

ತರೌಬ: ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡ (ಟಿಕೆಆರ್) ಹೀರೋ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (ಸಿಪಿಎಲ್) ಹ್ಯಾಟ್ರಿಕ್ ಜಯ ದಾಖಲಿಸಿತು. ಭಾನುವಾರ ನಡೆದ ಪಂದ್ಯದಲ್ಲಿ ಟಿಕೆಆರ್ ತಂಡ 19 ರನ್ಗಳಿಂದ ಬಾರ್ಬಡೊಸ್ ಟ್ರಿಡೆಂಟ್ಸ್ ತಂಡವನ್ನು ಮಣಿಸಿತು. ದಿನದ ಮತ್ತೊಂದು ಪಂದ್ಯದಲ್ಲಿ ದಿನದ ಮತ್ತೊಂದು ಪಂದ್ಯದಲ್ಲಿ ಸೇಂಟ್ ಲೂಸಿಯಾ ಜೌಕ್ಸ್ ತಂಡ 10 ರನ್ಗಳಿಂದ ಗಯಾನ ಅಮೆಜಾನ್ ವಾರಿಯರ್ಸ್ ತಂಡವನ್ನು ಮಣಿಸಿ ಲೀಗ್ನಲ್ಲಿ 3ನೇ ಜಯ ದಾಖಲಿಸಿತು.
ಟ್ರಿನ್ಬಾಗೊ ಹಾಗೂ ನೈಟ್ ರೈಡರ್ಸ್: 3 ವಿಕೆಟ್ಗೆ 185 (ಕಾಲಿನ್ ಮನ್ರೊ 50, ಬ್ರಾವೊ 54 ಅಜೇಯ, ಕೈರಾನ್ ಪೊಲ್ಲಾರ್ಡ್ 41 ಅಜೇಯ, ಜೇಸನ್ ಹೋಲ್ಡರ್ 37ಕ್ಕೆ 1, ನರ್ಸ್ 20ಕ್ಕೆ 1), ಬಾರ್ಬಡೊಸ್ ಟ್ರಿಡೆಂಟ್ಸ್: 6 ವಿಕೆಟ್ಗೆ 166 (ಚಾರ್ಲ್ಸ್ 52, ಶೈ ಹೋಪ್ 36, ಹೋಲ್ಡರ್ 34 ಅಜೇಯ, ಅಲಿ ಖಾನ್ 32ಕ್ಕೆ 1, ಪೈರೆ 19ಕ್ಕೆ 1, ಸೀಲ್ಸ್ 34ಕ್ಕೆ 1, ಸುನೀಲ್ ನಾರಾಯಣ್ 17ಕ್ಕೆ 1).