ಟಿ20 ದೈತ್ಯ ಕ್ರಿಸ್ ಗೇಲ್ ಪಂಜಾಬ್ ಕಿಂಗ್ಸ್ ತಂಡ ತೊರೆಯಲು ಕಾರಣವೇನು ಗೊತ್ತೇ?

chris gayle for web
Published on

ದುಬೈ: ಸತತವಾಗಿ ಬಯೋಬಬಲ್ ವ್ಯಾಪ್ತಿಯಲ್ಲಿರುವುದರಿಂದ ಮಾನಸಿಕ ಚೈತನ್ಯಕ್ಕಾಗಿ ಟಿ20 ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಪಂಜಾಬ್ ಕಿಂಗ್ಸ್ ತಂಡ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ಗೆ ಸಜ್ಜಾಗಬೇಕಿದ್ದು, ಹೀಗಾಗಿ ಐಪಿಎಲ್‌ನಿಂದ ಬ್ರೇಕ್ ಪಡೆಯುತ್ತಿರುವೆ ಎಂದು ಗೇಲ್ ಹೇಳಿಕೊಂಡಿದ್ದಾರೆ. ನನಗೆ ಆಡಲು ಅವಕಾಶಕೊಟ್ಟ ಪಂಜಾಬ್ ಫ್ರಾಂಚೈಸಿಗೆ ಧನ್ಯವಾದಗಳು, ಮುಂದಿನ ಪಂದ್ಯಗಳಲ್ಲಿ ತಂಡಕ್ಕೆ ಶುಭವಾಗಲಿ ಎಂದು 42 ವರ್ಷದ ಗೇಲ್ ಹೇಳಿದ್ದಾರೆ.

ಪ್ಲೇಆಫ್ ಹಂತಕ್ಕೇರಲು ಕೂದಲೆಳೆ ಅವಕಾಶ ಉಳಿಸಿಕೊಂಡಿರುವ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್-14ರ ಎರಡನೇ ಭಾಗದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಸವಾಲು ಎದುರಿಸಲಿದೆ. ದುಬೈ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಈ ಪಂದ್ಯ ಇವೊಯಿನ್ ಮಾರ್ಗನ್ ಬಳಗಕ್ಕೂ ಮಹತ್ವದ್ದಾಗಿದೆ. ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಪಂಜಾಬ್ ತಂಡದ ಸ್ಥಿತಿ ಹಗ್ಗದ ಮೇಲಿನ ನಡಿಗೆಯಂತಿದ್ದು, ಗೆದ್ದರಷ್ಟೇ ಟೂರ್ನಿಯ ಮುಂದಿನ ಹಾದಿ ಜೀವಂತವಾಗಿರಲಿದೆ. ಸೋತರೆ ಟೂರ್ನಿಯಿಂದ ಹೊರಬಿದ್ದ ಎರಡನೇ ತಂಡ ಎನಿಸಿಕೊಳ್ಳಲಿದೆ.

ಮತ್ತೊಂದೆಡೆ, ಅರಬ್‌ನಾಡಿನಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಪ್ಲೇಆಫ್ ರೇಸ್‌ನಲ್ಲಿ ಉಳಿದಿರುವ ಮಾರ್ಗನ್ ಪಡೆ ಕೂಡ ಗೆಲುವಿನ ಒತ್ತಡದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net