

ಮುಂಬೈ: ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಾಗಿರುವ ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು 18ನೇ ಆವೃತ್ತಿಯಲ್ಲಿ ಭಾನುವಾರ ಎರಡನೇ ಬಾರಿಗೆ ಮುಖಾಮುಖಿ ಆಗಲಿವೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಕಾದಾಟ ಉಭಯ ತಂಡಗಳ ಪ್ಲೇಆ್ ಆಸೆಗೆ ಬಲ ತುಂಬಲು ಮಹತ್ವದ್ದಾಗಿದೆ. ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ ಗೈರಿನ ನಡುವೆ ಮೊದಲ ಮುಖಾಮುಖಿಯಲ್ಲಿ ಸೋತಿದ್ದ ಮುಂಬೈ ಈ ಬಾರಿ ತವರಿನಲ್ಲಿ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದೆ.
ಸೋಲಿನ ಆರಂಭದ ನಡುವೆಯೂ ಹಿಂದಿನ 2 ಪಂದ್ಯಗಳಲ್ಲಿ ಗೆಲುವಿನ ಲಯಕ್ಕೆ ಮರಳಿರುವ ಮುಂಬೈ ಈ ಪಂದ್ಯ ೇವರಿಟ್ ಎನಿಸಿದೆ. ಮುಂಬೈ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 3 ಗೆಲುವು, 4 ಸೋಲಿನೊಂದಿಗೆ 6 ಅಂಕ ಕಲೆಹಾಕಿದೆ. ಲಖನೌ ಎದುರು ಸತತ 5 ಪಂದ್ಯಗಳ ಸೋಲಿನ ಸರಪಳಿ ಕಳಚಿರುವ ಸಿಎಸ್‌ಕೆ ಅಂಕಪಟ್ಟಿಯ ಕೊನೇ ಸ್ಥಾನದಲ್ಲಿದೆ. ಪ್ಲೇಆ್ ಅವಕಾಶ ವೃದ್ಧಿಸಿಕೊಳ್ಳಲು ಎಂಎಸ್ ಧೋನಿ ಪಡೆಗೆ ಗೆಲುವೊಂದೇ ಗುರಿ ಎನಿಸಿದೆ. ಸಿಎಸ್‌ಕೆ ಆಡಿರುವ 7 ಪಂದ್ಯಗಳಲ್ಲಿ 2 ಗೆಲುವು, 5 ಸೋಲಿನೊಂದಿಗೆ 4 ಅಂಕ ಮಾತ್ರ ಕಲೆಹಾಕಿದೆ. ಮುಂಬೈ ಬೌಲರ್‌ಗಳ ಎದುರು ಸಿಎಸ್‌ಕೆ ಬ್ಯಾಟರ್‌ಗಳಿಗೆ ಅಗ್ನಿಪರೀಕ್ಷೆ ಎದುರಾಗಲಿದೆ. ಋತುರಾಜ್ ಬದಲಿಗೆ ಸಿಎಸ್‌ಕೆ ತಂಡ ಸೇರಿರುವ ಮುಂಬೈ ಯುವ ಬ್ಯಾಟರ್ ಆಯುಷ್ ಮಹ್ಹಾತ್ರೆ ತವರಿನ ಅಂಗಣದಲ್ಲಿ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ.
ಟೂರ್ನಿ ಸಾಗಿದ್ದಂತೆ ಲಯಕ್ಕೆ ಮರಳಿರುವ ಆತಿಥೇಯರಿಗೆ ಟ್ರೆಂಟ್ ಬೌಲ್ಟ್ ಕಳಪೆ ನಿರ್ವಹಣೆ ಹಿನ್ನಡೆ ಎನಿಸಿದ್ದು, ಹಿಂದಿನ ಪಂದ್ಯದಲ್ಲಿ ಕ್ಯಾಚ್ ಪಡೆಯುವ ಯತ್ನದಲ್ಲಿ ಪೆಟ್ಟು ತಿಂದಿರುವ ಸ್ಪಿನ್ನರ್ ಕರ್ಣ್ ಶರ್ಮ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಡೆಲ್ಲಿ ಎದುರು ಮುಂಬೈ ಗೆಲುವಿನಲ್ಲಿ ಕರ್ಣ್ ಶರ್ಮ ನಿರ್ಣಾಯಕ ಪಾತ್ರವಹಿಸಿದ್ದರು.
ಮುಖಾಮುಖಿ: 37
ಮುಂಬೈ: 20
ಸಿಎಸ್‌ಕೆ: 17
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.
ಕೈಹಿಡಿಯದ ಅನುಭವಿ ತಾರೆಯರು!
