

ಬೆಂಗಳೂರು: ನಗರದ ಕೆ.ಆರ್. ಪುರಂ ಶಿಶು ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಸೌಂದರ್ಯ ಶಾಲೆಯ ವಿದ್ಯಾರ್ಥಿಗಳು 14 ವಯೋಮಿತಿಯ ಬಾಲಕರ ವಿಭಾಗದ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇದರೊಂದಿಗೆ ಕೋಲಾರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಾಸ್ಕೆಟ್‌ಬಾಲ್ ಟೂರ್ನಿಗೆ ಅರ್ಹತೆ ಗಳಿಸಿದ್ದಾರೆ. ಜತೆಗೆ ಬೆಂಗಳೂರು ಉತ್ತರ ತಾಲೂಕಿಗೆ ಕೀರ್ತಿ ತಂದಿದ್ದಾರೆ. ದೈಹಿಕ ಶಿಕ್ಷ ಕ ದೀಪಕ್, ದೈಹಿಕ ಶಿಕ್ಷ ಕರು ಮಮತಾ ಮತ್ತು ತರಬೇತುದಾರ ವಿನೋದ್ ಚಿತ್ರದಲ್ಲಿದ್ದಾರೆ.