

Former Pakistan captain : ಏಷ್ಯಾಕಪ್‌ನಲ್ಲಿ ಭಾರತ ವಿರುದ್ಧ ಏಳು ವಿಕೆಟ್‌ಗಳ ಸೋಲಿನ ನಂತರ ಪಾಕಿಸ್ತಾನದ ಮಾಜಿ ನಾಯಕ ಯೂಸುಫ್ ಮೊಹಮ್ಮದ್ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್‌ರನ್ನು ನೇರ ಟಿವಿ ಕಾರ್ಯಕ್ರಮದಲ್ಲಿ ನಿಂದಿಸಿದ್ಧಾರೆ.
ಭಾರತ ಮತ್ತು ಪಾಕ್ ಪಂದ್ಯದಲ್ಲಿ ಹ್ಯಾಂಡ್ಶೇಕ್ ಮಾಡದೆ ಹೊರನಡೆದ ಸೂರ್ಯನನ್ನು ಯೂಸುಫ್ ಉದ್ದೇಶಪೂರ್ವಕವಾಗಿ ಯಾದವ್ ಹೆಸರನ್ನು ತಿರುಚಿ, ಪದೇ ಪದೇ ಹಂದಿ ಎಂದು ನಿಂದಿಸಿದ್ದಾರೆ. ಈ ಬಗ್ಗೆ ಒಬ್ಬ ಆಂಕರ್ ಭಾರತೀಯ ನಾಯಕನ ನಿಜವಾದ ಹೆಸರನ್ನು ನೆನಪಿಸಲು ಪ್ರಯತ್ನಿಸಿದ್ದಾರೆ. ಆದರೆ, ಯೂಸುಫ್ ಅದನ್ನು ನಿರ್ಲಕ್ಷಿಸಿ ನಿಂದನೀಯ ಭಾಷೆಯನ್ನು ಬಳಸುತ್ತಲೇ ಇದ್ದರು. ಇದನ್ನು ನೋಡಿದ ಮತ್ತೊಬ್ಬ ಆಂಕರ್ ಒಂದು ಮುಗುಳ್ನಗೆಯನ್ನು ಬೀರಿದ್ದಾರೆ.
ಭಾರತ ವಿರುದ್ಧದ ಪಂದ್ಯ ಮುಗಿದಾಗಿನಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮ್ಯಾಚ್ ರೆಫರಿಯ ಬಗ್ಗೆ ಜಿಂಬಾಬ್ವೆಯ ಮಾಜಿ ಅಂತರರಾಷ್ಟ್ರೀಯ ಆಟಗಾರ ಆಂಡಿ ಪೈಕ್ರಾಫ್ಟ್ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ. ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನ ನಾಯಕನಿಗೆ ಟಾಸ್ ಮಾಡುವಾಗ ಕೈಕುಲುಕದಂತೆ ಹೇಳಿದ್ದಕ್ಕಾಗಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸ್ಥಾಪಿಸಿದ ನೀತಿ ಸಂಹಿತೆಯ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕಾಗಿ ಪಾಕ್ ಕಿಡಿಕಾರಿದೆ.
ಪಾಕ್ ಪಂದ್ಯದಿಂದಲೂ ಸೂರ್ಯಕುಮಾರ್ ಎಲ್ಲರ ಗಮನ ಸೆಳೆಯುತ್ತಿದ್ದರು. ಸೂರ್ಯ ನಾಯಕತ್ವ ಉತ್ತಮವಾಗಿತ್ತು, ಪಾಕ್ ವಿರುದ್ಧದ ಪಂದ್ಯವನ್ನು ಗೆಲುವಿನ ಸಿಕ್ಸರ್‌ನೊಂದಿಗೆ ಮುಗಿಸಿದರು. ಪಂದ್ಯ ಮುಗಿದ ಬಳಿಕ ಎದುರಾಳಿಗಳಿಗೆ ಕೈಕುಲುಕದೆ ನೇರವಾಗಿ ಡ್ರೆಸ್ಸಿಂಗ್ ಕಡೆಗೆ ತೆರಳಿದರು. ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಈ ಗೆಲುವನ್ನು ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದರು. (ಏಜೆನ್ಸೀಸ್)