ಶುಭಮಾನ್​ ಗಿಲ್​ಗೆ ಭಾರತ ಟೆಸ್ಟ್​ ತಂಡದ ನಾಯಕತ್ವ, ಕೊನೆಗೂ ಮೌನ ಮುರಿದ ವೇಗಿ ಜಸ್​ಪ್ರೀತ್ ಬುಮ್ರಾ

New Project (4)
Published on

ಲಂಡನ್​: ರೋಹಿತ್​ ಶರ್ಮ ನಿವೃತ್ತಿಯ ನಂತರದಲ್ಲಿ ಜಸ್​ಪ್ರೀತ್​ ಬುಮ್ರಾಗೆ ಫಿಟ್ನೆಸ್​ ಕಾರಣದಿಂದಾಗಿ ಭಾರತ ಟೆಸ್ಟ್​ ತಂಡದ ಸಾರಥ್ಯ ನೀಡುತ್ತಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದವು. ಶುಭಮಾನ್​ ಗಿಲ್​ಗೆ ಟೆಸ್ಟ್​ ತಂಡದ ನಾಯಕತ್ವ ನೀಡಿದ ಬಳಿಕ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್​ ಅಗರ್ಕರ್​ ಕೂಡ ಸುದ್ದಿಗೋಷ್ಠಿಯಲ್ಲಿ ಇದನ್ನೇ ಹೇಳಿದ್ದರು. ಆದರೆ ಇದೀಗ ಬುಮ್ರಾ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡಿದ್ದು, ಟೆಸ್ಟ್​ ತಂಡದ ನಾಯಕತ್ವವನ್ನು ನಾನೇ ನಿರಾಕರಿಸಿದ್ದೆ ಎಂದಿದ್ದಾರೆ.

"ಐಪಿಎಲ್​ ನಡುವೆ ರೋಹಿತ್​, ಕೊಹ್ಲಿ ನಿವೃತ್ತಿ ಪ್ರಕಟಿಸುವುದಕ್ಕೆ ಮುನ್ನ ನಾನು ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತನಾಡಿದ್ದೆ ಮತ್ತು 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಕಾರ್ಯದೊತ್ತಡ ನಿಭಾಯಿಸುವ ಬಗ್ಗೆ ಚರ್ಚಿಸಿದ್ದೆ. ನನಗೆ ಎಲ್ಲ ಟೆಸ್ಟ್​ಗಳಲ್ಲಿ ಆಡಲು ಸಾಧ್ಯವಿಲ್ಲದ ಕಾರಣ ನಾಯಕತ್ವದ ಪಾತ್ರ ಬೇಡ ಎಂದಿದ್ದೆ. ಬಿಸಿಸಿಐ ನನಗೆ ನಾಯಕತ್ವ ನೀಡಲು ಸಿದ್ಧವಾಗಿತ್ತು. ಆದರೆ 3 ಪಂದ್ಯಗಳಲ್ಲಿ ನಾನು ನಾಯಕತ್ವ ನಿರ್ವಹಿಸಿ, ಇತರ ಪಂದ್ಯಗಳಲ್ಲಿ ಬೇರೆಯವರು ನಾಯಕರಾಗುವುದು ಸರಿಯಲ್ಲ ಎಂಬುದು ನನ್ನ ನಿಲುವಾಗಿತ್ತು. ತಂಡಕ್ಕೆ ಮೊದಲ ಆದ್ಯತೆ ನೀಡಲು ನಾನು ಬಯಸಿದ್ದೆ' ಎಂದು ಬುಮ್ರಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net