ಭಾರತೀಯ ಕ್ರಿಕೆಟಿಗರನ್ನು ನಿಂದಿಸಿದ ಪ್ರೇಕ್ಷಕರು ಪತ್ತೆಯಾಗಲಿಲ್ಲ ಎಂದ ಕ್ರಿಕೆಟ್ ಆಸ್ಟ್ರೇಲಿಯಾ

india and australia racism for web
Published on

ಸಿಡ್ನಿ: ಟೆಸ್ಟ್ ಸರಣಿ ವೇಳೆ ಭಾರತದ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿದ ಪ್ರೇಕ್ಷಕರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ) ವಿವರಣೆ ನೀಡಿದೆ. ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಸಿಕ್ಕಿಬಿದ್ದ ಆರು ಮಂದಿ ನಿಜವಾದ ಆರೋಪಿಗಳಲ್ಲ ಎಂದು ಆಸೀಸ್ ಮಾಧ್ಯಮಗಳು ವರದಿ ಮಾಡಿವೆ. ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ವೇಗಿ ಮೊಹಮದ್ ಸಿರಾಜ್ ಅವರನ್ನು ನಿಂದಿಸಿದ ಆರು ಮಂದಿಯನ್ನು ಮೈದಾನದಿಂದ ಹೊರಕಳುಹಿಸಲಾಗಿತ್ತು. ಆದರೆ, ಅವರು ಆರೋಪಿಗಳು ಅಲ್ಲ ಎಂದು ದ ಏಜ್ ವರದಿ ಮಾಡಿದೆ.

ಜನಾಂಗೀಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಐಸಿಸಿ, 14 ದಿನಗಳ ಒಳಗಾಗಿ ವರದಿ ನೀಡುವಂತೆ ಸಿಎಗೆ ಸೂಚಿಸಿತ್ತು. ಜನವರಿ 10 ರಂದು ಸಿರಾಮ್ ಅಲ್ಲದೆ ಡೀಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ನಿಂದಿಸಲಾಗಿತ್ತು. ಈ ವೇಳೆ ಮೈದಾನದಲ್ಲೇ ಅಂಪೈರ್ ಗಮನಕ್ಕೆ ತರಲಾಗಿತ್ತು. ಮೂರನೇ ಟೆಸ್ಟ್ ಪಂದ್ಯ ನಾಲ್ಕನೇ ದಿನದಾಟದಂದು ಆಟಗಾರರಿಗೆ ನಿಂದಿಸಿದ ಹಿನ್ನೆಲೆಯಲ್ಲಿ ಸುಮಾರು 10 ನಿಮಿಷಗಳ ಪಂದ್ಯ ಸ್ಥಗಿತಗೊಂಡಿತ್ತು.

ಇದನ್ನೂ ಓದಿ: ದೇವರಾದ ಪುನೀತ್

ಜನಾಂಗೀಯ ನಿಂದನೆ, ಮೈದಾನದಲ್ಲಿ ಆಸೀಸ್ ಕ್ರಿಕೆಟಿಗರ ಸ್ಲೆಡ್ಜಿಂಗ್ ನಡುವೆಯೂ ಭಾರತ ತಂಡ 4 ಪಂದ್ಯಗಳ ಸರಣಿಯನ್ನು 2-1 ರಿಂದ ಜಯ ದಾಖಲಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net