ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಬಂಗಾರದ ಬೇಟೆಗೆ ಭಾರತೀಯರು ಸಿದ್ಧ

cwg web
Published on

ಬರ್ಮಿಂಗ್​ಹ್ಯಾಂ: ಟೋಕಿಯೊ ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ಸಾಧನೆ ತೋರಿದ ವಿಶ್ವಾಸದಲ್ಲಿ ಕಾಮನ್ವೆಲ್ತ್​ ಗೇಮ್ಸ್​ನಲ್ಲೂ ಭರ್ಜರಿ ನಿರ್ವಹಣೆ ದಾಖಲಿಸಲು ಭಾರತ ತಂಡ ಸಿದ್ಧವಾಗಿದೆ. ಆದರೆ ಈ ಬಾರಿ ಶೂಟಿಂಗ್​ ಸ್ಪರ್ಧೆಯನ್ನು ಕೈಬಿಟ್ಟಿರುವುದು ಮತ್ತು ಒಲಿಂಪಿಕ್ಸ್​ ಚಾಂಪಿಯನ್​ ಜಾವೆಲಿನ್​ ಥ್ರೋಪಟು ನೀರಜ್​ ಚೋಪ್ರಾ ಗಾಯದಿಂದಾಗಿ ಹಿಂದೆ ಸರಿದಿರುವುದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದರ ನಡುವೆಯೂ ಬ್ಯಾಡ್ಮಿಂಟನ್​ ತಾರೆಯರಾದ ಪಿವಿ ಸಿಂಧು, ಲಕ್ಷ್ಯ ಸೇನ್​, ಪೈಲ್ವಾನ್​ಗಳಾದ ರವಿಕುಮಾರ್​ ದಹಿಯಾ, ಭಜರಂಗ್​ ಪೂನಿಯಾ, ಬಾಕ್ಸರ್​ಗಳಾದ ನಿಖತ್​ ಜರೀನ್​, ಲವ್ಲಿನಾ ಬೋಗೋರ್ಹೈನ್​, ವೇಟ್​ಲ್ಟಿರ್​ ಮೀರಾಬಾಯಿ ಚಾನು ಮತ್ತಿತರರು ಭಾರತದ ಸ್ವರ್ಣ ಪದಕ ಬೇಟೆಗೆ ಬಲ ತುಂಬಲು ಸಜ್ಜಾಗಿದ್ದಾರೆ.

ಶೂಟಿಂಗ್​ ಇಲ್ಲದ ಹಿನ್ನಡೆ

ಕಳೆದ ಎರಡು ದಶಕಗಳಿಂದ ಭಾರತ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಭರ್ಜರಿ ನಿರ್ವಹಣೆಯನ್ನೇ ತೋರುತ್ತ ಬಂದಿದೆ. ಈ ಪೈಕಿ ಶೂಟರ್​ಗಳ ಕೊಡುಗೆಯೇ ಹೆಚ್ಚಿರುತ್ತಿತ್ತು. ಆದರೆ ಈ ಬಾರಿ ಆತಿಥೇಯ ರ್ಬಮಿಂಗ್​ಹ್ಯಾಂನಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಶೂಟಿಂಗ್​ ಸ್ಪರ್ಧೆಯನ್ನೇ ಕೈಬಿಡಲಾಗಿದೆ. ಇದು ಭಾರತಕ್ಕೆ ದೊಡ್ಡ ಹೊಡೆತ ನೀಡಿದೆ. ಕಳೆದ ಗೋಲ್ಡ್​ಕೋಸ್ಟ್​ ಗೇಮ್ಸ್​ನಲ್ಲಿ ಭಾರತೀಯ ಶೂಟರ್​ಗಳು 7 ಚಿನ್ನ, 4 ಬೆಳ್ಳಿ, 5 ಕಂಚು ಜಯಿಸಿದ್ದರು.

