ಮಾಜಿ ನಾಯಕ ಸೌರವ್​ ಗಂಗೂಲಿ ಹುಟ್ಟುಹಬ್ಬಕ್ಕೆ ಶುಭಕೋರಿದ ವಿಶ್ವ ಕ್ರಿಕೆಟ್ ವಲಯ

gagully birthday for web
Published on

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಹಾಗೂ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್​ ಗಂಗೂಲಿ ಬುಧವಾರ 48ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಭಾರತ ತಂಡದ ಸರ್ವಶ್ರೇಷ್ಠ ನಾಯಕರಲ್ಲಿ ಒಬ್ಬರೆನಿಸಿದ್ದ ಗಂಗೂಲಿಗೆ ತಮ್ಮ ಮಾಜಿ ಸಹಪಾಠಿ ಸಚಿನ್​ ತೆಂಡುಲ್ಕರ್​ ಸೇರಿದಂತೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಶುಭಕೋರಿದರು. ಮಂಗಳವಾರವಷ್ಟೇ ಮಾಜಿ ನಾಯಕ 39ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಸತತ ಎರಡು ದಿನ ಭಾರತೀಯ ಕ್ರಿಕೆಟ್​ನ ಶ್ರೇಷ್ಠ ನಾಯಕರ ಹುಟ್ಟುಹಬ್ಬದ ಸಂಭ್ರಮ ಅಭಿಮಾನಿಗಳಲ್ಲಿ ಮನೆಮಾಡಿದೆ. ಬಿಸಿಸಿಐ ಅಲ್ಲದೆ, ಐಸಿಸಿ, ವಿಶ್ವದ ಅನೇಕ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಶುಭಕೋರಿದ್ದಾರೆ.

ಸಚಿನ್​ ತೆಂಡುಲ್ಕರ್​ ಹಾಗು ಸೌರವ್​ ಗಂಗೂಲಿ ಭಾರತ ಕ್ರಿಕೆಟ್​ನ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಎನಿಸಿತ್ತು. ಉತ್ತಮ ಆರಂಭಿಕನಾಗುವ ಜತೆಗೆ ನಾಯಕತ್ವದಲ್ಲೂ ಸೈ ಎನಿಸಿಕೊಂಡಿದ್ದರು ಬಂಗಾಳದ ಸೌರವ್​ ಗಂಗೂಲಿ. ಮಾಜಿ ಸಹಪಾಠಿಗೆ ಶುಭಕೋರಿರುವ ದಿಗ್ಗಜ ಸಚಿನ್​ ತೆಂಡುಲ್ಕರ್​, ಹ್ಯಾಪಿ ರ್ಬತ್​ ಡೇ ದಾದಿ, ಮೈದಾನದಲ್ಲಿ ನಡೆಯುತ್ತಿದ್ದ ನಮ್ಮಿಬ್ಬರ ಉತ್ತಮ ಜತೆಯಾಟ ಮೈದಾನದ ಹೊರಗೂ ಮತ್ತಷ್ಟು ಗಟ್ಟಿಯಾಗಿರಲಿ ಎಂದು ಸಚಿನ್​ ಟ್ವೀಟ್​ ಮಾಡಿದ್ದಾರೆ. ಇದೀಗ ದಾದಾ ಜತೆಗೆ ಬಿಸಿಸಿಐ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯದರ್ಶಿ ಜಯ್​ ಷಾ, ನಾಯಕ ವಿರಾಟ್​ ಕೊಹ್ಲಿ, ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್​, ಸಂಸದ ಗೌತಮ್​ ಗಂಭೀರ್​, ಕ್ರಿಕೆಟಿಗರಾದ ಸುರೇಶ್​ ರೈನಾ, ಚೇತೇಶ್ವರ ಪೂಜಾರ ಸೇರಿದಂತೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ.

ಭಾರತೀಯ ಕ್ರಿಕೆಟ್​ ವಲಯದಲ್ಲಿ ದಾದಾ ಎಂದೇ ಹೆಸರಾಗಿರುವ ಸೌರವ್​ ಗಂಗೂಲಿ ಕೇವಲ ಮೈದಾನದಲ್ಲಷ್ಟೇ ಅಲ್ಲದೆ, ಆಡಳಿತದಲ್ಲೂ ನಾಯಕರಾಗಿದ್ದಾರೆ. ಆಡುವ ದಿನಗಳಲ್ಲಿ ಯುವ ಆಟಗಾರರ ಪಾಲಿಗೆ ಸ್ಫೂರ್ತಿ ಚಿಲುಮೆಯಾಗಿದ್ದ ದಾದಾ, ತಂಡದಲ್ಲಿ ಯುವಕರಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದರು. ಇದರ ಫಲವಾಗಿಯೇ ವೀರೇಂದ್ರ ಸೆಹ್ವಾಗ್​, ಹರ್ಭಜನ್​ ಸಿಂಗ್​, ಯುವರಾಜ್​ ಸಿಂಗ್​, ಜಹೀರ್​ ಖಾನ್​ ಅಶಿಶ್​ ನೆಹ್ರಾರಂಥ ಪ್ರತಿಭೆಗಳು ಅನಾವರಣಗೊಂಡವು. 2000 ಇಸವಿಯಲ್ಲಿ ದಾದಾ ಮುನ್ನಡೆಸಿದ್ದ ಟೀಮ್​ ಇಂಡಿಯಾ ಕ್ರಿಕೆಟ್​ ಲೋಕದಲ್ಲಿ ತನ್ನದೇ ಛಾಪು ಮೂಡಿಸಿತ್ತು. 2003ರ ಏಕದಿನ ವಿಶ್ವಕಪ್​ನಲ್ಲಿ ದಾದಾ ಸಾರಥ್ಯದ ತಂಡ ಫೈನಲ್​ ಪ್ರವೇಶಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net