ಸಿಎಸ್‌ಕೆ ತಂಡಕ್ಕೆ ಅನುಭವಿ ಆಟಗಾರ ಕಳಪೆ ಆಟ ಈ ಬಾರಿ ಪ್ರಮುಖವಾಗಿ ಹಿನ್ನಡೆ ತಂದಿದೆ. ಆಲ್ರೌಂಡರ್ ರವೀಂದ್ರ ಜಡೇಜಾ (4 ವಿಕೆಟ್), ರವೀಚಂದ್ರನ್ ಅಶ್ವಿನ್ (5) ಅವರಿಂದ ನಿರೀಕ್ಷಿತ ನಿರ್ವಹಣೆ ಬಂದಿಲ್ಲ. ಅಶ್ವಿನ್ ಪರಿಣಾಮಕಾರಿ ಎನಿಸದ ಕಾರಣ ಹಿಂದಿನ ಪಂದ್ಯದಲ್ಲಿ ಕೈ ಬಿಡಲಾಗಿತ್ತು. ವಾಂಖೆಡೆಯಲ್ಲಿ ಸ್ಪಿನ್ನರ್‌ಗಳು ನೆರವು ಪಡೆಯುವುದರಿಂದ ಅಶ್ವಿನ್ ಮರಳುವ ಸಾಧ್ಯತೆಗಳಿವೆ. ಹಾಗೂ ಮುಂಬೈ ಎದುರು ಉತ್ತಮ ದಾಖಲೆ ಹೊಂದಿದ್ದಾರೆ. ಜಡೇಜಾ-ಅಶ್ವಿನ್ ಜತೆಗೆ ನೂರ್ ಅಹ್ಮದ್ (12 ವಿಕೆಟ್) ಸ್ಪಿನ್ ದಾಳಿ ಮುಂಬೈ ಬ್ಯಾಟರ್ಸ್‌ಗೆ ಸವಾಲೆನಿಸಬಹುದು. ಮಧ್ಯಮ ಕ್ರಮಾಂಕದಲ್ಲಿ ಬಿಗ್ ಹಿಟ್ಟರ್‌ಗಳ ಕೊರತೆ ಹೊಂದಿರುವ ಸಿಎಸ್‌ಕೆ ಶಿವಂ ದುಬೆ, ಧೋನಿ ಆಟದ ಮೇಲೆ ಅವಲಂಬಿತವಾಗಿದೆ. ಮುಂಬೈ ಯುವ ಆಟಗಾರ ಆಯುಷ್ ಮಹ್ಹಾತ್ರೆ ತವರಿನ ಅಂಗಣದಲ್ಲಿ ಡೆಬ್ಯೂ ಮಾಡುವ ನಿರೀಕ್ಷೆ ಇದೆ.
ಸಂಘಟಿತ ಆಟದ ಬಲ
ಹಿಂದಿನ ಎರಡು ಪಂದ್ಯಗಳಲ್ಲಿ ಡೆಲ್ಲಿ, ಸನ್‌ರೈಸರ್ಸ್ ವಿರುದ್ಧ ಗೆಲುವು ದಾಖಲಿಸಿ ಪ್ಲೇಆ್ ಅವಕಾಶ ವೃದ್ಧಿಸಿಕೊಂಡಿರುವ ಮುಂಬೈಗೆ ಸಂಘಟಿತ ಆಟವೇ ದೊಡ್ಡ ಶಕ್ತಿ. ರೋಹಿತ್ ಶರ್ಮ ಇದುವರೆಗೆ ಪವರ್‌ಪ್ಲೇ ಬಳಿಕ ಬ್ಯಾಟಿಂಗ್ ನಡೆಸಿಲ್ಲ. ಆದರೆ ಪಂದ್ಯದಿಂದ ಪಂದ್ಯಕ್ಕೆ ರನ್ ಸಂಖ್ಯೆ ಹೆಚ್ಚಿಸಿಕೊಂಡಿರುವುದು ಸಮಾಧಾನಕರ. ಸೂರ್ಯ ಕುಮಾರ್ (265 ರನ್), ತಿಲಕ್ ವರ್ಮ (231), ರ‌್ಯಾನ್ ರಿಕೆಲ್‌ಟನ್ (180) ಾರ್ಮ್‌ನಲ್ಲಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಿದರೂ, ಸ್ಲಾಗ್ ಓವರ್‌ಗಳಲ್ಲಿ ನಮನ್‌ಧೀರ್ ಮೇಲೆ ಮುಂಬೈ ಅವಲಂಬಿತವಾಗಿದೆ. ಕರ್ಣ್ ಶರ್ಮ ಗೈರಾದರೆ ಸ್ಪಿನ್ನರ್‌ಗಳ ಕೊರತೆ ಕಾಡಲಿದೆ, ಆದರೆ ಮಿಚೆಲ್ ಸ್ಯಾಂಟ್ನರ್ ಮಾಜಿ ತಂಡ ಸಿಎಸ್‌ಕೆ ಎದುರು ಕಣಕ್ಕಿಳಿಯುವುದು ಕುತೂಹಲ ಎನಿಸಿದೆ. ವಿಲ್ ಜಾಕ್ಸ್ ಲಯಕ್ಕೆ ಮರಳಿರುವುದು ಪ್ಲಸ್ ಪಾಯಿಂಟ್.