ಅಗ್ರ 5ರೊಳಗೆ ಸ್ಥಾನದ ಗುರಿ

ಭಾರತ ಹಿಂದಿನ ಆವೃತ್ತಿಗಳ ಪದಕಪಟ್ಟಿಯಲ್ಲಿ ಅಗ್ರ 3ರೊಳಗೆ ಸ್ಥಾನ ಪಡೆಯುವ ಗುರಿ ಇಟ್ಟುಕೊಳ್ಳುತ್ತಿತ್ತು. ಆದರೆ ಈ ಬಾರಿ ಶೂಟಿಂಗ್​ ಇಲ್ಲದ ಕಾರಣ, ಅಗ್ರ 5ರೊಳಗೆ ಸ್ಥಾನ ಸಂಪಾದಿಸಲು ಹೋರಾಡಬೇಕಾಗಿದೆ. 2002ರಿಂದಲೂ ಭಾರತ ಅಗ್ರ 5ರೊಳಗೆ ಸ್ಥಾನ ಗಳಿಸಿದೆ. ಕಳೆದ ಆವೃತ್ತಿಯಲ್ಲಿ ಭಾರತದ ಪದಕಗಳಿಕೆಯಲ್ಲಿ ಶೇ. 25 ಕೊಡುಗೆ ಶೂಟರ್​ಗಳದ್ದೇ ಆಗಿತ್ತು. ಈ ಬಾರಿ ಆ ಪದಕಗಳನ್ನು ಇತರ ಕ್ರೀಡೆಗಳಿಂದ ತುಂಬಿಕೊಳ್ಳಬೇಕಾಗಿದೆ. ಆಸ್ಟ್ರೆಲಿಯಾ ಮತ್ತು ಇಂಗ್ಲೆಂಡ್​ ಅಗ್ರಸ್ಥಾನಕ್ಕೆ ಪೈಪೋಟಿ ನಡೆಸಲಿವೆ. ಕೆನಡ, ನ್ಯೂಜಿಲೆಂಡ್​, ದಣ ಆಫ್ರಿಕಾ ನಂತರದ ಪ್ರಬಲ ತಂಡಗಳಾಗಿವೆ.

ಬ್ಯಾಡ್ಮಿಂಟನ್​ನಲ್ಲಿ ಸಿಂಧು ಸ್ವರ್ಣ ಲಕ್ಷ್ಯ

ಕಳೆದ ಆವೃತ್ತಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಭಾರತೀಯ ಬ್ಯಾಡ್ಮಿಂಟನ್​ ತಂಡ ಈ ಸಲವೂ ಅದನ್ನು ಪುನರಾವರ್ತಿಸುವ ಹಂಬಲದಲ್ಲಿದೆ. ಪಿವಿ ಸಿಂಧು ಮಹಿಳಾ ಸಿಂಗಲ್ಸ್​ ಮತ್ತು ಲಕ್ಷ್ಯ ಸೇನ್​, ಶ್ರೀಕಾಂತ್​ ಪುರುಷರ ಸಿಂಗಲ್ಸ್​ನಲ್ಲಿ ಸ್ವರ್ಣಕ್ಕೆ ಪೈಪೋಟಿ ನಡೆಸಲಿದ್ದಾರೆ.

*ಕಣದಲ್ಲಿರುವ ಕ್ರೀಡಾಪಟುಗಳು: 10 (5 ಮಹಿಳೆಯರು)

*ಪದಕ ಆಕಾಂಗಳು: ಪಿವಿ ಸಿಂಧು, ಲಕ್ಷ$್ಯ ಸೇನ್​, ಕೆ. ಶ್ರೀಕಾಂತ್​, ಚಿರಾಗ್​ ಶೆಟ್ಟಿ&ಸಾತ್ವಿಕ್​ ಸಾಯಿರಾಜ್​, ಅಶ್ವಿನಿ ಪೊನ್ನಪ್ಪ&ಸುಮೀತ್​ ರೆಡ್ಡಿ, ಮಿಶ್ರ ತಂಡ.

*ಸ್ಪರ್ಧಾದಿನ: ಜುಲೈ 29-ಆಗಸ್ಟ್​ 8

*ಪದಕ ನಿರೀಕ್ಷೆ: 5-6

*2018ರ ಸಾಧನೆ: 2 ಚಿನ್ನ, 3 ಬೆಳ್ಳಿ, 1 ಕಂಚು.

ಕುಸ್ತಿಯಲ್ಲಿ ಜಬರ್​ದಸ್ತ್​ ಟೀಮ್​

ಭಾರತದ ಪೈಲ್ವಾನರು 2010ರಿಂದಲೂ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಪ್ರಾಬಲ್ಯ ಸಾಧಿಸುತ್ತ ಬಂದಿದ್ದು, ಈ ಸಲವೂ ಅದನ್ನು ಮುಂದುವರಿಸುವ ನಿರೀೆ ಇದೆ. ಅದರಲ್ಲೂ ಶೂಟಿಂಗ್​ ಗೈರಿನಲ್ಲಿ ಈ ಬಾರಿ ಕುಸ್ತಿಯಲ್ಲೇ ಹೆಚ್ಚಿನ ಚಿನ್ನದ ನಿರೀಕ್ಷೆ ಇಡಲಾಗಿದೆ.

