

ಲಂಡನ್: ಮಾಜಿ ಚಾಂಪಿಯನ್ ಎಲೆನಾ ರೈಬಕಿನಾ, 21ನೇ ಶ್ರೇಯಾಂಕಿತೆ ಎಲೆನಾ ಸ್ವಿಟೋಲಿನಾ, ಅಮೆರಿಕದ ಎಮ್ಮಾ ನವೊರಾ, ಅರ್ಹತಾ ಸುತ್ತಿನ ಆಟಗಾರ್ತಿ ಲುಲು ಸುನ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಕ್ವಾರ್ಟಫೈನಲ್‌ಗೇರಿದ್ದಾರೆ. ಪುರುಷರ ವಿಭಾಗದಲ್ಲಿ 13ನೇ ಶ್ರೇಯಾಂಕಿತ ಟಾಮಿ ಪೌಲ್, ರಷ್ಯಾದ ಡೆನಿಯಲ್ ಮೆಡ್ವೆಡೇವ್, ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೊರ್, ಇಟಲಿಯ ಲೊರೆಂಜೊ ಮುಸೆಟ್ಟಿ ಎಂಟರಘಟ್ಟಕ್ಕೇರಿದ ಪ್ರಮುಖರೆನಿಸಿದ್ದಾರೆ. ಎರಡನೇ ಶ್ರೇಯಾಂಕಿತೆ ಕೋಕೋ ಗ್ೌ ಹಾಗೂ ತವರಿನ ಫೇವರಿಟ್ ಎಮ್ಮಾ ರಾಡುಕಾನಿ 4ನೇ ಸುತ್ತಿನಲ್ಲಿ ಸೋತು ನಿರಾಸೆ ಕಂಡಿದ್ದಾರೆ.
ಸೋಮವಾರ ಸೆಂಟರ್ ಕೋರ್ಟ್‌ನಲ್ಲಿ ನಡೆದ 4ನೇ ಸುತ್ತಿನ ಪಂದ್ಯದಲ್ಲಿ 4ನೇ ಶ್ರೇಯಾಂಕಿತೆ , ಕಜಾಕಿಸ್ತಾನದ ಎಲೆನಾ ರೈಬಕಿನಾ 6-3,3-0 ರಿಂದ ಮುನ್ನಡೆಯಲ್ಲಿದ್ದಾಗ ಅನ್ನಾ ಕಲಿನ್ಸ್ಕಾಯಾ ಗಾಯದ ಸಮಸ್ಯೆಯಿಂದ ಪಂದ್ಯವನ್ನು ತ್ಯಜಿಸಿದರು. ಇದರೊಂದಿಗೆ ಸತತ ಮೂರನೇ ವರ್ಷವೂ ರೈಬಕಿನಾ ಹಸಿರು ಅಂಕಣದಲ್ಲಿ ಎಂಟರಘಟ್ಟಕ್ಕೇರಿದ ಸಾಧನೆ ಮಾಡಿದರು. 2022ರಲ್ಲಿ ರೈಬಕಿನಾ ಚಾಂಪಿಯನ್ ಆಗಿದ್ದರು. ರೈಬಕಿನಾ ವೃತ್ತಿಜೀವನದ 18ನೇ ವಿಂಬಲ್ಡನ್ ಗೆಲುವು ಇದಾಗಿದ್ದು,2ರಲ್ಲಿ ಮಾತ್ರ ಸೋಲು ಅನುಭವಿಸಿದ್ದಾರೆ.
ಕಳೆದ ಆವೃತ್ತಿಯ ಸೆಮಿೈನಲಿಸ್ಟ್ ಯೂಕ್ರೇನ್‌ನ ಎಲೆನಾ ಸ್ವಿಟೋಲಿನಾ 6-2,6-1 ನೇರ ಸೆಟ್‌ಗಳಿಂದ ಚೀನಾದ ವಾಂಗ್ ಕ್ಸಿ ನ್ಯು ಎದುರು ಸುಲಭ ಗೆಲುವು ದಾಖಲಿಸಿದರು. 55 ನಿಮಿಷದಲ್ಲಿ ಗೆಲುವು ದಕ್ಕಿಸಿಕೊಂಡ ಸ್ವಿಟೋಲಿನಾ ಮುಂದಿನ ಸುತ್ತಿನಲ್ಲಿ ರೈಬಕಿನಾ ವಿರುದ್ಧ ಸೆಣಸಲಿದ್ದು, ಹಿಂದಿನ 4 ಮುಖಾಮುಖಿಗಳಲ್ಲಿ 2-2 ಸಮಬಲ ಸಾಧಿಸಿದ್ದಾರೆ. 10 ವರ್ಷಗಳಲ್ಲಿ ಸ್ವಿಟೋಲಿನಾ ಆಡಲಿರುವ 11ನೇ ಗ್ರಾಂಡ್ ಸ್ಲಾಂ ಕ್ವಾರ್ಟರ್‌ೈನಲ್ ಇದಾಗಿದ್ದು, ಸೆರೇನಾ ವಿಲಿಯಮ್ಸ್ (16), ಸಿಮೊನ್ ಹ್ಯಾಲೆಪ್ (13) ನಂತರದ ಸ್ಥಾನದಲ್ಲಿದ್ದಾರೆ.
