VIDEO: ಟ್ರಿನಿಬಾಗೊ ನೈಟ್ ರೈಡರ್ಸ್‌ ತಂಡಕ್ಕೆ ಸತತ 9ನೇ ಜಯ

bravo and pollard for web
Published on

ತರೌಬಾ (ಟ್ರಿನಿಡಾಡ್): ಡರೇನ್ ಬ್ರಾವೋ (50ರನ್, 42 ಎಸೆತ, 1 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ನಾಯಕ ಕೈರಾನ್ ಪೊಲ್ಲಾರ್ಡ್ (42ರನ್, 21 ಎಸೆತ, 3 ಬೌಂಡರಿ, 3 ಸಿಕ್ಸರ್, 35ಕ್ಕೆ 3) ಆಲ್ರೌಂಡ್ ನಿರ್ವಹಣೆ ನೆರವಿನಿಂದ ಟ್ರಿನಿಬಾಗೊ ನೈಟ್ ರೈಡರ್ಸ್‌ ತಂಡ (ಟಿಕೆಆರ್) ಕೆರೆಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯಲ್ಲಿ ಸತತ 9ನೇ ಜಯ ದಾಖಲಿಸಿದೆ. ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಶನಿವಾರ ನಡೆದ ತನ್ನ 9ನೇ ಪಂದ್ಯದಲ್ಲಿ ಟಿಕೆಆರ್ ತಂಡ 23 ರನ್‌ಗಳಿಂದ ಸೇಂಟ್ ಲೂಸಿಯಾ ಜೌಕ್ಸ್ ತಂಡವನ್ನು ಮಣಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಟಿಕೆಆರ್ ತಂಡ 5 ವಿಕೆಟ್‌ಗೆ 175 ರನ್‌ಗಳಿಸಿದರೆ, ಪ್ರತಿಯಾಗಿ ಸೇಂಟ್ ಲೂಸಿಯಾ ಜೌಕ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಟಿಕೆಆರ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು. ದಿನದ ಮತ್ತೊಂದು ಪಂದ್ಯದಲ್ಲಿ ಬಾರ್ಬಡೊಸ್ ಟ್ರಿಡೆಂಟ್ಸ್ ತಂಡ 7 ವಿಕೆಟ್‌ಗಳಿಂದ ಜಮೈಕಾ ತಲ್ಲವಾಸ್ ತಂಡವನ್ನು ಸೋಲಿಸಿತು.

ಟಿಕೆಆರ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 175 (ಸೀರ್ಟ್ 33, ಡರೇನ್ ಬ್ರಾವೊ 50, ಪೊಲ್ಲಾರ್ಡ್ 42, ಕುಗ್ಗೆಲೀಜಿನ್ 35ಕ್ಕೆ2, ವಿಲಿಯಮ್ಸ್ 50ಕ್ಕೆ 1, ಜಹೀರ್ ಖಾನ್ 24ಕ್ಕೆ 1), ಸೇಂಟ್ ಲೂಸಿಯಾ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 152 (ಡೆಯಲ್ 40, ಫ್ಲೆಚರ್  42, ಡ್ವೇನ್ ಬ್ರಾವೊ 26ಕ್ಕೆ 2, ಸೀಲ್ಸ್ 21ಕ್ಕೆ 2, ಪೊಲ್ಲಾರ್ಡ್ 35ಕ್ಕೆ 3).

ಇಂದಿನ ಪಂದ್ಯಗಳು: ಟ್ರಿನಿಬಾಗೊ ನೈಟ್ ರೈಡರ್ಸ್‌ - ಸೇಂಟ್ ಕೀಟ್ಸ್ ಅಂಡ್ ನೆವಿಸ್ ಪೇಟ್ರಿಯೊಟ್ಸ್ (ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ), ಜಮೈಕಾ ತಲ್ಲವಾಸ್ - ಸೇಂಟ್ ಲೂಸಿಯಾ ಜೌಕ್ಸ್ (ರಾ.11.45ಕ್ಕೆ). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net