ಕಡೆಗೂ ಕ್ರೀಡಾಭಿಮಾನಿಗಳ ಬಯಕೆ ನುಚ್ಚುನೂರು! ಕಾಮನ್​ವೆಲ್ತ್​ ಕ್ರೀಡಾಕೂಟದಿಂದ 10 ಕ್ರೀಡೆಗೆ ಕೊಕ್​ | Commonwealth Games

commonwealth games
Published on

ನವದೆಹಲಿ: ಸ್ಕಾಟ್ಲೆಂಡ್​ನ ಗ್ಲಾಸ್ಗೋದಲ್ಲಿ ಆಯೋಜಿಸಲಾಗಿರುವ 2026ರ ಕಾಮನ್​ವೆಲ್ತ್​ ಕ್ರೀಡಾಕೂಟದಿಂದ ಇದೀಗ ದಿಢೀರ್​ ಎಂಬಂತೆ ಕ್ರಿಕೆಟ್, ಹಾಕಿ ಸೇರಿದಂತೆ ಬರೋಬ್ಬರಿ ಹತ್ತು ಕ್ರೀಡೆಯನ್ನು ಕಿತ್ತುಹಾಕಲಾಗಿದೆ. ಪ್ರತ್ಯೇಕವಾಗಿ ಈ ಆಟಗಳನ್ನು ಕಾಮನ್​ವೆಲ್ತ್​​ ಗೇಮ್ಸ್​ನಿಂದ ಹೊರಗಿಟ್ಟಿರುವುದು ಇದೀಗ ಆಯಾ ಕ್ರೀಡೆಯ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿದೆ.

ಈ ಹಿಂದೆ ಬಹುನಿರೀಕ್ಷಿತ ಕ್ರಿಕೆಟ್​ ಆಟವನ್ನು ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಸೇರಿಸಿದ್ದರಿಂದ ಕ್ರಿಕೆಟ್ ಪ್ರಿಯರು ಭಾರೀ ಖುಷ್ ಆಗಿದ್ದರು. ಆದರೆ, ಇದೀಗ ಈ ಆಟದ ಜತೆಗೆ ಹಾಕಿ, ಟ್ರಯಥ್ಲಾನ್, ಬ್ಯಾಡ್ಮಿಂಟನ್, 20-20 ಕ್ರಿಕೆಟ್, ಸ್ಕ್ವಾಷ್ ಮತ್ತು ಡೈವಿಂಗ್ ಸೇರಿದಂತೆ ಇತರ ಕ್ರೀಡೆಗಳನ್ನು ಗೇಮ್ಸ್​ ಪಟ್ಟಿಯಿಂದ ಕೈಬಿಡಲಾಗಿದೆ. ನಾಲ್ಕು ಸ್ಥಳಗಳಲ್ಲಿ ಈಗಾಗಲೇ ನಿಗದಿಪಡಿಸಲಾಗಿರುವ 10 ಕ್ರೀಡೆಗಳು ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಅಥ್ಲೆಟಿಕ್ಸ್ ಮತ್ತು ಈಜು ಕಡ್ಡಾಯವಾಗಿದ್ದು, ಟ್ರ್ಯಾಕ್ ಸೈಕ್ಲಿಂಗ್, ಜಿಮ್ನಾಸ್ಟಿಕ್ಸ್, ನೆಟ್‌ಬಾಲ್, ವೇಟ್​ಲಿಫ್ಟಿಂಗ್, ಬಾಕ್ಸಿಂಗ್, ಜೂಡೋ, ಬೌಲ್ಸ್ ಮತ್ತು 3×3 ಬ್ಯಾಸ್ಕೆಟ್‌ಬಾಲ್ ಕ್ರೀಡೆಗಳು ಇರಲಿದೆ. ಜುಲೈ 23ರಿಂದ ಆಗಸ್ಟ್ ತಿಂಗಳವರೆಗೆ ಈ ಕ್ರೀಡಾಕೂಟ ನಡೆಯಲಿದೆ. ಇಲ್ಲಿ ಯಾವ ಕ್ರೀಡೆಗಳನ್ನು ಸೇರಿಸಬೇಕೆಂದು ನಿರ್ಧರಿಸುವುದು ಅಷ್ಟು ಸುಲಭವಾದ ಕೆಲಸವಾಗಿರಲಿಲ್ಲ ಎಂದು ಕಾಮನ್ವೆಲ್ತ್ ಗೇಮ್ಸ್ ಸ್ಕಾಟ್ಲೆಂಡ್ ಅಧ್ಯಕ್ಷರಾದ ಇಯಾನ್ ರೀಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net