

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಫೌಂಡೇಷನ್ಗೆ ನೆರವಾಗುವಂತೆ ಮನವಿ ಸಲ್ಲಿಸಿ ಟೀಕೆಗೆ ಗುರಿಯಾಗಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಕೊನೆಗೂ ದೇಶದ ಕರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಯುವರಾಜ್ ಸಿಂಗ್ ಪಿಎಂ-ಕೇರ್ಸ್ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ್ದರೆ, ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಪತ್ನಿ ಹಾಗೂ ಬಾಲಿವುಡ್ ನಟಿ ಗೀತಾ ಬಸ್ರಾ ಜತೆಗೂಡಿ ಜಲಂಧರ್ನ 5 ಸಾವಿರ ಬಡ ಕುಟುಂಬಗಳಿಗೆ ಆಹಾರಧಾನ್ಯ ವಿತರಿಸುವುದಾಗಿ ಘೊಷಿಸಿದ್ದಾರೆ.
ಯುವಿ 50 ಲಕ್ಷ ರೂ ದೇಣಿಗೆ: ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, 50 ಲಕ್ಷ ರೂ. ದೇಣಿಗೆಯನ್ನು ಭಾನುವಾರ ಟ್ವಿಟರ್ನಲ್ಲಿ ಘೋಷಿಸಿದ್ದು, ‘ಇಂಥ ಕಠಿಣ ವೇಳೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು. ನನ್ನ ಕೈಲಾದಷ್ಟು ಹಣ ನೀಡಿರುವೆ. ಎಲ್ಲರೂ ಪಿಎಂ-ಕೇರ್ಸ್ಗೆ ಸಾಧ್ಯವಾದಷ್ಟು ಮೊತ್ತ ನೀಡಿ’ ಎಂದು ಟ್ವೀಟ್ ಮಾಡಿದ್ದಾರೆ.
ಬಜ್ಜಿ ದಂಪತಿ ಆಹಾರ ಪೂರೈಕೆ: ನಾನು ಮತ್ತು ಗೀತಾ ಜಲಂಧರ್ನ 5 ಸಾವಿರ ಕುಟುಂಬಗಳಿಗೆ ನೆರವಾಗಲು ನಿರ್ಧರಿಸಿದ್ದೇವೆ. ಇಂಥ ಕಠಿಣ ಸಮಯದಲ್ಲಿ ಮನೆಮಂದಿಗೆ ಆಹಾರ ಪೂರೈಸಲು ಪರದಾಡುತ್ತಿರುವ ಜನರಿಗೆ ನೆರವಾಗುತ್ತಿದ್ದೇವೆ’ ಎಂದು ಮುಂಬೈ ನಿವಾಸದಲ್ಲಿ ಲಾಕ್ ಆಗಿರುವ ಹರ್ಭಜನ್ ಸಿಂಗ್ ತಿಳಿಸಿದ್ದಾರೆ.
ನನ್ನ ಆಪ್ತಮಿತ್ರರು ನಾನು ಈ ಹಿಂದೆ ನೆಲೆಸಿದ್ದ ದೌಲಾಪುರಿ ಪ್ರದೇಶದಲ್ಲಿ 500 ಕುಟುಂಬಗಳಿಗೆ ರೇಷನ್ ವಿತರಿಸಿದ್ದು, ಈ ಕುರಿತು ಜಲಂಧರ್ ಸ್ಥಳೀಯ ಪೊಲೀಸರೊಂದಿಗೆ ಮಾತನಾಡಿರುವೆ. ನನ್ನ ಸ್ನೇಹಿತರು ದೇಶ ಸಹಜಸ್ಥಿತಿಗೆ ಬರುವವರೆಗೂ ಆಹಾರ ಪೊಟ್ಟಣಗಳನ್ನು ವಿತರಿಸಲಿದ್ದಾರೆ ಎಂದು ಟರ್ಬನೇಟರ್ ಖ್ಯಾತಿಯ 39 ವರ್ಷದ ಸ್ಪಿನ್ನರ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಕ್ರಿಕೆಟಿಗರಿಂದ ಸಹಾಯ
ಪುಣೆ: ಮಹಾರಾಷ್ಟ್ರ ರಣಜಿ ತಂಡದ ಮಾಜಿ ನಾಯಕ ನೌಶಾದ್ ಶೇಖ್ ಒಳಗೊಂಡಂತೆ ಕೆಲ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಗ್ರೌಂಡ್ವುನ್ ಮತ್ತಿತರ ಕ್ರಿಕೆಟ್ ಮೈದಾನದ ಸಿಬ್ಬಂದಿಗೆ ಸಹಾಯಹಸ್ತ ನೀಡಲು ಮುಂದೆ ಬಂದಿದ್ದಾರೆ. ದೇಶೀಯ ಮತ್ತು ಕ್ಲಬ್ ಮಟ್ಟದ ಕ್ರಿಕೆಟಿಗರು ‘ಗೇಮ್ೇಂಜರ್ಸ್ ಪರಿಹಾರ ನಿಧಿ’ ಸ್ಥಾಪಿಸಿದ್ದು, ಇದುವರೆಗೆ 1.50 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ್ದಾರೆ. ಸುಮಾರು 100 ಕುಟುಂಬಗಳಿಗೆ ಆಹಾರ ಧಾನ್ಯ ನೀಡುವ ಗುರಿ ಹೊಂದಿರುವುದಾಗಿ ನೌಶಾದ್ ತಿಳಿಸಿದ್ದಾರೆ. ಮಹಾರಾಷ್ಟ್ರ ಆಟಗಾರರು ಮಾತ್ರವಲ್ಲದೆ, ವಿದರ್ಭದ ಆದಿತ್ಯ ಸರ್ವಾಟೆ, ಕೇರಳದ ಪ್ರಶಾಂತ್ ಪರಮೇಶ್ವರನ್, ಪಂಜಾಬ್ನ ಮನನ್ ವೊಹ್ರಾ, ಮಹಾರಾಷ್ಟ್ರದ ರುತುರಾಜ್ ಗಾಯಕ್ವಾಡ್, ಸತ್ಯಜಿತ್ ಭಚಾವ್ ಸೇರಿದಂತೆ ಹಲವರು ಈಗಾಗಲೆ ದೇಣಿಗೆ ನೀಡಿದ್ದಾರೆ.