*ಕಣದಲ್ಲಿರುವ ಕ್ರೀಡಾಪಟುಗಳು: 12 (6 ಮಹಿಳೆಯರು)

*ಸ್ವರ್ಣ ಆಕಾಂಗಳು: ಭಜರಂಗ್​ ಪೂನಿಯಾ, ರವಿಕುಮಾರ್​ ದಹಿಯಾ, ದೀಪಕ್​ ಪೂನಿಯಾ, ವಿನೇಶ್​ ಪೋಗಟ್​, ಸಾಕ್ಷಿ ಮಲಿಕ್​, .

*ಸ್ಪರ್ಧಾದಿನ: ಆಗಸ್ಟ್​ 5-6

*ಪದಕ ನಿರೀಕ್ಷೆ: 10-12

*2018ರ ಸಾಧನೆ: 5 ಚಿನ್ನ, 3 ಬೆಳ್ಳಿ, 4 ಕಂಚು.

ಬಾಕ್ಸಿಂಗ್​ನಲ್ಲಿ ಭರ್ಜರಿ ಅವಕಾಶ

ಲವ್ಲಿನಾ ಅವರ ಒಲಿಂಪಿಕ್ಸ್​ ಪದಕ ಮತ್ತು ನಿಖತ್​ ಜರೀನ್​ ಅವರ ವಿಶ್ವ ಚಾಂಪಿಯನ್​ ಪಟ್ಟದ ಬಳಿಕ ಬಾಕ್ಸಿಂಗ್​ನಲ್ಲಿ ಭಾರತದ ನಿರೀೆಗಳು ಹೆಚ್ಚಿವೆ. ಪುರುಷರ ವಿಭಾಗದಲ್ಲೂ ಅನುಭವಿಗಳ ಬಲವಿದೆ.

*ಕಣದಲ್ಲಿರುವ ಕ್ರೀಡಾಪಟುಗಳು: 12 (4 ಮಹಿಳೆಯರು)

*ಪದಕ ಆಕಾಂಗಳು: ಲವ್ಲಿನಾ ಬೋಗೋರ್ಹೈನ್​, ನಿಖತ್​ ಜರೀನ್​, ಅಮಿತ್​ ಪಾಂಗಲ್​, ಶಿವ ಥಾಪಾ.

*ಸ್ಪರ್ಧಾದಿನ: ಜುಲೈ 29-ಆಗಸ್ಟ್​ 7

*ಪದಕ ನಿರೀಕ್ಷೆ: 8-9

*2018ರ ಸಾಧನೆ: 3 ಚಿನ್ನ, 3 ಬೆಳ್ಳಿ, 3 ಕಂಚು.

ವೇಟ್​ಲಿಫ್ಟಿಂಗ್​ನಲ್ಲಿ ಮೀರಾ ಸಾರಥ್ಯ

ಕಳೆದ ಆವೃತ್ತಿಯ ವೇಟ್​ಲಿಫ್ಟಿಂಗ್​ ಸ್ಪರ್ಧೆಯಲ್ಲಿ ಭಾರತವೇ ಅಗ್ರಸ್ಥಾನ ಪಡೆದಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಪದಕಗಳ ನಿರೀಕ್ಷೆ ಇಡಲಾಗಿದೆ. ಮೀರಾಬಾಯಿ ಚಾನು ಅವರ ಟೋಕಿಯೊ ಒಲಿಂಪಿಕ್ಸ್​ ರಜತ ಸಾಧನೆ ಹೆಚ್ಚಿನ ಸ್ಫೂರ್ತಿ ತುಂಬಿದೆ.

*ಕಣದಲ್ಲಿರುವ ಕ್ರೀಡಾಪಟುಗಳು: 15 (7 ಮಹಿಳೆಯರು)

*ಪದಕ ಆಕಾಂಗಳು: ಮೀರಾಬಾಯಿ ಚಾನು, ಪೂನಂ ಯಾದವ್​, ಜೆರೆಮಿ ಲಾಲ್ರಿನುಂಗ, ಗುರುರಾಜ ಪೂಜಾರಿ.

*ಸ್ಪರ್ಧಾದಿನ: ಜುಲೈ 30-ಆಗಸ್ಟ್​ 3

*ಪದಕ ನಿರೀಕ್ಷೆ: 9-10

*2018ರ ಸಾಧನೆ: 5 ಚಿನ್ನ, 2 ಬೆಳ್ಳಿ, 2 ಕಂಚು.

