ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಮೊದಲ ಪಂದ್ಯಗಳಲ್ಲಿ ಪಿವಿ ಸಿಂಧು, ಕೆ.ಶ್ರೀಕಾಂತ್‌ಗೆ ವೀರೋಚಿತ ಸೋಲು

k srikanth and sindhu for web
Published on

ಬ್ಯಾಂಕಾಕ್: ವಿಶ್ವ ಚಾಂಪಿಯನ್ ಪಿವಿ ಸಿಂಧು ಹಾಗೂ ಮಾಜಿ ವಿಶ್ವ ನಂ.1 ಕೆ.ಶ್ರೀಕಾಂತ್, ಎಚ್‌ಎಸ್‌ಬಿಸಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿಯ ಮೊದಲ ಪಂದ್ಯಗಳಲ್ಲಿ ಮುಗ್ಗರಿಸಿದ್ದಾರೆ. ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಬಿ ಗುಂಪಿನ ಪಂದ್ಯದಲ್ಲಿ ಪಿವಿ ಸಿಂಧು 21-19, 12-21, 17-21 ಗೇಮ್‌ಗಳಿಂದ ಚೀನಾ ತೈಪೆಯ ವಿಶ್ವ ನಂ.1 ತೈ ಜು ಯಿಂಗ್ ಎದುರು 59 ನಿಮಿಷಗಳ ಹೋರಾಟದಲ್ಲಿ ವೀರೋಚಿತ ಸೋಲು ಅನುಭವಿಸಿದರು. ಇದು ಸಿಂಧುಗೆ ತೈ ಜು ಎದುರು ಆಡಿದ 21ನೇ ಪಂದ್ಯದಲ್ಲಿ ಅನುಭವಿಸಿದ 16ನೇ ಸೋಲಾಗಿದೆ.

ಮೊದಲ ಗೇಮ್‌ನಲ್ಲಿ ಭರ್ಜರಿ ನಿರ್ವಹಣೆ ತೋರಿದ ಸಿಂಧು ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿ ಜಯ ದಾಖಲಿಸಿದರು. ಆರಂಭದಲ್ಲೇ ತೈಜು 3-5 ರಿಂದ ಹಿನ್ನಡೆ ಅನುಭವಿಸಿದ ಸಿಂಧು, ಬ್ರೇಕ್ ಅವಧಿ ವೇಳೆಗೆ 8-11 ರಿಂದ ಹಿನ್ನಡೆ ಕಂಡರು. ಬಳಿಕ ಸತತ ಪಾಯಿಂಟ್ಸ್ ಕಲೆಹಾಕಿದ ಲವಾಗಿ ಪಂದ್ಯ 16-16 ರಿಂದ ಸಮಬಲ ಸಾಧಿಸಿದರು. ಬಳಿಕ 19-19 ರಿಂದ ಗೇಮ್ ಸಮಬಲ ಕಂಡರೂ ಕಡೇ ಎರಡು ಪಾಯಿಂಟ್ಸ್ ಗಿಟ್ಟಿಸಿಕೊಂಡು ಸಿಂಧು ಮೊದಲ ಗೇಮ್‌ನ್ನು 21-19 ರಿಂದ ಒಲಿಸಿಕೊಂಡರು. ಬಳಿಕ ಎರಡನೇ ಗೇಮ್‌ನಲ್ಲಿ ತೈಜು ಅಬ್ಬರದ ಎದುರು ಸಂಪೂರ್ಣ ಮಂಕಾದ ಸಿಂಧು 12-21 ರಿಂದ ಬಿಟ್ಟುಕೊಟ್ಟರು. ನಿರ್ಣಾಯಕ 3ನೇ ಹಾಗೂ ಅಂತಿಮ ಗೇಮ್‌ನಲ್ಲಿ ಸಮಬಲ ಪೈಪೋಟಿ ನೀಡಿದರೂ ತೈಜು ನಿರ್ವಹಣೆ ಎದುರು ಸಿಂಧು ಮಂಕಾದರು.

ಕೆ. ಶ್ರೀಕಾಂತ್‌ಗೆ ನಿರಾಸೆ

ಅಂತಿಮ ಕ್ಷಣದವರೆಗೂ ತೀವ್ರ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಕೆ.ಶ್ರೀಕಾಂತ್ 21-15, 16-21, 18-21 ಗೇಮ್‌ಗಳಿಂದ ಡೆನ್ಮಾರ್ಕ್‌ನ ಅಂಡೆರ್ಸ್‌ ಅಂಟೊನ್ಸನ್ ಎದುರು 77 ನಿಮಿಷಗಳ ಕದನದಲ್ಲಿ ಸೋಲನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net