

ನೋಯ್ಡಾ : ಪಂದ್ಯದ ದ್ವಿತೀಯಾರ್ಧದಲ್ಲಿಕೌಶಲಯುತ ಆಟ ತೋರಿದ ಯು.ಪಿ. ಯೋಧಾಸ್ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ 81ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ನಾಲ್ಕು ಅಂಕಗಳಿಂದ ಸೋಲಿಸಿತು. ಇದರೊಂದಿಗೆ ಟೂರ್ನಿಯಲ್ಲಿ7ನೇ ಜಯ ದಾಖಲಿಸಿದ ಯೋಧಾಸ್, ಒಟ್ಟಾರೆ 43 ಅಂಕಗಳನ್ನು ಕಲೆಹಾಕಿತು.
ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಯೋಧಾಸ್ ತಂಡ 33-29 ಅಂಕಗಳಿಂದ ಜೈಪುರ ತಂಡವನ್ನು ಪರಾಭವಗೊಳಿಸಿತು. ಯೋಧಾಸ್ ಪರ ಗಗನ್ ಗೌಡ (6 ಅಂಕ), ಭವಾನಿ ರಜ್‌ಪೂತ್ (6), ಸುಮಿತ್ (5) ಮತ್ತು ಹಿತೇಶ್ (4) ಮಿಂಚಿದರೆ, ಪ್ಯಾಂಥರ್ಸ್ ತಂಡದ ಪರ ನಾಯಕ ಅರ್ಜುನ್ ದೇಶ್ವಾಲ್ (6), ನೀರಜ್ ನರ್ವಾಲ್ (5) ಮತ್ತು ಲಕಿ (4) ಹೋರಾಡಿದರು.ಕೊನೆ ಕ್ಷ ಣದ ಹೋರಾಟವನ್ನು ಬಳಸಿಕೊಳ್ಳುವಲ್ಲಿಎಡವಿದ ಜೈಪುರ, 6ನೇ ಸೋಲಿಗೆ ಒಳಗಾಯಿತು.
ಪಂದ್ಯ ಮುಗಿಯಲು ಹತ್ತು ನಿಮಿಷಗಳು ಬಾಕಿ ಇರುವಾಗ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಹೋರಾಟ ಕಂಡು ಬಂದ ಕಾರಣ ಎರಡೂ ತಂಡಗಳು ಕಾರ್ಯತಂತ್ರಗಳ ಮೊರೆ ಹೋದವು. ಆದರೆ ಅಂಕ ಬಿಟ್ಟುಕೊಡದಿರಲು ಇತ್ತಂಡಗಳು ಯತ್ನಿಸಿದ ಕಾರಣ ರೇಡರ್‌ಗಳು ಪದೇ ಪದೇ ಬರಿಗೈಯಲ್ಲಿವಾಪಸ್ ಆದರು. ಪಂದ್ಯ ಮುಗಿಯಲು 3 ನಿಮಿಷಗಳಿದ್ದಾಗ ಯೋಧಾಸ್ 3 (29-26) ಅಂಕಗಳ ಅಂತರ ಕಾಯ್ದುಕೊಂಡು ಪ್ಯಾಂಥರ್ಸ್ ಮೇಲೆ ಒತ್ತಡ ಹೇರುವ ಪ್ರಯತ್ನವನ್ನು ಮುಂದುವರಿಸಿತು.
