ಯುವಿ​ ದಾಖಲೆ ಮುರಿದ ಕ್ರಿಸ್​ ಮೋರಿಸ್​! ದಾಖಲೆಯ ಮೌಲ್ಯಕ್ಕೆ ಬಿಡ್​ ಆದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ

ipl 2
Published on

ಚೆನ್ನೈ: ಐಪಿಎಲ್​ 2021ರ ಹರಾಜು ಪ್ರಕ್ರಿಯೆ ಇಂದು ನಡೆಯುತ್ತಿದ್ದು, ಹೊಸದೊಂದು ದಾಖಲೆ ನಿರ್ಮಾಣವಾಗಿದೆ. 16 ಕೋಟಿ ರೂಪಾಯಿಗೆ ಬಿಡ್​ ಆಗಿದ್ದ ಯುವರಾಜ್​ ಸಿಂಗ್​ ದಾಖಲೆಯನ್ನು ದಕ್ಷಿಣ ಆಫ್ರಿಕಾ ಆಟಗಾರ ಕ್ರಿಸ್​ ಮೋರಿಸ್​ ಮುರಿದಿದ್ದಾರೆ.

ರಾಜಸ್ಥಾನ್​ ರಾಯಲ್ಸ್​ ತಂಡವು ಕ್ರಿಸ್​ ಮೋರಿಸ್​ಗೆ ಬಿಡ್ಡಿಂಗ್​ ಮಾಡಿದ್ದು, 16.25 ಕೋಟಿ ರೂಪಾಯಿಗೆ ಮೋರಿಸ್​ನನ್ನು ತಮ್ಮದಾಗಿಸಿಕೊಂಡಿದ್ದಾರೆ. 2020ರಲ್ಲಿ ಆರ್​ಸಿಬಿ ಪರವಾಗಿ ಫೀಲ್ಡ್​ಗೆ ಇಳಿದಿದ್ದ ಮೋರಿಸ್​ ಈ ವರ್ಷ ಆರ್​ಆರ್​ ತಂಡಕ್ಕೆ ಆಡಲಿದ್ದಾರೆ.

ಈ ಹಿಂದೆ 2015ರಲ್ಲಿ ಭಾರತೀಯ ಕ್ರಿಕೆಟ್​ ತಂಡದ ಆಟಗಾರ ಯುವರಾಜ್​ ಸಿಂಗ್​ರನ್ನು ಡಿಡಿ ತಂಡವು 16 ಕೋಟಿ ರೂಪಾಯಿಗೆ ಬಿಡ್​ ಮಾಡಿತ್ತು. ಐಪಿಎಲ್​ ಹರಾಜಿನ ಇತಿಹಾಸದಲ್ಲಿ ಅತಿ ಹೆಚ್ಚು ಮೌಲ್ಯಕ್ಕೆ ಬಿಡ್​ ಆದವರ ಸ್ಥಾನದಲ್ಲಿ ಯುವರಾಜ್​ ಅಗ್ರ ಸ್ಥಾನದಲ್ಲಿದ್ದರು. ಇದೀಗ ಕ್ರಿಸ್​ ಮೋರಿಸ್​ 16.25 ಕೋಟಿ ರೂಪಾಯಿಯೊಂದಿಗೆ ಅಗ್ರ ಸ್ಥಾನಕ್ಕೇರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net