19ನೇ ವಯಸ್ಸಿನಲ್ಲೇ ಯುಎಸ್​ ಓಪನ್​ ಗೆದ್ದು ದಾಖಲೆ ಬರೆದ ಕೋಕೋ ಗೌಫ್​

coco web
Published on

ನ್ಯೂಯಾರ್ಕ್​: ಆತಿಥೇಯ ಅಮೆರಿಕದ 19 ವರ್ಷದ ಆಟಗಾರ್ತಿ ಕೋಕೋ ಗೌಫ್​ ಯುಎಸ್​ ಓಪನ್​ ಟೆನಿಸ್​ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ತವರು ಅಂಗಣದಲ್ಲೇ ಚೊಚ್ಚಲ ಗ್ರಾಂಡ್​ ಸ್ಲಾಂ ಕಿರೀಟ ಒಲಿಸಿಕೊಂಡಿರುವ ಗೌಫ್​, ಸೆರೇನಾ ವಿಲಿಯಮ್ಸ್​ (1999) ಬಳಿಕ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ್ತಿ ಎನಿಸಿದ್ದಾರೆ. ಮೊಟ್ಟಮೊದಲ ಬಾರಿಗೆ ವಿಶ್ವ ನಂ. 1 ಪಟ್ಟಕ್ಕೇರುತ್ತಿರುವ ಬೆಲಾರಸ್​ ತಾರೆ ಅರಿನಾ ಸಬಲೆಂಕಾ, ಪ್ರಶಸ್ತಿ ಗೆಲುವಿನೊಂದಿಗೆ ಈ ಸಂಭ್ರಮವನ್ನು ದ್ವಿಗುಣಗೊಳಿಸಲು ವಿಫಲರಾದರು.

ಆರ್ಥರ್​ ಆಶ್​ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ 6ನೇ ಶ್ರೇಯಾಂಕಿತೆ ಕೋಕೋ ಗೌಫ್​ 2-6, 6-3, 6-2ರಿಂದ ದ್ವಿತೀಯ ಶ್ರೇಯಾಂಕಿತೆ ಅರಿನಾ ಸಬಲೆಂಕಾಗೆ ಸೋಲುಣಿಸಿದರು. 25 ವರ್ಷದ ಸಬಲೆಂಕಾ ಮೊದಲ ಸೆಟ್​ ಗೆದ್ದು ಬೀಗಿದರೂ, ನಂತರದ 2 ಸೆಟ್​ಗಳಲ್ಲಿ ಗೌಫ್​ ತಿರುಗೇಟು ನೀಡಿದರು. 2 ಗಂಟೆ 6 ನಿಮಿಷಗಳ ಹೋರಾಟದಲ್ಲಿ ಗೌಫ್​ ಗೆಲುವು ಒಲಿಸಿಕೊಂಡರು. ಆಸ್ಟ್ರೆಲಿಯನ್​ ಓಪನ್​ ಚಾಂಪಿಯನ್​ ಸಬಲೆಂಕಾ ವರ್ಷದ 2ನೇ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲ್ಲುವ ಯತ್ನದಲ್ಲಿ ನಿರಾಸೆ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net