

ಕೋಪನ್‌ಹೇಗನ್: ಭಾರತದ ಸ್ಟಾರ್ ಷಟ್ಲರ್‌ಗಳಾದ ಎಚ್‌ಎಸ್ ಪ್ರಣಯ್ ಹಾಗೂ ಲಕ್ಷ್ಯ ಸೇನ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸುತ್ತಿನಲ್ಲಿ ನೇರ ಗೇಮ್‌ಗಳ ಗೆಲುವಿನೊಂದಿಗೆ ಶುಭಾರಂಭ ಕಂಡಿದ್ದಾರೆ.
ಸೋಮವಾರ ಆರಂಭಗೊಂಡ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ.9 ಪ್ರಣಯ್ 24-22, 21-10 ರಿಂದ ಫಿನ್ಲೆಂಡ್‌ನ ಕೊಲ್ಜೊನೆನ್ ವಿರುದ್ಧ ಗೆಲುವು ದಾಖಲಿಸಿದರು.ಇದರೊಂದಿಗೆ 3-0 ಗೆಲುವಿನ ಓಟ ವಿಸ್ತರಿಸಿದರು. ಕಳೆದ ಎರಡು ಆವೃತ್ತಿಗಳಲ್ಲಿ ಕ್ವಾರ್ಟರ್‌ೈನಲ್ ತಲುಪಿದ್ದ ಪ್ರಣಯ್ ಹಾಲಿ ಋತುವಿನಲ್ಲಿ ಉತ್ತಮ ಲುಯದಲ್ಲಿದ್ದು ಭಾರತದ ಪದಕ ಭರವಸೆ ಎನಿಸಿದ್ದಾರೆ. 31 ವರ್ಷದ ಪ್ರಣಯ್ ಮುಂದಿನ ಸುತ್ತಿನಲ್ಲಿ ಇಂಡೋನೇಷ್ಯಾದ ಚಿಕೋ ಔರಾ ದ್ವಿ ವಾರ್ಡೋಯೋ ವಿರುದ್ಧ ಸೆಣಸಲಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ಆರಂಭಿಕ ಸುತ್ತಿನಲ್ಲಿ 21-12,21-7 ರಿಂದ ಮಾರೀಷಸ್‌ನ ಜಾರ್ಜಿಸ್ ಜೂಲಿಯನ್ ಪೌಲ್ ಎದುರು ಗೆಲುವು ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ 14-21, 14-21 ರಿಂದ ಜಪಾನ್ ಕೆಂಟಾ ನಿಶಿಮೋಟಾ ಎದುರು ನಿರಾಸೆ ಕಂಡರು. ಮಿಶ್ರ ಡಬಲ್ಸ್ ನಲ್ಲಿ ರೋಹನ್ ಕಪೂರ್-ಎನ್ ಸಿಕ್ಕಿ ರೆಡ್ಡಿ ಜೋಡಿ 14-21, 22-20, 18-21 ರಿಂದ ಸ್ಕಾಟ್ಲೆಂಡ್‌ನ ಆಡಮ್ ಹಾಲ್-ಜೂಲಿ ಮ್ಯಾಕ್ಫರ್ಸನ್ ವಿರುದ್ದ ಮೊದಲ ಸುತ್ತಿನಲ್ಲಿ ಸೋತು ನಿರಾಸೆ ಕಂಡರು.