ಇನ್ಮುಂದೆ ಈ ರೀತಿ ಕ್ಯಾಚ್​ ಹಿಡಿದರೆ ಔಟ್​ ಇಲ್ಲ: ಜಾರಿಯಾಯ್ತು ಹೊಸ ನಿಯಮ, ಬನ್ನಿ ಹಾಪ್​ ಕ್ಯಾಚ್ ಬ್ಯಾನ್! Bunny Hop Catch ​​

Bunny Hop Catch
Published on

Bunny Hop Catch : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಬೌಂಡರಿ ಲೈನ್ ಬಳಿ ತೆಗೆದುಕೊಳ್ಳುವ ಕ್ಯಾಚ್‌ಗಳ ಕುರಿತು ಹೊಸ ನಿಯಮಗಳನ್ನು ಪರಿಚಯಿಸಲು ಸಜ್ಜಾಗಿವೆ.

ಬನ್ನಿ ಹಾಪ್​ ಕ್ಯಾಚ್ (Bunny half catch) ಅಂದರೆ ಚೆಂಡನ್ನು ಬೌಂಡರಿ ಲೈನ್‌ನ ಹೊರಗಿನಿಂದ ಮೇಲಕ್ಕೆ ಜಿಗಿದು ಒಳಗೆ ಎಸೆಯುವುದು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ. ಆದಾಗ್ಯೂ, ಚೆಂಡನ್ನು ಬೌಂಡರಿಯ ಒಳಗಿನಿಂದಲೇ ಮೇಲಕ್ಕೆ ಎಸೆದು, ನಂತರ ಹೊರಗೆ ಹೋಗಿ ಮತ್ತೆ ಹಿಂದಕ್ಕೆ ಡೈವ್ ಮಾಡಿ ಕ್ಯಾಚ್ ಹಿಡಿದರೆ, ಅದನ್ನು ಕ್ಯಾಚ್ ಎಂದು ಪರಿಗಣಿಸಲಾಗುತ್ತದೆ. ಈ ತಿಂಗಳ ಅಂತ್ಯದಿಂದ ಈ ನಿಯಮ ಜಾರಿಗೆ ಬರಲಿದ್ದು, 2025ರ ಅಕ್ಟೋಬರ್ ತಿಂಗಳಲ್ಲಿ ಎಂಸಿಸಿಯ ಕ್ರಿಕೆಟ್ ನಿಯಮಗಳಲ್ಲಿ ಔಪಚಾರಿಕವಾಗಿ ಸೇರಿಸಲಾಗುವುದು.

ಉದಾಹರಣೆಗೆ, 2023ರ ಬಿಗ್ ಬ್ಯಾಷ್ ಲೀಗ್‌ನಲ್ಲಿ, ಮೈಕೆಲ್ ನೇಸರ್ ಬೌಂಡರಿ ಲೈನ್‌ನಲ್ಲಿ ಕ್ಯಾಚ್ ಪಡೆದರು. ಆದರೆ, ಸಮತೋಲನ ಕಳೆದುಕೊಂಡು ಚೆಂಡನ್ನು ಗಾಳಿಗೆ ಎಸೆದರು. ನಂತರ ಅವರು ಬೌಂಡರಿ ಲೈನ್ ದಾಟಿದರು. ಅಲ್ಲಿ, ಅವರು ಗಾಳಿಯಲ್ಲಿ ಹಾರಿ, ಚೆಂಡನ್ನು ಹಿಡಿದು ಮತ್ತೆ ಮೇಲಕ್ಕೆ ಎಸೆದರು. ಬಳಿಕ ಬೌಂಡರಿ ಲೈನ್​ನಿಂದ ಒಳಗೆ ಬಂದು ಮತ್ತೆ ಮೈದಾನದಲ್ಲಿ ಕ್ಯಾಚ್​ ಹಿಡಿದರು. ಇದರೊಂದಿಗೆ, ಬ್ಯಾಟರ್ ಔಟಾದರು. ಆ ಸಮಯದಲ್ಲಿ ಈ ಕ್ಯಾಚ್ ಬಗ್ಗೆ ಭಾರಿ ಗದ್ದಲ ಉಂಟು ಮಾಡಿತು. ಈ ಪ್ರಕ್ರಿಯೆಯಲ್ಲಿ, ಎಂಸಿಸಿ ಬನ್ನಿ ಹಾಪ್ಸ್ ಕ್ಯಾಚ್ ಕಾನೂನುಬಾಹಿರ ಎಂದು ಘೋಷಿಸಿದೆ.

ಆದಾಗ್ಯೂ, ಬೌಂಡರಿಯ ಒಳಗಿನಿಂದಲೇ ಚೆಂಡನ್ನು ಹಿಡಿದು ಮೇಲಕ್ಕೆ ಎಸೆದು ಬೌಂಡರಿಯ ಹೊರಗೆ ಹೋಗಿ, ನಂತರ ಅದನ್ನು ಹಿಡಿಯಲು ಮತ್ತೆ ಬೌಂಡರಿ ಒಳಗೆ ಡೈವ್ ಮಾಡಲು ಅವಕಾಶವಿದೆ. ಉದಾಹರಣೆಗೆ, ಈ ಕೆಳಗಿನ ವಿಡಿಯೋದಲ್ಲಿ ಹರ್ಲೀನ್ ಡಿಯೋಲ್​ರಂತೆ ಕ್ಯಾಚ್​ ಹಿಡಿದರೆ ಅದು ಮಾನ್ಯವಾಗಿರುತ್ತದೆ.

ನಾವು ಬನ್ನಿ ಹಾಪ್ ಕ್ಯಾಚ್‌ಗಳನ್ನು ತೆಗೆದುಹಾಕಿದ್ದೇವೆ. ಬೌಂಡರಿಯ ಒಳಗಿನಿಂದ ಚೆಂಡನ್ನು ಮೇಲಕ್ಕೆ ಎಸೆಯಲು, ಹೊರಗೆ ಹೋಗಿ ನಂತರ ಅದನ್ನು ಹಿಡಿಯಲು ಡೈವ್ ಮಾಡಲು ಅನುಮತಿಸಲಾಗಿದೆ ಎಂದು ಎಂಸಿಸಿ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net