ಅವಧಿಯೊಳಗೆ ನವೀಕರಣಗೊಳ್ಳದ ಕ್ರೀಡಾಂಗಣಗಳು; Champions Trophy ಉದ್ಘಾಟನಾ ಸಮಾರಂಭ ರದ್ದು?

Gadaffi Stadium
Published on

ನವದೆಹಲಿ: ಫೆಬ್ರವರಿ 19ರಿಂದ ಮಾರ್ಚ್​ 09ರವರೆಗೆ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗೆ (Champions Trophy) ದಿನಗಣನೆ ಆರಂಭವಾಗಿದ್ದು, ತಂಡಗಳು ತಯಾರಿಯನ್ನು ಆರಂಭಿಸಿದ್ದು, ಭಾರತ, ನ್ಯೂಜಿಲೆಂಡ್ ಸೇರಿದಂತೆ ಕೆಲವು ತಂಡಗಳನ್ನು ಪ್ರಕಟಿಸಲಾಗಿದೆ. ಇನ್ನೂ ಟೂರ್ನಿಯ ವಿಚಾರಕ್ಕೆ ಬರುವುದಾದರೆ 29 ವರ್ಷಗಳ ಬಳಿಕ ಪಾಕಿಸ್ತಾನ ಐಸಿಸಿ ಟೂರ್ನಿಯೊಂದಕ್ಕೆ ಆತಿಥ್ಯ ವಹಿಸುತ್ತಿದ್ದು, ಚಾಂಪಿಯನ್ಸ್ ಟೂರ್ನಿ ಮುಖಾಂತರ ದೇಶದ ಆರ್ಥಿಕ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ ಎಂಬ ವಿಶ್ವಾಸದಲ್ಲಿ ಪಾಕ್​ ಎದುರು ನೋಡುತ್ತಿರುವ ನಡುವೆಯೇ ದೊಡ್ಡ ಆಘಾತವೊಂದು ಎದುರಾಗಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪಿಸಿಬಿಯು ಐಸಿಸಿಗೆ ಜನವರಿ 31ರಂದು ಕ್ರೀಡಾಂಗಣಗಳನ್ನು ಹಸ್ತಾಂತಿರಬೇಕಿತ್ತು. ಆದರೆ, ನವೀಕರಣ ಕಾರ್ಯ ವಿಳಂಬವಾಗಿರುವ ಕಾರಣ ಕ್ರೀಡಾಂಗಣಗಳನ್ನು ಹಸ್ತಾಂತರಿಸುವುದು ಮತ್ತಷ್ಟು ವಿಳಂಬವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಪಾಕಿಸ್ತಾನದ ಮೂರು ಕ್ರೀಡಾಂಗಣಗಳ ನವೀಕರಣಕ್ಕಾಗಿ ಪಿಸಿಬಿ 373 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಟೂರ್ನಿ ಆರಂಭವಾಗುವ ವೇಳೆಗೆ ಕ್ರೀಡಾಂಗಣಗಳು ಪೂರ್ಣಪ್ರಮಾಣದಲ್ಲಿ ಸಿದ್ದವಾಗುವುದು ಡೌಟ್​ ಎಂದು ಹೇಳಲಾಗಿದೆ.

ನಿಗದಿತ ಅವಧಿಯೊಳಗೆ ಕ್ರೀಡಾಂಗಣಗಳು ಸಿದ್ದವಾಗದ ಕಾರಣ ಚಾಂಪಿಯನ್ಸ್ ಟ್ರೋಫಿ (Champions Trophy) ಉದ್ಘಾಟನಾ ಸಮಾರಂಭವನ್ನು ಮುಂದೂಡುವುದು ಅಥವಾ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯ ಮೂರು ಸ್ಥಳಗಳಲ್ಲಿ ಈಗಾಗಲೇ ಟಿಕೆಟ್ ಮಾರಾಟ ಆರಂಭವಾಗಿದ್ದು, ಟೂರ್ನಿ ಕೈತಪ್ಪುವ ಭೀತಿಯನ್ನು ಎದುರಿಸುತ್ತಿದೆ. ಮೊದಲಿಗೆ ಹೈಬ್ರಿಡ್‌ ಮಾದರಿಗೆ ವಿರೋಧ ವ್ಯಕ್ತಪಡಿಸಿದ್ದ ಪಾಕಿಸ್ತಾನ ಈಗ ಅಗತ್ಯ ತಯಾರಿ ಇಲ್ಲದೇ ಟೂರ್ನಿ ಆಯೋಜನೆಗೆ ಮುಂದಾಗುವ ಮೂಲಕ ಟೂರ್ನಿಯ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ. 

Champions Trophy

ಫೆ.16ರಂದು ನಡೆಯಲಿದ್ದು, ಕಾರ್ಯಕ್ರಮಕ್ಕೆ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ನಾಯಕರು ಪಾಲ್ಗೊಳಲಿದ್ದಾರೆ. ಲಾಹೋರ್​ನಲ್ಲಿ ಕಾರ್ಯಕ್ರಮ ನಡೆಯುವ ಹಿನ್ನೆಲೆ ಪಾಕಿಸ್ತಾನ ಪ್ರಧಾನಿ ಶಷಾಬಾಜ್​ ಷರಿಫ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕ್ರೆಟ್​​ ಮಂಡಳಿ(PCB) ಮೊಹ್ಸಿನ್​ ನಖ್ವಿ ತಿಳಿಸಿದ್ಧಾರೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಆಸ್ಟ್ರೇಲಿಯಾ, ಇಂಗ್ಲೆಂಡ್​ ತಂಡ ಪಾಕಿಸ್ತಾನಕ್ಕೆ ಆಗಮಿಸುವುದು ತಡವಾಗತ್ತದೆ ಎಂದು ಹೇಳಲಾಗಿದ್ದು, ಭಾರತ ತಂಡದ ನಾಯಕ ರೋಹಿತ್ ಶರ್ಮ ಕೂಡ ಭಾಗಿಯಾಗೋದು ಡೌಟ್​ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಉದ್ಗಟನಾ ಸಮಾರಂಭ ರದ್ದಾಗಬಹುದು ಎಂದು ವರದಿಯಾಗಿದೆ.

ಚಾಂಪಿಯನ್ಸ್​ ಟ್ರೋಫಿಗೆ ಭಾರತ ತಂಡ 

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ಕೆಎಲ್ ರಾಹುಲ್ (ವಿಕೀ), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net