ಅಲ್ಕರಾಜ್-ಜೋಕೊವಿಕ್ ಸೂಪರ್ ಸಂಡೇ ಕಾದಾಟ: ಸೆರ್ಬಿಯಾ ಸ್ಟಾರ್‌ಗೆ ಗ್ರಾಂಡ್ 25 ನಿರೀಕ್ಷೆ

New-Project-14
Published on

ಲಂಡನ್: ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಹಾಗೂ ರನ್ನರ್ ಅಪ್ ನೊವಾಕ್ ಜೋಕೊವಿಕ್ ವಿಂಬಲ್ಡನ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿಗಾಗಿ ಭಾನುವಾರ ಕಾದಾಟ ನಡೆಸಲಿದ್ದಾರೆ. ವಿಶ್ವ ನಂ. 2 ಜೋಕೊವಿಕ್ ಒಟ್ಟಾರೆ 10ನೇ ಬಾರಿ ಹಾಗೂ ಸತತ 6ನೇ ಬಾರಿಗೆ ವಿಂಬಲ್ಡನ್ ೈನಲ್ ಆಡಲಿದ್ದು, ಇದು ಕಳೆದ ವರ್ಷದ ೈನಲ್‌ನ ಮರು ಮುಖಾಮುಖಿ ಎನಿಸಿದೆ. ಜೋಕೋ ಅವರನ್ನು ಮಣಿಸಿ ಅಲ್ಕರಾಜ್ ಮೊದಲ ಬಾರಿ ವಿಂಬಲ್ಡನ್ ಟ್ರೋಫಿಗೆ ಮುತ್ತಿಕ್ಕಿದ್ದರು. ಜೋಕೊವಿಕ್ 2014 ಹಾಗೂ 2015ರಲ್ಲಿ ರೋಜರ್ ಫೆಡರರ್ ಅವರನ್ನು ಸೋಲಿಸಿದ ಬಳಿಕ ಬಳಿಕ ಅದೇ ಇಬ್ಬರು ಆಟಗಾರರು (ಅಲ್ಕರಾಜ್-ಜೋಕೊವಿಕ್) ಸತತವಾಗಿ ವಿಂಬಲ್ಡನ್ ೈನಲ್ ಆಡಲಿರುವ ಮೊದಲ ದೃಷ್ಟಾಂತ ಇದಾಗಿದೆ.

ಹಾಲಿ ಋತುವಿನಲ್ಲಿ ಇದಕ್ಕೆ ಮುನ್ನ ಯಾವುದೇ ಟೂರ್ನಿಯಲ್ಲಿ ೈನಲ್‌ಗೇರಿರದ 24 ಗ್ರಾಂಡ್ ಸ್ಲಾಂ ಒಡೆಯ ಜೋಕೋ ಬಲಗಾಲಿನ ಮಂಡಿ ಶಸ ಚಿಕಿತ್ಸೆಯ ಬಳಿಕ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ತನ್ನ ಎಂಟನೇ ಟ್ರೋಫಿ ಜಯಿಸುವ ತವಕದಲ್ಲಿದ್ದಾರೆ. ಅಲ್ಕರಾಜ್ ಎದುರು ಜೋಕೋ ಗೆದ್ದರೆ, ಹಸಿರು ಅಂಕಣದಲ್ಲಿ ಗರಿಷ್ಠ ಬಾರಿ ಪ್ರಶಸ್ತಿ ಜಯಿಸಿದ ೆಡರರ್ (8) ದಾಖಲೆ ಸರಿಗಟ್ಟಲಿದ್ದಾರೆ. ಜತೆಗೆ ಟೆನಿಸ್ ಇತಿಹಾಸದಲ್ಲಿ ವೃತ್ತಿಜೀವನದ 25ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎನಿಸಲಿದ್ದಾರೆ. ಸೆರ್ಬಿಯಾದ 37 ವರ್ಷದ ಜೋಕೋಗೆ ಇದು 37ನೇ ಗ್ರಾಂಡ್ ಸ್ಲಾಂ ೈನಲ್ ಪಂದ್ಯವಾಗಿದೆ.

ಮೂರನೇ ಶ್ರೇಯಾಂಕಿತ 21 ವರ್ಷದ ಅಲ್ಕರಾಜ್ ಈಗಾಗಲೇ 3 ಗ್ರಾಂಡ್ ಸ್ಲಾಂ ಟ್ರೋಫಿ ಗೆದ್ದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದು, ಮುಕ್ತ ಟೆನಿಸ್ ಯುಗದಲ್ಲಿ 22ನೇ ವರ್ಷಕ್ಕೂ ಮುನ್ನ 2 ಬಾರಿ ವಿಂಬಲ್ಡನ್ ಗೆದ್ದ ಮೂರನೇ ಆಟಗಾರ ಎನಿಸುವ ಅವಕಾಶವಿದೆ. ಬೋರಿಸ್ ಬೆಕರ್ ಮತ್ತು ಬೊರ್ನ್ ಬೋರ್ಗ್ ಹಿಂದಿನ ಸಾಧಕರು. ಅಲ್ಕರಾಜ್ ಇದುವರೆಗೆ 2022ರಲ್ಲಿ ಯುಎಸ್ ಓಪನ್, ವಿಂಬಲ್ಡನ್ ಮತ್ತು ಕಳೆದ ತಿಂಗಳು ಫ್ರೆಂಚ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದು, ಗ್ರಾಂಡ್ ಸ್ಲಾಂ ೈನಲ್‌ನಲ್ಲಿ ಅಜೇಯ ದಾಖಲೆ ಹೊಂದಿದ್ದಾರೆ. ಸ್ಪೇನ್‌ನ ಅಲ್ಕರಾಜ್ 11 ವರ್ಷಗಳಲ್ಲಿ ವಿಂಬಲ್ಡನ್ ೈನಲ್‌ನಲ್ಲಿ ಜೋಕೋಗೆ ಸೋಲುಣಿಸಿರುವ ಏಕೈಕ ಆಟಗಾರ ಎನಿಸಿದ್ದಾರೆ. ಯುರೋಕಪ್‌ನಲ್ಲಿ ಸ್ಪೇನ್ ತಂಡ ಇಂಗ್ಲೆಂಡ್ ಅನ್ನು ಎದುರಿಸಲಿದ್ದು, ಸ್ಪೇನ್‌ನವರೇ ಆದ ಅಲ್ಕರಾಜ್ 4ನೇ ಗ್ರಾಂಡ್ ಸ್ಲಾಂ ಟ್ರೋಫಿಗೆ ಜೋಕೊವಿಕ್ ಎದುರು ಹೋರಾಡಲಿದ್ದಾರೆ. ಒಟ್ಟಾರೆ ಸ್ಪೇನ್‌ನ ಕ್ರೀಡಾಭಿಮಾನಿಗಳ ಪಾಲಿಗೆ ಸೂಪರ್ ಸಂಡೇ ಎನಿಸಿದೆ.

ಆರಂಭ: ಸಂಜೆ 6.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net