ಕ್ಯಾಪ್ಟನ್ ಆಟ ಮುಂದುವರಿಸಿದ 'ಹಿಟ್​ಮ್ಯಾನ್​'; ಆಕರ್ಷಕ ಅರ್ಧಶತಕಕ್ಕೆ ಫ್ಯಾನ್ಸ್ ಸಲಾಂ

Untitled design (7)
Published on

ಗುಯಾನ: ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್​, ಬ್ಯಾಟ್ ಮಾಡುವಂತೆ ಭಾರತಕ್ಕೆ ಆಹ್ವಾನಿಸಿತು. ಮೊದಲು ಬ್ಯಾಟ್​ಗೆ ಬಂದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪೈಕಿ ವಿರಾಟ್​ ಕೇವಲ 9 ರನ್​ಗೆ ಪೆವಿಲಿಯನ್​ನತ್ತ ಮುಖಮಾಡಿದರು. 'ರನ್ ಮಷಿನ್' ಬೆನ್ನಲ್ಲೇ ರಿಷಭ್ ಪಂತ್ ಕೂಡ ಔಟ್ ಆಗಿ ಹೊರನಡೆದರು.

ಈ ವೇಳೆ ಇಂಗ್ಲೆಂಡ್​ ಬೌಲರ್​ಗಳಿಗೆ ತಕ್ಕ ಪಾಠ ಕಲಿಸಲೆಂದು ಕ್ರೀಸ್​ಗೆ ಅಂಟಿದ ರೋಹಿತ್ ಶರ್ಮಗೆ, ಭಾರತದ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್​​ಮನ್ ಸೂರ್ಯಕುಮಾರ್ ಯಾದವ್ ಸಾಥ್ ನೀಡಿದರು. ಎರಡು ಸಿಕ್ಸರ್​ ಮತ್ತು ನಾಲ್ಕು ಬೌಂಡರಿಗಳನ್ನು ಸಿಡಿಸಿದ ರೋಹಿತ್, 39 ಎಸೆತಗಳಲ್ಲಿ 57 ರನ್​ಗಳನ್ನು ಕಲೆಹಾಕುವ ಮೂಲಕ ಆಕರ್ಷಕ ಅರ್ಧಶತಕ ಗಳಿಸಿದರು. ಇದು ಟೀಮ್ ಇಂಡಿಯಾ ಸ್ಕೋರ್​ ಕಾರ್ಡ್​ಗೆ ಮತ್ತಷ್ಟು ಬಲ ತುಂಬಿತು.

ಇನ್ನೇನು ರೋಹಿತ್​ರಿಂದ ಸ್ಫೋಟಕ ಬ್ಯಾಟಿಂಗ್ ಆರಂಭಗೊಳ್ಳುತ್ತಿದೆ ಎನ್ನುವಷ್ಟರೊಳಗೆ ಅವರ ವಿಕೆಟ್ ಪತನಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಆಘಾತ ಉಂಟುಮಾಡಿತು. ಅಂತಿಮವಾಗಿ ಅರ್ಧಶತಕ ಕೊಡುಗೆ ಕೊಟ್ಟ ರೋಹಿತ್​ಗೆ ಫ್ಯಾನ್ಸ್ ಸಲಾಂ ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net