ನಾಲ್ಕರ ಘಟ್ಟಕ್ಕೇರಿದ ಪ್ರಿಯಾಂಶು: ಅಗ್ರ ಶ್ರೇಯಾಂಕಿತನಿಗೆ ಶಾಕ್ ನೀಡಿದ ಭಾರತೀಯ

New-Project-1-3
Published on

ಕಾಲ್‌ಗ್ರೇ: ಕೆನಡಾ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕನಸಿನ ಓಟವನ್ನು ಮುಂದುವರಿಸಿರುವ ಭಾರತದ ಯುವ ಷಟ್ಲರ್ ಪ್ರಿಯಾಂಶು ರಾಜಾವತ್ ಸೆಮಿೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಜೀವಂತವರಿಸಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ತ್ರಿಸಾ ಜೋಲಿ-ಗಾಯತ್ರಿ ಗೋಪಿಚಂದ್ ಜೋಡಿ ಕ್ವಾರ್ಟರ್‌ೈನಲ್‌ನಲ್ಲಿ ಹೋರಾಟ ಕೊನೆಗೊಳಿಸಿದೆ.

ಶನಿವಾರ ನಡೆದ ಕ್ವಾರ್ಟರ್‌ೈನಲ್‌ನಲ್ಲಿ 22 ವರ್ಷದ ಪ್ರಿಯಾಂಶು, ಅಗ್ರ ಶ್ರೇಯಾಂಕಿತ ಹಾಗೂ ವಿಶ್ವ ನಂ. 4 ಆಂಟೊನ್‌ಸೆನ್‌ಗೆ ಆಘಾತ ನೀಡಿದರು. ಬಿಡಬ್ಲುೃಎ್ ರ‌್ಯಾಂಕಿಂಗ್‌ನಲ್ಲಿನ ಅಗ್ರ 10ರೊಳಗಿನ ಆಟಗಾರರ ಎದುರು ಪ್ರಿಯಾಂಶುಗೆ ಇದು ಮೊದಲ ಗೆಲುವಾಗಿದೆ. ವಿಶ್ವ ನಂ.39 ಪ್ರಿಯಾಂಶು ಮುಂದಿನ ಪಂದ್ಯದಲ್ಲಿ ್ರಾನ್ಸ್‌ನ ಅಲೆಕ್ಸ್ ಲಾನಿರ್ ವಿರುದ್ಧ ಪ್ರಶಸ್ತಿ ಸುತ್ತಿಗೇರಲು ಹೋರಾಡಲಿದ್ದಾರೆ. ಪ್ರಿಯಾಂಶುಗೆ ಇದು ಎರಡನೇ ವರ್ಲ್ಡ್ ಟೂರ್ ಸೂಪರ್-500 ಸೆಮಿೈನಲ್ ಎನಿಸಿದೆ. ಮೂರನೇ ಶ್ರೇಯಾಂಕಿತ ತ್ರಿಸಾ- ಗಾಯತ್ರಿ ಜೋಡಿ 18-21, 21-19, 16-21 ರಿಂದ ಚೀನಾ ತೈಪೆಯ ಪೀ ಶಾನ್ ಹ್ಸೀಹ್- ಎನ್ ತ್ಸು ಹಂಗ್ ವಿರುದ್ಧ ನಿರಾಸೆ ಅನುಭವಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net