

ಮಂಗಳೂರು: ಮನೆಯಂಗಳದಲ್ಲಿ ಆಡುವ ಕ್ರಿಕೆಟ್‌ನಲ್ಲಿ ಯುವತಿ ಹೊಡೆದ ಕವರ್ ಡ್ರೈವನ್ನು ‘ಇಎಸ್‌ಪಿಎನ್ ಕ್ರಿಕ್‌ಇನ್ಫೋ’ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಕಟಿಸಿದ್ದು, ಈ ಶಾಟ್‌ಗೆ ಕ್ರಿಕೆಟ್ ಪ್ರಿಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕೆರ್ವಾಶೆಯ ಜ್ಯೋತಿ ಪೂಜಾರಿ ಈ ಯುವತಿ. ಮುಂಬೈನಲ್ಲಿ ವಾಸವಾಗಿರುವ ಅವರು ಕರೊನಾ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಎರಡು ದಿನ ಹಿಂದೆ ಮನೆಯಂಗಳದಲ್ಲಿ ಕ್ರಿಕೆಟ್ ಆಡುವಾಗ ವಿಡಿಯೋ ಮಾಡಿದ್ದ ರಂಜಿತ್ ಪೂಜಾರಿ ತಮ್ಮ ಫೇಸ್‌ಬುಕ್ ಖಾತೆಗೆ ಪೋಸ್ಟ್ ಮಾಡಿದ್ದರು. ಅದನ್ನು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಗಮನಿಸಿ ತಮ್ಮ ಪೇಜ್‌ನಲ್ಲಿ ಪ್ರಕಟಿಸಿದೆ.
‘ಸ್ಟೆಪ್ಪಿಂಗ್ ಔಟ್ ಟು ದ ಲೆಗ್‌ಸೈಡ್ ಆ್ಯಂಡ್ ಸ್ಮಾೃಶಿಂಗ್ ಇಟ್ ಥ್ರೂದ ಕವರ್ಸ್’ ಎನ್ನುವ ಶೀರ್ಷಿಕೆ ಕೊಟ್ಟು ಇಂತಹ ಹೊಡೆತವನ್ನು ಹಿಂದೆ ಎಲ್ಲದರೂ ನೋಡಿದ್ದೀರಾ ಎಂದು ಕೇಳಿದೆ. ವೃತ್ತಿಪರ ಆಟಗಾರರಂತೆ ಯುವತಿ ಬಾಲನ್ನು ಕವರ್‌ಡ್ರೈವ್ ಮೂಲಕ ಬೌಂಡರಿಗೆ ಅಟ್ಟುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಕ್ರಿಕೆಟ್ ಪ್ರಿಯರಿಂದ ವಿವಿಧ ಕ್ರಿಕೆಟಿಗರನ್ನು ಹೋಲಿಕೆ ಮಾಡಿ ಪ್ರತಿಕ್ರಿಯೆ ಬಂದಿದೆ. ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಿಸಿದ್ದು, ಹಲವು ಮಂದಿ ಷೇರ್, ಕಮೆಂಟ್, ಲೈಕ್ ಮಾಡಿದ್ದಾರೆ.
ಮನೆಯಲ್ಲಿ ಟೈಮ್‌ಪಾಸ್ ಮಾಡಲು ಆಡುವಾಗ ರಂಜಿತ್ ವಿಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ನನ್ನ ಹೊಡೆತ ಇಷ್ಟೆಲ್ಲ ಫೇಮಸ್ ಆಗುತ್ತೆ ಎಂದು ಗೊತ್ತಿರಲಿಲ್ಲ. ಕ್ರಿಕೆಟ್ ಅಂದರೆ ಇಷ್ಟ, ಬಿಡುವಾದಾಗ ಮನೆಯವರೊಟ್ಟಿಗೆ ಆಡುತ್ತೇನೆ. ಧೋನಿ ಫೇವರಿಟ್ ಆಟಗಾರ. - ಜ್ಯೋತಿ ಪೂಜಾರಿ, ಯುವತಿ