ಹ್ಯಾಂಡ್‌ಬಾಲ್‌ನಲ್ಲಿ ದ್ವಿತೀಯ

CTD 12 SANAJANA
Published on

ಚಿತ್ರದುರ್ಗ: ನಗರದ ವಿಪಿ ಬಡಾವಣೆ 8ನೇ ತರಗತಿ ವಿದ್ಯಾರ್ಥಿನಿ ಸಂಜನಾ ಬೆಂಗಳೂರು ವಿಭಾಗಮಟ್ಟದ ಕರ್ನಾಟಕ ಮಿನಿ ಒಲಂಪಿಕ್ಸ್ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ 2ನೇ ಸ್ಥಾನ ಪಡೆದಿದ್ದಾಳೆ.

ಕದಂಬ ಹಾಗೂ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಈ ಹಿಂದೆ ಚಿತ್ರದುರ್ಗದಲ್ಲಿ ನಡೆದಿದ್ದ ಜಿಲ್ಲಾಮಟ್ಟದ ಪಂದ್ಯಾವಳಿಯಲ್ಲಿ ಸಂಜನಾ ಪ್ರಥಮ ಸ್ಥಾನ ಗಳಿಸುವ ಮೂಲಕ ಬೆಂಗಳೂರಲ್ಲಿ ಫೆ.3ರಿಂದ 9ರ ವರೆಗೆ ಜರುಗಿದ್ದ ವಿಭಾಗ ಮಟ್ಟದ ಮಿನಿ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಳು.

ವಿಜೇತೆ ಸಂಜನಾ ಚಿತ್ರದುರ್ಗ ನಗರಸಭೆ ಪೌರ ಕಾರ್ಮಿಕ ನಿಜಲಿಂಗಪ್ಪ ಅವರ ಪುತ್ರಿ ಎಂದು ನಗರ ಯೋಜನಾ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net