

ತಮಿಳುನಾಡು: 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಟ್ರೋಫಿ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಜಸ್ಪ್ರಿತ್ ಬುಮ್ರಾ ಸದ್ಯ ಟೂರ್ನಿ ಮುಕ್ತಾಯಗೊಂಡ ನಂತರ ದೀರ್ಘ ವಿಶ್ರಾಂತಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಯಾವುದೇ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಳ್ಳದ ಬುಮ್ರಾ, ತಮಿಳುನಾಡಿನ ಚೆನ್ನೈನಲ್ಲಿರುವ ಕಾಲೇಜು ಉತ್ಸವಕ್ಕೆ ಅತಿಥಿಯಾಗಿ ಹೋಗಿರುವ ವಿಡಿಯೋವೊಂದು ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಟೀಮ್ ಇಂಡಿಯಾದ ಅದ್ಭುತ ಬೌಲರ್ ಹಾಗೂ ವಿಶ್ವದ ಬೆಸ್ಟ್ ವೇಗಿ ಎಂದೇ ಹೆಸರುವಾಸಿಯಾಗಿರುವ ಜಸ್ಪ್ರಿತ್ ಬುಮ್ರಾ ಕಂಡರೆ ಅದೇನೋ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಅಭಿಮಾನ, ಪ್ರೀತಿ. ಬುಮ್ರಾ ಮೈದಾನಕ್ಕೆ ಬಂದಾಗಲೆಲ್ಲಾ 'ಯಾರ್ಕರ್ ಕಿಂಗ್' ಎಂದು ಚೀರಾಡುವ ಫ್ಯಾನ್ಸ್, ಇದೀಗ ಚೆನ್ನೈನ ಕಾಲೇಜಿನಲ್ಲಿ ನಡೆದ ಉತ್ಸವಕ್ಕೆ ಅತಿಥಿಯಾಗಿ ಹೋಗಿರುವುದನ್ನು ಕಂಡು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಥೇಟ್ ಸಿನಿಮಾ ಹೀರೋಗಳಂತೆ ವೇದಿಕೆಗೆ ಬುಮ್ರಾ ಎಂಟ್ರಿ ಕೊಟ್ಟಿದ್ದು, ವಿದ್ಯಾರ್ಥಿಗಳಿಂದ ಶಿಳ್ಳೆ, ಚಪ್ಪಾಳೆ ಸ್ವೀಕರಿಸಿದ್ದಾರೆ.
ಚೆನ್ನೈನ ಸತ್ಯಭಾಮಾ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದ ವೀಡಿಯೊವನ್ನು ಸ್ವತಃ ಬುಮ್ರಾ ಅವರೇ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ದೃಶ್ಯದಲ್ಲಿ ಥೇಟ್ ಸಿನಿಮಾಗಳಲ್ಲಿ ಸ್ಟಾರ್ ನಟರು ಯಾವ ರೀತಿ ಅದ್ಧೂರಿಯಾಗಿ ಎಂಟ್ರಿ ಕೊಡುತ್ತಾರೋ ಹಾಗೆಯೇ ಬುಮ್ರಾ ಕೂಡ ಮೊದಲು ತಮ್ಮ ಕಾರಿನಿಂದ ಇಳಿದು ಬಂದು, ನಂತರದಲ್ಲಿ ವೇದಿಕೆ ಮೇಲೆ ಸ್ಟೈಲಿಶ್ ಆಗಿ ನಡೆದು ಹೋಗಿದ್ದಾರೆ. ಸದ್ಯ ಈ ವಿಡಿಯೋ ನೆಟ್ಟಿಗರ ಮೆಚ್ಚುಗೆಗಳಿಂದಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).