ಟೆನ್ನಿಸ್​ ಬಾಲ್​ ಕ್ರಿಕೆಟ್​ ಲೀಗ್​: ಎಂಟು ತಂಡಕ್ಕೆ ಈ ಸ್ಟಾರ್​ ನಟರೇ ಓನರ್ಸ್​​! ಇಲ್ಲಿದೆ ನೋಡಿ ಪಟ್ಟಿ…

ವಿಜಯವಾಣಿ - 2024-01-13T192354.278
Published on

ಹೊಸದಿಲ್ಲಿ: ಪ್ರಪ್ರಥಮ ಬಾರಿಗೆ ಕ್ರಿಕೆಟ್ ಇತಿಹಾಸದಲ್ಲೇ ಹೊಸ ಪ್ರಯತ್ನವೊಂದು ಚಾಲ್ತಿಗೆ ಬಂದಿದ್ದು, ಗಲ್ಲಿ-ಗಲ್ಲಿಗಳಲ್ಲಿ, ರಸ್ತೆಯ ಮೂಲೆ ಮೂಲೆಗಳಲ್ಲಿ ಟೆನ್ನಿಸ್ ಬಾಲ್ ಹಿಡಿದು ದೊಡ್ಡ ಸ್ಟೇಡಿಯಂನಲ್ಲಿ ಕ್ರಿಕೆಟ್​ ಆಡುವ ಕನಸು ಕಾಣುತ್ತಿದ್ದ ಅದೆಷ್ಟೋ ಯುವಕರ ಆಸೆ 2024ರಲ್ಲಿ ಈಡೇರುತ್ತಿದೆ ಎಂಬುದು ಸದ್ಯ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಅನೇಕರಲ್ಲಿ ಭಾರೀ ಸಂತಸ ಮೂಡಿಸಿದೆ.

ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL)​ ಘೋಷಣೆಯಾದ ಬೆನ್ನಲ್ಲೇ ಭಾರತೀಯ ಕ್ರಿಕೆಟ್​ ತಂಡದ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್​ ಅವರು ಇದರ ಕೋರ್ ಕಮಿಟಿ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಕೂಡ ಅಧಿಕೃತವಾಗಿ ಹೊರಬಿದ್ದಿದೆ. ಈ ಹೊಚ್ಚ ಹೊಸ ಟಿ-10 ಕ್ರಿಕೆಟ್ ಲೀಗ್‌ ಸಚಿನ್​ ಅವರ ಸಹಯೋಗದಲ್ಲಿ ನಡೆಯಲಿದ್ದು, ಒಟ್ಟು ಆರು ತಂಡಗಳು ಇರಲಿವೆ.

ಎಂಟು ತಂಡಗಳ ಪೈಕಿ ಪ್ರತಿ ಟೀಮ್​ಗೂ ಭಾರತೀಯ ಚಲನಚಿತ್ರರಂಗದ ಸ್ಟಾರ್​ ನಟ-ನಟಿಯರು ಮಾಲೀಕರಾಗಿ ತಮ್ಮ ತಂಡವನ್ನು ಪ್ರೋತ್ಸಾಹಿಸಲಿದ್ದಾರೆ. 'ಸ್ಟ್ರೀಟ್​ ಟು ಸ್ಟೇಡಿಯಂ' ಉದ್ದೇಶದಡಿ ನಡೆಸಲಾಗುತ್ತಿರುವ ಈ ಲೀಗ್​ನಲ್ಲಿ ಹೈದರಾಬಾದ್​, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಮುಂಬೈ ಮತ್ತು ಶ್ರೀನಗರ ಟೀಮ್​ಗಳು ಅಖಾಡಕ್ಕೆ ಇಳಿಯಲಿವೆ.

ತಂಡಗಳು ಓನರ್ಸ್​ ವಿವರ ಹೀಗಿದೆ:

ಹೈದರಾಬಾದ್: ರಾಮ್​ಚರಣ್

ಕೋಲ್ಕತ್ತಾ: ಸೈಫ್ ಅಲಿ ಖಾನ್​, ಕರೀನಾ ಕಪೂರ್

ಚೆನ್ನೈ: ಸೂರ್ಯ

ಬೆಂಗಳೂರು: ಹೃತಿಕ್ ರೋಷನ್​

ಮುಂಬೈ: ಅಮಿತಾಬ್​ ಬಚ್ಚನ್​

ಶ್ರೀನಗರ: ಅಕ್ಷಯ್​ ಕುಮಾರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net