ಕಾನ್‌ವೇ, ಡೆರಿಲ್ ಮಿಚೆಲ್ ಆಕರ್ಷಕ ಶತಕ: 2019ರ ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸಿದ ಕಿವೀಸ್

New Project (3) (1)
Published on

ಕಾಡೀಫ್ (ವೇಲ್ಸ್): ಎಡಗೈ ಆರಂಭಿಕ ಡೆವೋನ್ ಕಾನ್‌ವೇ (111* ರನ್,121 ಎಸೆತ, 13 ಬೌಂಡರಿ, 1 ಸಿಕ್ಸರ್) ಹಾಗೂ ಡೆರಿಲ್ ಮಿಚೆಲ್ (118*ರನ್, 91 ಎಸೆತ, 7 ಬೌಂಡರಿ, 7 ಸಿಕ್ಸರ್) ಆಕರ್ಷಕ ಶತಕಗಳ ಬಲದಿಂದ ಪ್ರವಾಸಿ ನ್ಯೂಜಿಲೆಂಡ್ ತಂಡ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು 8 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಇದು 2019ರ ವಿಶ್ವಕಪ್ ೈನಲ್ ಬಳಿಕ ಉಭಯ ತಂಡಗಳ ನಡುವೆ ಮೊದಲ ಏಕದಿನ ಮುಖಾಮುಖಿ ಎನಿಸಿದೆ. ಜಯದೊಂದಿಗೆ 2019ರ ಸೋಲಿಗೆ ಸೇಡು ತೀರಿಸಿಕೊಂಡ ಟಾಮ್ ಲಾಥಮ್ ಬಳಗ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್, ನಾಯಕ ಜೋಸ್ ಬಟ್ಲರ್ (72 ರನ್, 68 ಎಸೆತ, 5 ಬೌಂಡರಿ, 2 ಸಿಕ್ಸರ್) ಆಸರೆಯಲ್ಲಿ 6 ವಿಕೆಟ್‌ಗೆ 291 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಕಾನ್‌ವೇ-ಮಿಚೆಲ್ ಮುರಿಯದ 3ನೇ ವಿಕೆಟ್‌ಗೆ ನಡೆಸಿದ 180 ರನ್ ಜತೆಯಾಟದ ಲವಾಗಿ ನ್ಯೂಜಿಲೆಂಡ್ 45.4 ಓವರ್‌ಗಳಲ್ಲಿ 2 ವಿಕೆಟ್‌ಗೆ 297 ರನ್‌ಗಳಿಸಿ ಜಯಭೇರಿ ಬಾರಿಸಿತು. ಕಾನ್‌ವೇ-ಮಿಚೆಲ್ ಇಬ್ಬರಿಗೂ ಇದು 4ನೇ ಏಕದಿನ ಶತಕವಾಗಿದೆ.

ಇಂಗ್ಲೆಂಡ್: 6 ವಿಕೆಟ್‌ಗೆ 291 (ಬ್ರೂಕ್ 25, ಮಲಾನ್ 54, ರೂಟ್ 6, ಸ್ಟೋಕ್ಸ್ 52, ಬಟ್ಲರ್ 72, ಲಿವಿಂಗ್ ಸ್ಟೋನ್ 52, ವಿಲ್ಲಿ 21*, ಸೌಥಿ 71ಕ್ಕೆ2, ರಚಿನ್ ರವೀಂದ್ರ 48ಕ್ಕೆ 3). ನ್ಯೂಜಿಲೆಂಡ್: 45.4 ಓವರ್‌ಗಳಲ್ಲಿ 2 ವಿಕೆಟ್‌ಗೆ 297 (ಕಾನ್‌ವೇ 111*, ವಿಲ್ ಯಂಗ್ 29, ನಿಕೋಲ್ಸ್ 26, ಮಿಚೆಲ್ 118*, ವಿಲ್ಲಿ 32ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net