ಭಾನುವಾರ ತಡರಾತ್ರಿ ನಡೆದ ಮಹಿಳಾ ಸಿಂಗಲ್ಸ್‌ನ 4ನೇ ಸುತ್ತಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತೆ, ಅಮೆರಿಕದ ಕೋಕೋ ಗ್ೌ ಆಘಾತ ಎದುರಿಸಿದರು. ಹಾಲಿ ಯುಎಸ್ ಓಪನ್ ಚಾಂಪಿಯನ್ ಕೋಕೋ ಗ್ೌ 4-6, 3-6 ನೇರ ಸೆಟ್‌ಗಳಿಂದ ದೇಶಬಾಂಧವೆ ಎಮ್ಮಾ ನವೊರಾ ಎದುರು ಪರಾಭವಗೊಂಡರು. ಇದರೊಂದಿಗೆ ಹಸಿರು ಅಂಕಣದಲ್ಲಿ ಪ್ರಶಸ್ತಿ ಜಯಿಸುವ ಗ್ೌ ಕನಸು ಭಗ್ನಗೊಂಡಿದೆ. ಇದರುವರೆಗೂ ಗ್ೌ ವಿಂಬಲ್ಡನ್‌ನಲ್ಲಿ ಕ್ವಾರ್ಟರ್‌ೈನಲ್‌ಗೇರುವಲ್ಲಿ ವಿಲರಾಗಿದ್ದಾರೆ.ಗ್ೌ ನಿರ್ಗಮನದೊಂದಿಗೆ ಟೂರ್ನಿಯಲ್ಲಿ ಅಗ್ರ 10ರೊಳಗಿನ ಇಬ್ಬರೂ ಆಟಗಾರ್ತಿಯರು ಮಾತ್ರ ಕ್ವಾರ್ಟರ್‌ೈನಲ್‌ಗೇರಿದಂತಾಗಿದೆ. 19ನೇ ಶ್ರೇಯಾಂಕಿತೆ ಎಮ್ಮಾ ನವೊರಾಗೆ ಇದು ಮೊದಲ ಗ್ರಾಂಡ್ ಸ್ಲಾಂ ಕ್ವಾರ್ಟರ್‌ೈನಲ್ ಎನಿಸಿದೆ.
ಇನ್ನೊಂದು ಪಂದ್ಯದಲ್ಲಿ ಆತಿಥೇಯರ ೇವರಿಟ್ 21 ವರ್ಷದ ಎಮ್ಮಾ ರಾಡುಕಾನು ಅವರನ್ನು ಅರ್ಹತಾ ಸುತ್ತಿನ ಆಟಗಾರ್ತಿ ಲುಲು ಸುನ್ ಟೂರ್ನಿಯಿಂದ ಹೊರದಬ್ಬಿದರು. ಸುನ್ 6-2, 5-7, 6-2 ಮೂರು ಸೆಟ್‌ಗಳ ಕಾದಾಟದಲ್ಲಿ ಗೆಲುವು ದಕ್ಕಿಸಿಕೊಂಡರು. ಇದರೊಂದಿಗೆ ಸುನ್ ಚೊಚ್ಚಲ ಬಾರಿ ಗ್ರಾಂಡ್ ಸ್ಲಾಂನಲ್ಲಿ ಎಂಟರಘಟ್ಟಕ್ಕೇರಿದರು.
ಉಪಾಂತ್ಯಕ್ಕೆ ಮಿನೊರ್.
ಪುರುಷರ ಸಿಂಗಲ್ಸ್‌ನಲ್ಲಿ ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೋವ್ ಮೊದಲ ಸೆಟ್‌ನ 4ನೇ ಸುತ್ತಿನಲ್ಲಿ ಗಾಯದಿಂದ ಪಂದ್ಯ ತ್ಯಜಿಸಿದರು. ಇದರಿಂದ 5ನೇ ಶ್ರೇಯಾಂಕಿತ ಡೆನಿಲ್ ಮೆಡ್ವೆಡೇವ್ 4ನೇ ಸುತ್ತಿನಲ್ಲಿ ವಾಕ್ ಓವರ್ ಪಡೆದರು. 9ನೇ ಶ್ರೇಯಾಂಕಿತ ಅಲೆಕ್ಸ್ ಡಿ ಮಿನೊರ್ 6-2, 6-4, 4-6,6-3 ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಅರ್ಥರ್ ೈಲ್ಸ್ ಅವರನ್ನು ಮಣಿಸಿದರು.