ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ದಾಖಲಾದ ದಾಖಲೆಗಳಿವು !

New-Project
Published on

ಮುಂಬೈ: ವೇಗಿ ಟ್ರೆಂಟ್ ಬೌಲ್ಟ್ (22ಕ್ಕೆ 3) ಹಾಗೂ ಸ್ಪಿನ್ನರ್ ಯುವೇಂದ್ರ ಚಾಹಲ್ (11ಕ್ಕೆ 3) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-17ರಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು 6 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿದೆ. ಸಂಜು ಸ್ಯಾಮ್ಸನ್ ಬಳಗ ಗೆಲುವಿನ ಹ್ಯಾಟ್ರಿಕ್ ಬಾರಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಹಾರ್ದಿಕ್ ಪಾಂಡ್ಯ ಪಡೆ ತವರಿನಲ್ಲೂ ಮುಗ್ಗರಿಸಿ ಮುಖಭಂಗ ಎದುರಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಇಳಿದ ಮುಂಬೈ ತಂಡ ನಿರಂತರ ವಿಕೆಟ್ ಕಳೆದುಕೊಂಡು 9 ವಿಕೆಟ್‌ಗೆ 125 ರನ್ ಮಾತ್ರ ಗಳಿಸಿತು. ಪ್ರತಿಯಾಗಿ ಆಕಾಶ್ ಮಧ್ವಲ್ (20ಕ್ಕೆ 3) ಬಿಗಿ ದಾಳಿ ನಡುವೆಯೂ ರಿಯಾನ್ ಪರಾಗ್ (54* ರನ್, 39 ಎಸೆತ, 5 ಬೌಂಡರಿ, 3 ಸಿಕ್ಸರ್) ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್, 15.3 ಓವರ್‌ಗಳಲ್ಲಿ 4 ವಿಕೆಟ್‌ಗೆ 127 ರನ್‌ಗಳಿಸಿ ಗೆಲುವಿನ ಕೇಕೆ ಹಾಕಿತು.

1. ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನಲ್ಲಿ 250 ಪಂದ್ಯ ಆಡಿದ ಮೊದಲ ತಂಡ.

10: ಆರ್.ಅಶ್ವಿನ್ ಐಪಿಎಲ್‌ನಲ್ಲಿ 200 ಪಂದ್ಯವನ್ನಾಡಿದ 10ನೇ ಆಟಗಾರ ಎನಿಸಿದರು. ಧೋನಿ (253), ರೋಹಿತ್ (246), ದಿನೇಶ್ ಕಾರ್ತಿಕ್ (245), ಕೊಹ್ಲಿ (240), ಜಡೇಜಾ (229), ಧವನ್ (220), ರೈನಾ (205), ಉತ್ತಪ್ಪ (205), ರಾಯುಡು (204) ಮೊದಲಿಗರು.

24: ಟ್ರೆಂಟ್ ಬೌಲ್ಟ್ 2020ರಿಂದ ಐಪಿಎಲ್‌ನಲ್ಲಿ ಪಂದ್ಯದ ಮೊದಲ ಓವರ್‌ನಲ್ಲಿ 24ನೇ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಮೊಹಮದ್ ಶಮಿ (8), ಭುವನೇಶ್ವರ್ ಕುಮಾರ್ (8) ನಂತರದಲ್ಲಿದ್ದಾರೆ.

17: ರೋಹಿತ್ ಶರ್ಮ ಐಪಿಎಲ್‌ನಲ್ಲಿ ಇದುವರೆಗೆ ಹೆಚ್ಚು ಬಾರಿ ಡಕೌಟ್ ಆದ ಬ್ಯಾಟರ್. ದಿನೇಶ್ ಕಾರ್ತಿಕ್ (17), ಗ್ಲೆನ್ ಮ್ಯಾಕ್ಸ್‌ವೆಲ್ (15) ನಂತರದಲ್ಲಿದ್ದಾರೆ.

6. ಐಪಿಎಲ್ ಇತಿಹಾಸದಲ್ಲಿ ಅಗ್ರ ನಾಲ್ವರು ಬ್ಯಾಟರ್‌ಗಳ ಪೈಕಿ ಮೂವರು ಡಕೌಟ್ ಆದ 3ನೇ ದೃಷ್ಟಾಂತ ಇದಾಗಿದೆ.

1. ಯಜುವೇಂದ್ರ ಚಾಹಲ್ ಐಪಿಎಲ್‌ನಲ್ಲಿ ಹೆಚ್ಚು ಬಾರಿ 3 ವಿಕೆಟ್ ಪಡೆದ ಜಸ್‌ಪ್ರೀತ್ ಬುಮ್ರಾ (20) ದಾಖಲೆ ಸರಿಗಟ್ಟಿದರು. ಲಸಿತ ಮಾಲಿಂಗ (19), ಅಮಿತ್ ಮಿಶ್ರಾ (17) ನಂತರದ ಸ್ಥಾನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net