ಈ ಮಧ್ಯೆ ನಾಲ್ಕು ಅಂಕ ಗಳಿಸಿದ ವೇಳೆ ಯೋಧಾಸ್ ತಂಡದ ನಾಯಕ ಸುಮಿತ್ ಲೀಗ್‌ನಲ್ಲಿ300 ಟ್ಯಾಕಲ್ ಪಾಯಿಂಟ್ಸ್ ಕಲೆಹಾಕಿದ ಹಿರಿಮೆಗೆ ಪಾತ್ರರಾದರು. ಮುನ್ನಡೆ ಸಾಧಿಸುವ ಇರಾದೆಯೊಂದಿಗೆ ಉಭಯ ತಂಡಗಳು ದ್ವಿತೀಯಾರ್ಧ ಆರಂಭಿಸಿದವು. ಆದರೆ ಎರಡೂ ತಂಡಗಳು ರಕ್ಷ ಣಾತ್ಮಕ ಆಟಕ್ಕೆ ಮುಂದಾದ ಕಾರಣ ಪಂದ್ಯ ಹೊಳಪು ಕಳೆದುಕೊಂಡಿತು. 20ರಿಂದ 30 ನಿಮಿಷಗಳ ಆಟದಲ್ಲಿಯೋಧಾಸ್ ಆಟಗಾರರು ತಲಾ ಮೂರು ಟ್ಯಾಕಲ್ ಹಾಗೂ ರೇಡಿಂಗ್‌ನಲ್ಲಿ ಅಂಕಗಳಿಸಿದರೆ, ಜೈಪುರ ರೇಡಿಂಗ್‌ನಲ್ಲಿ 2 ಮತ್ತು ಟ್ಯಾಕಲ್‌ನಲ್ಲಿ 3 ಅಂಕ ಗಳಿಸಲಷ್ಟೇ ಶಕ್ತಗೊಂಡಿತು. ಹೀಗಾಗಿ ಯೋಧಾಸ್ 26-25 ಅಂಕಗಳಿಂದ ಅಲ್ಪ ಮುನ್ನಡೆ ಸಾಧಿಸಿತು.
ಸಮಬಲದ ಹೋರಾಟ ಪ್ರದರ್ಶಿಸಿದ ಯು.ಪಿ. ಯೋಧಾಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ 19-20ರಲ್ಲಿಸಮಬಲದ ಹೋರಾಟ ಸಂಘಟಿಸಿದವು. ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡಿದವು. ಪರಿಣಾಮ ಪಂದ್ಯ ತೀವ್ರತೆಯಿಂದ ಕೂಡಿತು.
ಮೊದಲ ಐದು ನಿಮಿಷಗಳ ಆಟದಲ್ಲಿ ಎರಡೂ ತಂಡಗಳು 7-7ರಲ್ಲಿಸಮಬಲದ ಹೋರಾಟ ನೀಡಿದವು. 9ನೇ ನಿಮಿಷದಲ್ಲಿಭವಾನಿ ಡು ಆರ್ ಡೈನಲ್ಲಿಎರಡು ಅಂಕಗಳನ್ನು ತಂದು ಯೋಧಾಸ್ ಮುನ್ನಡೆಯನ್ನು 9-7ಕ್ಕೆ ಹೆಚ್ಚಿಸಿದರು. ಹತ್ತು ನಿಮಿಷಗಳ ಅಂತ್ಯಕ್ಕೆ 10-7ರಲ್ಲಿಅಂತರ ಕಾಯ್ದುಕೊಂಡ ಯೋಧಾಸ್ ಆಟಗಾರರು 13ನೇ ನಿಮಿಷದಲ್ಲಿ 18-8ರಲ್ಲಿ ಪ್ರಭುತ್ವ ಸಾಧಿಸಿದರು. ಆದರೆ ಮೊದಲಾರ್ಧ ಮುಕ್ತಾಯಕ್ಕೆ ಒಂದು ನಿಮಿಷ ಬಾಕಿ ಇರುವಾಗ ಯೋಧಾಸ್ ಆಟಗಾರರನ್ನು ಆಲೌಟ್ ಮಾಡಿ ಸೇಡು ತೀರಿಸಿಕೊಂಡ ಜೈಪುರ ಪಿಂಕ್ ಪ್ಯಾಂಥರ್ಸ್ ಆಟಗಾರರು 18-18ರಲ್ಲಿದಿಟ್ಟ ಮರು ಹೋರಾಟ ಸಂಘಟಿಸಿ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.
ನವೆಂಬರ್ 29ರಂದು ತಮಿಳ್ ತಲೈವಾಸ್ ಮತ್ತು ಹರಿಯಾಣ ಸ್ಟೀಲರ್ಸ್ ಹಾಗೂ ಗುಜರಾತ್ ಜಯಂಟ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳು ಪೈಪೋಟಿ ನಡೆಸಲಿವೆ.