ಭಿನ್ನ ಪಕ್ಷದ ಕಾರ್ಯಕರ್ತರ ನಡುವಿನ ಕಿತ್ತಾಟ; ಚಾಕು ಇರಿತಕ್ಕೆ ಒಳಗಾದ ಕಾಂಗ್ರೆಸ್​ ಕಾರ್ಯಕರ್ತ!

stabbed
Published on

ದಾವಣಗೆರೆ: ಚುನಾವಣೆ ನಡೆದ ಬಳಿಕ ಇದೀಗ ಹೊನ್ನಾಳಿ ಕ್ಷೇತ್ರದಲ್ಲಿ ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ಕಿತ್ತಾಟ ಶುರುವಾಗಿದ್ದು ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತ ಒಬ್ಬರಿಗೆ ಚಾಕು ಇರಿಯಲಾಗಿದೆ.

ಸದ್ಯ ಗಾಯಾಳುವನ್ನು ಮಧು (24) ಎಂದು ಗುರುತಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರವೀಣ್, ಪ್ರಕಾಶ್, ತೀರ್ಥಲಿಂಗ ಸೇರಿ ಕೆಲ‌ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪ ಹೊರಿಸಲಾಗಿದೆ.

ಈ ಘಟನೆ ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿಯಲ್ಲಿ ನಡೆದಿದ್ದು ಹೊನ್ನಾಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶಾಂತನಗೌಡ ಗೆದ್ದ ಹಿನ್ನೆಲೆ ಗ್ರಾಮದಲ್ಲಿ‌ ಪಟಾಕಿ ಹಚ್ಚಿದ ವಿಚಾರಕ್ಕೆ ಜಗಳ ಶುರುವಾಗಿತ್ತು. ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net