನ್​ ಪಠಾಣ್​ ತಿಳಿಸಿದ್ದಾರೆ.
ಶೇ. 44 ರಷ್ಟು ಸ್ಲೋ ಬಾಲ್​ಗಳು ಮತ್ತು ಸರಾಸರಿ ವೇಗ ಗಂಟೆಗೆ 130 ಕಿಮೀಗಿಂತ ಕಡಿಮೆ ಇದ್ದರೆ ಆ ಬೌಲರ್​ ತನ್ನ ವೇಗವನ್ನು ಖಂಡಿತವಾಗಿ ಹೆಚ್ಚಿಸಬೇಕಾಗುತ್ತದೆ. ನೀವು ಹೆಚ್ಚು ಸ್ಲೋ ಬಾಲ್​ಗಳನ್ನು ಎಸೆದರೆ, ನಿಮ್ಮ ಸರಾಸರಿ ವೇಗ ಸಹಜವಾಗಿಯೇ ಕಡಿಮೆಯಾಗುತ್ತದೆ. ಹೀಗಾಗಿ, ನೀವು ಸ್ಲೋ ಬಾಲ್​ಗಳ ಶೇಕಡಾವಾರು ಪ್ರಮಾಣವನ್ನು 35 ಪ್ರತಿಶತಕ್ಕೆ ತಂದರೆ ಅಥವಾ ಶೇ. 30 ರಿಂದ 35 ರಷ್ಟನ್ನು ಇಟ್ಟುಕೊಂಡು, ವೇಗದ ಎಸೆತಗಳನ್ನು ಹೆಚ್ಚಾಗಿ ಎಸೆದರೆ, ನಿಮ್ಮ ಸ್ಲೋ ಬಾಲ್​ಗಳು ಕೂಡ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಇದರ ನಡುವೆ ನೀವು ಸೀಮ್ ಮತ್ತು ಸ್ವಿಂಗ್ ಸಹ ಎಸೆದರೆ, ನೀವು ಅತ್ಯುತ್ತಮ ಬ್ಯಾಟರ್‌ಗಳನ್ನು ಸಹ ಸುಲಭವಾಗಿ ಔಟ್ ಮಾಡಬಹುದು ಎಂದು ಪಠಾಣ್ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಅಂದಹಾಗೆ, ಈ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸತತ ನಾಲ್ಕನೇ ಬಾರಿಗೆ ಸೋಲಿಗೆ ಶರಣಾಗಿದೆ. ಐದು ಬಾರಿಯ ಚಾಂಪಿಯನ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ಪಂದ್ಯದಲ್ಲಿ ಏಪ್ರಿಲ್ 20 ರಂದು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net