ಜೋಸ್​ ಬಟ್ಲರ್​ ಫೇವರಿಟ್​ ಐಪಿಎಲ್​ ಹನ್ನೊಂದರ ಬಳಗದಲ್ಲಿ ಯಾರೆಲ್ಲ ಇದ್ದಾರೆ ಗೊತ್ತಾ?

jose bhuttler and all time ipl players for web
Published on

ನವದೆಹಲಿ: ವಿಶ್ವದ ಪ್ರತಿಯೊಬ್ಬ ಕ್ರಿಕೆಟಿಗನಿಗೂ ಕ್ರಿಕೆಟ್​ ಲೀಗ್​ಗಳ ಪೈಕಿ ಐಪಿಎಲ್​ ಫೇವರಿಟ್​ ಟೂನಿರ್ ಎಂಬುದರಲ್ಲಿ ಎರಡು ಮಾತಿಲ್ಲ. ಇಂಗ್ಲೆಂಡ್​ನ ಜೋಸ್​ ಬಟ್ಲರ್​ ಐಪಿಎಲ್​ನಲ್ಲಿ ತನ್ನದೇ ಛಾಪು ಮೂಡಿಸಿರುವ ಆಟಗಾರ. 2018ರಿಂದಲೂ ರಾಜಸ್ಥಾನ ರಾಯಲ್ಸ್​ ತಂಡದ ಭಾಗವಾಗಿದ್ದಾರೆ. ಆರಂಭಿಕ ಬ್ಯಾಟ್ಸ್​ಮನ್​ ಬಟ್ಲರ್​, ಸ್ಫೋಟಕ ಬ್ಯಾಟಿಂಗ್​ ಮೂಲಕ ಗಮನಸೆಳೆಯುತ್ತಿದ್ದಾರೆ. ಕೋವಿಡ್​ನಿಂದಾಗಿ ಈ ಬಾರಿ 14ನೇ ಐಪಿಎಲ್​ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಅನಿದಿರ್ಷ್ಟಾವಧಿವರೆಗೆ ಮುಂದೂಡಲಾಗಿದೆ. ಇದೀಗ ಬಿಡುವಿನಲ್ಲಿರುವ ಬಟ್ಲರ್​, ಕ್ರಿಕೆಟ್​ ವೆಬ್​ಸೈಟ್​ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಆಲ್​ಟೈಮ್​ ಫೇವರಿಟ್​ ಇಲೆವೆನ್​ ಪ್ರಕಟಿಸಿದ್ದಾರೆ. ತಮ್ಮ ಫೇವರಿಟ್​ ತಂಡದಲ್ಲಿ ತಮ್ಮ ಹೆಸರನ್ನು ಪ್ರಕಟಿಸಿದ್ದಾರೆ,

2008ರಲ್ಲಿ ಆರಂಭಗೊಂಡ ಐಪಿಎಲ್​ ವಿಶ್ವವ್ಯಾಪ್ತಿ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದೆ. ಎಂಎಸ್​ ಧೋನಿ, ಕ್ರಿಸ್​ ಗೇಲ್​, ಕೈರಾನ್​ ಪೊಲ್ಲಾರ್ಡ್​, ವಿರಾಟ್​ ಕೊಹ್ಲಿ, ಎಬಿಡಿ, ರೋಹಿತ್​ ಶರ್ಮ ಹೀಗೆ..ಟೂರ್ನಿಯಲ್ಲಿ ಮಿಂಚುತ್ತಿರುವ ಸ್ಟಾರ್​ ಕ್ರಿಕೆಟಿಗರ ಪಟ್ಟಿ ಬೆಳೆಯುತ್ತದೆ. 30 ವರ್ಷದ ಬಟ್ಲರ್​ ಐಪಿಎಲ್​ನ ಆಲ್​ ಟೈಮ್​ ಫೇವರಿಟ್​ ಆಟಗಾರರನ್ನು ಹೆಸರಿಸಿದ್ದಾರೆ. ಬಟ್ಲರ್​ನಲ್ಲಿ ಐಪಿಎಲ್​ನಲ್ಲಿ ಇದುವರೆಗೂ ಆಡಿರುವ 64 ಇನಿಂಗ್ಸ್​ಗಳಿಂದ 1986 ರನ್​ ಪೇರಿಸಿದ್ದಾರೆ.

ಬಟ್ಲರ್ ​ಫೇವರಿಟ್​ ಇಲೆವೆನ್​: ಜೋಸ್​ ಬಟ್ಲರ್​, ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಎಬಿ ಡಿವಿಲಿಯರ್ಸ್​, ಎಂಎಸ್​ ಧೋನಿ (ವಿಕೀ), ಕೈರಾನ್​ ಪೊಲ್ಲಾರ್ಡ್​, ರವೀಂದ್ರ ಜಡೇಜಾ, ಹರ್ಭಜನ್​ ಸಿಂಗ್​, ಭುವನೇಶ್ವರ್​ ಕುಮಾರ್​, ಜಸ್​ಪ್ರೀತ್​ ಬುಮ್ರಾ, ಲಲಿತ್​ ಮಾಲಿಂಗ.

ಟೂರ್ನಿ ಇತಿಹಾಸದಲ್ಲಿಯೇ ಅತಿಹೆಚ್ಚು ರನ್​ಗಳಿಸಿರುವ ಮೂರನೇ ಬ್ಯಾಟ್ಸ್​ಮನ್​ ಸುರೇಶ್​ ರೈನಾ (5491), ಶಿಖರ್​ ಧವನ್​, ಅಮಿತ್​ ಮಿಶ್ರಾ, ಡೇವಿಡ್​ ವಾರ್ನರ್​ಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net