PHOTOS | ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್ ಕಲರವ!

Sudhee_17_1st_Division_Cricket_@_KSCA (13)
Published on

ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಕಳೆದ 8 ತಿಂಗಳಿನಿಂದ ರಾಜ್ಯದಲ್ಲಿ ಸ್ತಬ್ಧಗೊಂಡಿದ್ದ ಸ್ಪರ್ಧಾತ್ಮಕ ಕ್ರಿಕೆಟ್ ಚಟುವಟಿಕೆಗೆ ಮಂಗಳವಾರ ಮತ್ತೆ ಚಾಲನೆ ದೊರೆತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2019-20ರ ಸಾಲಿನ ಕೆಎಸ್‌ಸಿಎ ಟಿ20 ಟೂರ್ನಿಯ ಫೈನಲ್ ಪಂದ್ಯದೊಂದಿಗೆ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡಿದೆ. ಇತ್ತೀಚೆಗೆ ಯುಎಇಯಲ್ಲಿ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ಆಡಿದ್ದ ಕರುಣ್ ನಾಯರ್, ಕೆ. ಗೌತಮ್, ಪ್ರವೀಣ್ ದುಬೆ, ಜೆ. ಸುಚಿತ್, ಅನಿರುದ್ಧ ಜೋಶಿ ಮತ್ತು ರಾಜ್ಯ ತಂಡದ ಆಟಗಾರರಾದ ಅಭಿಮನ್ಯು ಮಿಥುನ್, ರೋನಿತ್ ಮೋರೆ, ನಿಶ್ಚಲ್ ಡಿ. ಅವರಂಥ ಪ್ರಮುಖ ಕ್ರಿಕೆಟಿಗರು ಕೂಡ ಈ ಪಂದ್ಯದಲ್ಲಿ ಆಡಿದರು.

ಮಳೆಯಿಂದ ಅಡಚಣೆಗೊಳಗಾದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕರುಣ್ ನಾಯರ್ ಸಾರಥ್ಯದ ವಲ್ಚರ್ಸ್‌ ಕ್ರಿಕೆಟ್ ಕ್ಲಬ್ ತಂಡ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ವಿರುದ್ಧ 9 ರನ್‌ಗಳಿಂದ ಗೆಲುವು ದಾಖಲಿಸಿತು. ಮಾರ್ಚ್ ಬಳಿಕ ರಾಜ್ಯದಲ್ಲಿ ನಡೆದ ಮೊದಲ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯ ಇದಾಗಿತ್ತು. ಇದರೊಂದಿಗೆ ಮುಂದಿನ ದೇಶೀಯ ಕ್ರಿಕೆಟ್ ಋತುವಿಗೆ ರಾಜ್ಯದ ಕ್ರಿಕೆಟಿಗರ ಸಿದ್ಧತೆಯೂ ಆರಂಭಗೊಂಡಿದೆ.

ವಲ್ಚರ್ಸ್‌ ಸಿಸಿ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 186 (ಕರುಣ್ ನಾಯರ್ 53, ಶ್ರೀಜಿತ್ ಕೆಎಲ್ 54, ಅನಿರುದ್ದ ಜೋಶಿ 41, ನವೀನ್ ಎಂಜಿ 26ಕ್ಕೆ 2, ಕೆ. ಗೌತಮ್ 34ಕ್ಕೆ 3), ಸ್ವಸ್ತಿಕ್ ಯೂನಿಯನ್ ಸಿಸಿ: (ಪರಿಷ್ಕೃತ ಗುರಿ: 19 ಓವರ್‌ಗಳಲ್ಲಿ 179) 18.5 ಓವರ್‌ಗಳಲ್ಲಿ 169 (ಕೆ. ಗೌತಮ್ 83, ದರ್ಶನ್ 28ಕ್ಕೆ 5).

ಕೋವಿಡ್-19 ಇರುವುದರಿಂದಾಗಿ ಎಸ್‌ಒಪಿ ಮಾರ್ಗಸೂಚಿಯಂತೆ ಸಿದ್ಧತೆ ಕೈಗೊಳ್ಳಲಾಗಿತ್ತು. ಬಯೋ-ಬಬಲ್ ವಾತಾವರಣದಲ್ಲಿ ಬಿಸಿಸಿಐ ಯಾವುದೇ ಟೂರ್ನಿಗಳನ್ನು ಆಯೋಜಿಸಲು ಸೂಚಿಸಿದರೆ, ಕೆಎಸ್‌ಸಿಎ ಅದಕ್ಕೆ ಸಿದ್ಧವಿದೆ. ಕೆಎಸ್‌ಸಿಎ ಬಳಿಕ ತಕ್ಕ ಮೂಲಭೂತ ಸೌಕರ್ಯಗಳೂ ಇವೆ.

ವಿನಯ್ ಮೃತ್ಯುಂಜಯ ಕೆಎಸ್‌ಸಿಎ ವಕ್ತಾರ, ಖಜಾಂಚಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net