ಅಥ್ಲೆಟಿಕ್ಸ್​ನಲ್ಲಿ ನೀರಜ್​ ಇಲ್ಲದ ಹಿನ್ನಡೆ

ಅಥ್ಲೆಟಿಕ್ಸ್​ನಲ್ಲಿ ಬಲಿಷ್ಠವಾಗಿರುವ ಜಮೈಕಾ ಮತ್ತು ಆಫ್ರಿಕಾದ ಕೆಲ ದೇಶಗಳ ಉಪಸ್ಥಿತಿಯಿಂದಾಗಿ ಭಾರತ ಹೆಚ್ಚಿನ ಪದಕ ನಿರೀೆ ಇಟ್ಟುಕೊಳ್ಳುವಂತಿಲ್ಲ. ಚಿನ್ನದ ಹುಡುಗ ನೀರಜ್​ ಚೋಪ್ರಾ ಗೈರು ಇನ್ನಷ್ಟು ಹಿನ್ನಡೆ ತಂದಿದೆ.

*ಕಣದಲ್ಲಿರುವ ಕ್ರೀಡಾಪಟುಗಳು: 43 (19 ಮಹಿಳೆಯರು)

*ಪದಕ ಆಕಾಂಗಳು: ಶ್ರೀಶಂಕರ್​ (ಲಾಂಗ್​ಜಂಪ್​), ಅನ್ನುರಾಣಿ (ಜಾವೆಲಿನ್​), ಅವಿನಾಶ್​ ಸಾಬ್ಲೆ (ಸ್ಟೀಪಲ್​ಚೇಸ್​), ಸೀಮಾ ಪೂನಿಯಾ, ನವಜೀತ್​ ದಿಲ್ಲೋನ್​ (ಡಿಸ್ಕಸ್​).

*ಸ್ಪರ್ಧಾದಿನ: ಆಗಸ್ಟ್​ 2-7

*ಪದಕ ನಿರೀಕ್ಷೆ: 2-3

*2018ರ ಸಾಧನೆ: 1 ಚಿನ್ನ, 1 ಬೆಳ್ಳಿ, 1 ಕಂಚು.

ಟೇಬಲ್​ ಟೆನಿಸ್​ನಲ್ಲಿ ಮನಿಕಾ ಮಂತ್ರ

ಕಳೆದ ಆವೃತ್ತಿಯಲ್ಲಿ ಪವರ್​ಹೌಸ್​ ಸಿಂಗಾಪುರವನ್ನು ಮೀರಿಸಿ ಭಾರತವೇ ಪದಕಪಟ್ಟಿಯಲ್ಲಿ ಮೇಲುಗೈ ಸಾಧಿಸಿತ್ತು. ಅಲ್ಲಿ ಪದಕ ಗೆದ್ದ ಎಲ್ಲರೂ ಈ ಸಲವೂ ಸ್ಪರ್ಧೆಯಲ್ಲಿದ್ದು, ಅದೇ ನಿರ್ವಹಣೆ ಮರುಕಳಿಸುವ ಛಲದಲ್ಲಿದ್ದಾರೆ.

*ಕಣದಲ್ಲಿರುವ ಕ್ರೀಡಾಪಟುಗಳು: 12 (7 ಮಹಿಳೆಯರು)

*ಪದಕ ಆಕಾಂಗಳು: ಮನಿಕಾ ಬಾತ್ರಾ, ಶರತ್​ ಕಮಲ್​, ಜಿ. ಸತ್ಯನ್​.

*ಸ್ಪರ್ಧಾದಿನ: ಜುಲೈ 29-ಆಗಸ್ಟ್​ 8

*ಪದಕ ನಿರೀಕ್ಷೆ: 6-8

*2018ರ ಸಾಧನೆ: 3 ಚಿನ್ನ, 2 ಬೆಳ್ಳಿ, 3 ಕಂಚು.

