

ದುಬೈ: ಆರಂಭಿಕರಾದ ಕ್ವಿಯಾನಾ ಜೋಸೆಫ್ (52) ಮತ್ತು ನಾಯಕಿ ಹ್ಯಾಲಿ ಮ್ಯಾಥ್ಯೂಸ್ (50) ಭರ್ಜರಿ ಬ್ಯಾಟಿಂಗ್ ಬಲದಿಂದ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್‌ಗಳಿಂದ ಗೆದ್ದು ಉಪಾಂತ್ಯಕ್ಕೇರಿದೆ. ಜತೆಗೆ ದಕ್ಷಿಣ ಆಫ್ರಿಕಾ ಕೂಡ ಬಿ ಗುಂಪಿನ 2ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದರೆ, ಇಂಗ್ಲೆಂಡ್ ಆರಂಭಿಕ 3 ಪಂದ್ಯಗಳ ಗೆಲುವಿನ ನಡುವೆಯೂ ಈ ಪಂದ್ಯದ ಸೋಲಿನೊಂದಿಗೆ ರನ್‌ರೇಟ್ ಲೆಕ್ಕಾಚಾರದಲ್ಲಿ ಹಿನ್ನಡೆ ಅನುಭವಿಸಿ ಲೀಗ್ ಹಂತದಲ್ಲೇ ಹೊರಬಿದ್ದಿದೆ.
ಮಂಗಳವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್, ನ್ಯಾಟ್ ಸೀವರ್ ಬ್ರಂಟ್ (57*) ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 141 ರನ್ ಕಲೆಹಾಕಿತು. 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದ ಇಂಗ್ಲೆಂಡ್, ಸೀವರ್-ಹೀದರ್ ಜೋಡಿ ನಡೆಸಿದ 46 ರನ್ ಜತೆಯಾಟದಿಂದ ಚೇತರಿಸಿಕೊಂಡಿತು. ಹೀದರ್ ನೈಟ್ ಗಾಯಗೊಂಡು ನಿವೃತ್ತಿ ಪಡೆದ ಬಳಿಕ ಸೀವರ್ ಏಕಾಂಗಿಯಾಗಿ ಮೊತ್ತ ಏರಿಸಿದರು. ಪ್ರತಿಯಾಗಿ ವಿಂಡೀಸ್ 18 ಓವರ್‌ಗಳಲ್ಲೇ 4 ವಿಕೆಟ್‌ಗೆ 142 ರನ್ ಗಳಿಸಿ ನಾಲ್ಕರ ಘಟ್ಟಕ್ಕೇರಿತು.
ಇಂಗ್ಲೆಂಡ್: 7 ವಿಕೆಟ್‌ಗೆ 141 (ಮೈಯಾ 14, ಡ್ಯಾನಿ ವ್ಯಾಟ್ 16, ಸೀವರ್ ಬ್ರಂಟ್ 57*, ಹೀದರ್ 21, ಆಮಿ ಜೋನ್ಸ್ 7, ಗಿಬ್ಸನ್ 7, ಏ ್ಲೆಚರ್ 21ಕ್ಕೆ 3).
ಸೆಮೀಸ್‌ಗೆ ದ. ಆಫ್ರಿಕಾ ಖಾತ್ರಿ
ಬಿ ಗುಂಪಿನಿಂದ ಸೆಮಿಫೈನಲ್‌ಗೇರುವ ತಂಡಗಳನ್ನು ನಿರ್ಧರಿಸುವ ನಿಟ್ಟಿನಲ್ಲಿ ಮಹತ್ವ ಪಡೆದ ಇಂಗ್ಲೆಂಡ್-ವಿಂಡೀಸ್ ನಡುವಿನ ಪಂದ್ಯ ಮುಗಿಯುವ ಮುನ್ನವೇ ದಕ್ಷಿಣ ಆಫ್ರಿಕಾ ತಂಡದ ಉಪಾಂತ್ಯ ಪ್ರವೇಶ ಖಾತ್ರಿಪಡಿಸಿಕೊಂಡಿತು. ವಿಂಡೀಸ್ ತಂಡ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಲೀಗ್ ಹಂತ ಮುಕ್ತಾಯಕ್ಕೆ ತಲಾ 6 ಅಂಕಗಳ ಸಮಬಲ ಸಾಧಿಸಿದವು. ಆದರೆ ಉತ್ತಮ ರನ್‌ರೇಟ್ ಹೊಂದಿದ್ದ ದ. ಆಫ್ರಿಕಾ ಮತ್ತು ವಿಂಡೀಸ್ ಸೆಮಿೈನಲ್‌ಗೇರಿದವು. ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿದ ಕಾರಣ ಅದು ಗೆದ್ದರಷ್ಟೇ ಸೆಮಿೈನಲ್‌ಗೇರುವ ಅವಕಾಶ ಹೊಂದಿತ್ತು.