ಇಂಗ್ಲೆಂಡ್‌ಗೆ ಆಘಾತ : ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಆರ್‌ಸಿಬಿ ಆಲ್ರೌಂಡರ್

New Project (1)
Published on

ಕಟಕ್: ಭಾರತ ವಿರುದ್ಧ ಟಿ20 ಹಾಗೂ ಏಕದಿನ ಸರಣಿ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಯುವ ಆಲ್ರೌಂಡರ್ ಜೇಕಬ್ ಬೆಥೆಲ್ ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದ್ದಾರೆ. ಎಡ ಮಂಡಿರಜ್ಜು ಗಾಯದ ಸಮಸ್ಯೆಗೆ ತುತ್ತಾಗಿರುವ ಬೆಥೆಲ್ 2ನೇ ಏಕದಿನ ಪಂದ್ಯ ತಪ್ಪಿಸಿಕೊಂಡಿದ್ದರು. ಟಾಮ್ ಬ್ಯಾಂಟನ್ ಬದಲಿ ಆಟಗಾರನಾಗಿ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದಾರೆ.

ಮುಂದಿನ 9 ದಿನಗಳಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ವೇಳೆ ಬೆಥೆಲ್ ಸಂಪೂರ್ಣವಾಗಿ ಫಿಟ್ ಆಗುವ ಸಾಧ್ಯತೆ ಕಡಿಮೆ ಎಂದು ನಾಯಕ ಜೋಸ್ ಬಟ್ಲರ್ ಭಾನುವಾರದ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಖಾತ್ರಿಪಡಿಸಿದ್ದಾರೆ. ಭಾರತ ವಿರುದ್ಧದ ಮೊದಲ ಏಕದಿನದಲ್ಲಿ ಅರ್ಧಶತಕ ಸಿಡಿಸಿ, ಒಂದು ವಿಕೆಟ್ ಪಡೆದಿದ್ದ 21 ವರ್ಷದ ಬೆಥೆಲ್ ಸ್ಥಾನಕ್ಕೆ ಟಾಮ್ ಬ್ಯಾಂಟನ್ ಬದಲಿ ಆಟಗಾರನಾಗಿ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದಾರೆ.

ವಿಕೆಟ್ ಕೀಪರ್-ಬ್ಯಾಟರ್ ಜೇಮ್ಮಿ ಸ್ಮಿತ್ ಗಾಯದ ಸಮಸ್ಯೆಯ ನಡುವೆ ಬೆಥೆಲ್ ಅಲಭ್ಯತೆ ಆಂಗ್ಲರಿಗೆ ಹಿನ್ನಡೆ ಎನಿಸಿದೆ. ಕಟಕ್‌ನಲ್ಲಿ ಭಾರತ ವಿರುದ್ಧದ ಪಂದ್ಯಕ್ಕೆ ಹೆಚ್ಚುವರಿ ಬದಲಿ ಫೀಲ್ಡರ್‌ಗಳ ಸ್ಥಾನಕ್ಕೆ ಸಹಾಯಕ ತರಬೇತುದಾರರಾದ ಮಾರ್ಕಸ್ ಟ್ರೆಸ್ಕೊಥಿಕ್ ಮತ್ತು ಪಾಲ್ ಕಾಲಿಂಗ್‌ವುಡ್ ಅವರನ್ನು ಹೆಸರಿಸಲಾಗಿತ್ತು.

2024ರ ವರ್ಷಾಂತ್ಯದಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 52ರ ಸರಾಸರಿಯಲ್ಲಿ ಮೂರು ಅರ್ಧಶತಕ ಸಿಡಿಸಿದ್ದ ಬೆಥೆಲ್, ಚಾಂಪಿಯನ್ಸ್ ಟ್ರೋಫಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದರು. ಇಂಗ್ಲೆಂಡ್ ತಂಡಕ್ಕೆ ಬೆಥೆಲ್ ಅಲಭ್ಯತೆ ಆರ್‌ಸಿಬಿ ತಂಡಕ್ಕೂ ಕೊಂಚ ಹಿನ್ನಡೆ ಎನಿಸಿದೆ. ನವೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ 2.60 ಕೋಟಿ ನೀಡಿ ಆರ್‌ಸಿಬಿ ್ರಾಂಚೈಸಿ ಖರೀದಿಸಿದೆ. ಇಂಗ್ಲೆಂಡ್ ತಂಡ ೆ.22 ರಂದು ಆಸ್ಟ್ರೇಲಿಯಾ ಎದುರು ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದ್ದು, 19ರಂದು ಟೂರ್ನಿ ಆರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net