ಸಿಸಿಎಲ್ ಫೈನಲ್: ಕರ್ನಾಟಕ ಬುಲ್ಲೋಜರ್ಸ್ ತಂಡಕ್ಕೆ ನಿರಾಸೆ: ಬೆಂಗಾಲ್ ಟೈಗರ್ಸ್‌ಗೆ ಚೊಚ್ಚಲ ಚಾಂಪಿಯನ್ ಪಟ್ಟ

CCL
Published on

ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್ 10ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಲೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ವಿರುದ್ಧ 12 ರನ್‌ಗಳಿಂದ ಸೋತು ನಿರಾಸೆ ಅನುಭವಿಸಿದೆ. ಬೆಂಗಾಲ್ ತಂಡ ಮೊದಲ ಬಾರಿ ಸಿಸಿಎಲ್ ಟ್ರೋಫಿ ಗೆದ್ದಿದೆ.

ತಿರುವನಂತಪುರದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಾಲ್ ಟೈಗರ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ 4 ವಿಕೆಟ್‌ಗೆ 118 ರನ್ ಕಲೆಹಾಕಿತು. ಬಳಿಕ ಬೆಂಗಾಲ್ ಬಿಗಿ ಬೌಲಿಂಗ್ ದಾಳಿ ನಡೆಸಿ, ಕರ್ನಾಟಕ ತಂಡವನ್ನು 10 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 85 ರನ್‌ಗೆ ನಿಯಂತ್ರಿಸಿತು.

31 ರನ್‌ಗಳ ಲೀಡ್‌ನೊಂದಿಗೆ ಎರಡನೇ ಇನಿಂಗ್ಸ್ ಆಡಿದ ಬೆಂಗಾಲ್ 10 ಓವ‌ರ್ಗಗಳಲ್ಲಿ 4 ವಿಕೆಟ್ ಗೆ 105 ರನ್ ಗಳಿಸಿತು. ಒಟ್ಟು 137 ರನ್‌ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭಿಕ ಬ್ಯಾಟರ್ ಕರಣ್ 10 ಎಸೆತಗಳಲ್ಲಿ 23 ರನ್ ಗಳಿಸಿ ಹಾಗೂ 8 ಎಸೆತಗಳಲ್ಲಿ 25 ರನ್ ಗಳಿಸಿದ ರಾಜೀವ್ ಉತ್ತಮ ಅಡಿಪಾಯ ಹಾಕಿದರು. ಕರ್ನಾಟಕಕ್ಕೆ ಗೆಲ್ಲಲು ಕೊನೆಯ ಓವರ್‌ನಲ್ಲಿ 23 ರನ್‌ ಗಳ ಅವಶ್ಯಕತೆಯಿತ್ತು. ಆದರೆ, ಕರ್ನಾಟಕವನ್ನು 125 ರನ್‌ಗಳಿಗೆ ಕಟ್ಟಿಹಾಕಿದ ಬೆಂಗಾಲ್ ಟೈಗರ್ಸ್ 12 ರನ್‌ಗಳ ಗೆಲುವು ಸಾಧಿಸಿತು.

ಇದೊಂದು ಅದ್ಭುತ ಫೈನಲ್ ಪಂದ್ಯ. ಬೆಂಗಾಲ್ ತಂಡಕ್ಕೆ ಉತ್ತಮ ಪೈಪೋಟಿ ನೀಡಿರುವ ಸಮಾಧಾನ ನಮ್ಮ ತಂಡಕ್ಕಿದೆ. ಹಾಗೇ ಮಹಿಳೆಯರ ಆರ್‌ಸಿಬಿ ತಂಡ ಗೆಲುವು ಸಾಧಿಸಿದೆ. ಅವರಿಗೂ ಅಭಿನಂದನೆ.

| ಸುದೀಪ್, ಕರ್ನಾಟಕ ಬುಲ್ಲೋಜರ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net