

ಮೆಲ್ಬೋರ್ನ್: ನಾಯಕ ಹಾಗೂ ವೇಗಿ ಪ್ಯಾಟ್ ಕಮ್ಮಿನ್ಸ್ (37ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಆಸ್ಟ್ರೆಲಿಯಾ ತಂಡ ಎರಡನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಪ್ರವಾಸಿ ಪಾಕಿಸ್ತಾನ ತಂಡದ ಪ್ರತಿರೋಧವನ್ನು ಬದಿಗೊತ್ತಿ ಮೇಲುಗೈ ಸಾಧಿಸಿದೆ.
ಎಂಸಿಜಿಯಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಬುಧವಾರ 3 ವಿಕೆಟ್ಗೆ 187 ರನ್ಗಳಿಂದ ಆಟ ಆರಂಭಿಸಿದ ಆಸ್ಟ್ರೆಲಿಯಾ, ಭೋಜನ ವಿರಾಮದ ವೇಳೆಗೆ 318 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ನಿಧಾನಗತಿಯ ಆಟದೊಂದಿಗೆ ಎಚ್ಚರಿಕೆಯ ಆರಂಭ ಪಡೆದ ಪಾಕ್ ಒಂದು ಹಂತದಲ್ಲಿ 1 ವಿಕೆಟ್ಗೆ 124 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ಬಳಿಕ 46 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡು ಕುಸಿಯಿತು. ದಿನದಂತ್ಯಕ್ಕೆ 6 ವಿಕೆಟ್ಗೆ 194 ರನ್ ಗಳಿಸಿರುವ ಪಾಕ್, ಇನ್ನೂ 124 ರನ್ ಹಿನ್ನಡೆಯಲ್ಲಿದೆ. ವಿಕೆಟ್ ಕೀಪರ್-ಬ್ಯಾಟರ್ ಮೊಹಮದ್ ರಿಜ್ವಾನ್ (29) ಜತೆಗೆ ಆಮೀರ್ ಜಮಾಲ್ (2) ಕ್ರೀಸ್ನಲ್ಲಿದ್ದಾರೆ.
ಪಂದ್ಯದ ಮೊದಲೆರಡು ದಿನದಾಟಕ್ಕೆ ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಹಾಜರಾಗಿದ್ದಾರೆ.
ಆಸ್ಟ್ರೆಲಿಯಾ: 96.5 ಓವರ್ಗಳಲ್ಲಿ 318 (ಲಬುಶೇನ್ 63, ಹೆಡ್ 15, ಮಾರ್ಷ್ 41, ಅಲೆಕ್ಸ್ ಕ್ಯಾರಿ 41, ಕಮ್ಮಿನ್ಸ್ 13, ಜಮಾಲ್ 64ಕ್ಕೆ 3, ಹಸನ್ ಅಲಿ 61ಕ್ಕೆ 2, ಮಿರ್ ಹಂಜಾ 51ಕ್ಕೆ 2, ಅಫ್ರಿದಿ 85ಕ್ಕೆ 2), ಪಾಕಿಸ್ತಾನ: 55 ಓವರ್ಗಳಲ್ಲಿ 6 ವಿಕೆಟ್ಗೆ 194 (ಶಫೀಕ್ 62, ಇಮಾಮ್ 10, ಮಸೂದ್ 54, ಬಾಬರ್ 1, ಶಕೀಲ್ 9, ರಿಜ್ವಾನ್ 29*, ಕಮ್ಮಿನ್ಸ್ 37ಕ್ಕೆ 3, ಲ್ಯಾನ್ 48ಕ್ಕೆ 2, ಹ್ಯಾಸಲ್ವುಡ್ 29ಕ್ಕೆ 1).