ಹಾಕಿ

ಕಳೆದ ಆವೃತ್ತಿಯಲ್ಲಿ ಹಾಕಿ ತಂಡಗಳು ಬರಿಗೈಯಲ್ಲಿ ಮರಳಿದ್ದವು. ಆದರೆ, ಟೋಕಿಯೊ ಒಲಿಂಪಿಕ್ಸ್​ನಲ್ಲಿ ತೋರಿದ ಅಮೋ ನಿರ್ವಹಣೆಯ ಬಳಿಕ ಈ ಬಾರಿ ಪದಕದ ನಿರೀೆ ಮೂಡಿದೆ. ಏಷ್ಯಾಡ್​ ಮುಂದೂಡಿಕೆಯಿಂದಾಗಿ ಬಲಿಷ್ಠ ತಂಡವೇ ಕಣಕ್ಕಿಳಿಯುತ್ತಿದೆ. ಆಸ್ಟ್ರೆಲಿಯಾ, ಇಂಗ್ಲೆಂಡ್​, ಪಾಕಿಸ್ತಾನ, ನ್ಯೂಜಿಲೆಂಡ್​, ದಣ ಆಫ್ರಿಕಾ ಸವಾಲಾಗಲಿದೆ.

*ಕಣದಲ್ಲಿರುವ ಕ್ರೀಡಾಪಟುಗಳು: 36 (18 ಮಹಿಳೆಯರು)

*ಸ್ಪರ್ಧಾದಿನ: ಜುಲೈ 29-ಆಗಸ್ಟ್​ 8

*ಪದಕ ನಿರೀಕ್ಷೆ: 2

*2018ರ ಸಾಧನೆ: -

ಸ್ಕ್ವಾಷ್

ಕಳೆದ 15 ವರ್ಷಗಳಿಂದ ಭಾರತೀಯ ಸ್ಕಾ$$$್ವಷ್​ ತಾರೆಯರೆನಿಸಿರುವ ದೀಪಿಕಾ ಪಲ್ಲಿಕಲ್​, ಜೋಶ್ನಾ ಚಿನ್ನಪ್ಪ ಮತ್ತು ಸೌರವ್​ ಘೋಷಾಲ್​ ಮೇಲೆಯೇ ಈ ಸಲವೂ ನಿರೀಕ್ಷೆಗಳಿವೆ. 14 ವರ್ಷದ ಆಟಗಾರ್ತಿ ಅನಾಹತ್​ ಸಿಂಗ್​ ಈ ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿರುವ ಭಾರತದ ಕಿರಿಯ ಕ್ರೀಡಾಪಟುವಾಗಿದ್ದಾರೆ.

*ಕಣದಲ್ಲಿರುವ ಕ್ರೀಡಾಪಟುಗಳು: 9 (4 ಮಹಿಳೆಯರು)

*ಪದಕ ಆಕಾಂಗಳು: ದೀಪಿಕಾ ಪಲ್ಲಿಕಲ್​, ಜೋಶ್ನಾ ಚಿನ್ನಪ್ಪ, ಸೌರವ್​ ಘೋಷಾಲ್​.

*ಸ್ಪರ್ಧಾದಿನ: ಜುಲೈ 29-ಆಗಸ್ಟ್​ 8

*ಪದಕ ನಿರೀಕ್ಷೆ: 2-3

*2018ರ ಸಾಧನೆ: 2 ಬೆಳ್ಳಿ

ಮಹಿಳಾ ಕ್ರಿಕೆಟ್​ ಹೊಸ ಸೇರ್ಪಡೆ

1998ರ ಬಳಿಕ ಅಂದರೆ 24 ವರ್ಷಗಳ ಬಳಿಕ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಕ್ರಿಕೆಟ್​ ಸ್ಪರ್ಧೆ ನಡೆಯಲಿದೆ. ಆದರೆ ಇದು ಟಿ20 ಕ್ರಿಕೆಟ್​ ಮತ್ತು ಮಹಿಳೆಯರಿಗೆ ಸೀಮಿತವಾದುದು. ಒಲಿಂಪಿಕ್ಸ್​ಗೆ ಕ್ರಿಕೆಟ್​ ಸೇರ್ಪಡೆ ದೃಷ್ಟಿಯಿಂದ ಇದು ಮಹತ್ವದ ಕ್ರಮ. ಹರ್ಮಾನ್​ಪ್ರೀತ್​ ಕೌರ್​ ಸಾರಥ್ಯದ ಭಾರತ ತಂಡಕ್ಕೆ ಆಸ್ಟ್ರೆಲಿಯಾ, ಇಂಗ್ಲೆಂಡ್​, ನ್ಯೂಜಿಲೆಂಡ್​ನಿಂದ ಪದಕಕ್ಕೆ ಪ್ರಮುಖ ಸವಾಲು ಎದುರಾಗಲಿದೆ. ಶುಕ್ರವಾರ ಆಸೀಸ್​ ವಿರುದ್ಧ ಆಡುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ. ಬಳಿಕ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net