

ಬೆಂಗಳೂರು: ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ಆರಂಭಿಕ 2 ಪಂದ್ಯಗಳಲ್ಲಿ ಪರಾಭವಗೊಂಡಿರುವ ಗೂಳಿಗಳು, ಆತಿಥೇಯ ಪ್ರೇಕ್ಷಕರ ಎದುರು ತವರಿನಲ್ಲಿ ಕಂಬ್ಯಾಕ್ ಮಾಡಲಿವೆ. ಹಲವು ವರ್ಷಗಳಿಂದ ಬೆಂಬಲ ನೀಡುತ್ತಿರುವ ಅಭಿಮಾನಿಗಳು ನಮ್ಮ ತಂಡಕ್ಕೆ ಸದಾ ಸ್ಫೂರ್ತಿ ಎಂದು ಬೆಂಗಳೂರು ಬುಲ್ಸ್ ತಂಡದ ಕೋಚ್ ರಣಧೀರ್ ಶೆರಾವತ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ ಕಬಡ್ಡಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಬೆಂಗಳೂರು ಬುಲ್ಸ್ ಮುಂಚೂಣಿಯಲ್ಲಿದೆ. ನಾವು ಇತ್ತೀಚೆಗೆ ಟ್ರೋಫಿ ಜಯಿಸಲು ವಿಲವಾಗಿರಬಹುದು. ಆದರೆ 5ರಿಂದ 6 ಸೀಸನ್‌ಗಳಲ್ಲಿ ಸೆಮಿೈನಲ್ ಪ್ರವೇಶಿಸಿದ್ದೇವೆ. ನಮ್ಮ ಕಾರ್ಯಯೋಜನೆಯಂತೆ ಈ ಬಾರಿ ನಿರೀಕ್ಷೆಗೆ ತಕ್ಕ ತಂಡ ರಚಿಸಲಾಗಿದೆ. ಹಿಂದಿನ 9 ಸೀಸನ್‌ಗಿಂತ ಈ ಬಾರಿ ಅದ್ಭುತ ತಂಡ ರೂಪುಗೊಂಡಿದೆ. ಪ್ರತಿ ಬಾರಿ ಹರಾಜಿನಲ್ಲಿ ನಮಗೆ ಬೇಕಾದ ಆಟಗಾರರು ಸಿಗುತ್ತಿರಲಿಲ್ಲ. ಈ ಬಾರಿ ನಮಗೆ ಸೂಕ್ತ ಆಟಗಾರರು ದೊರೆತಿದ್ದು, ಏಷ್ಯನ್ ಗೇಮ್ಸ್ ಚಿನ್ನ ವಿಜೇತ ತಂಡದ ಅನುಭವಿ ಸುರ್ಜಿತ್ ಸಿಂಗ್ ಈ ಬಾರಿ ಮತ್ತಷ್ಟು ಬಲ ತುಂಬಲಿದ್ದಾರೆ. ಅನುಭವಿ ಹಾಗೂ ಯುವ ಆಟಗಾರರ ಸಂಯೋಜನೆ ಮುಂದಿನ ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಡಲಿದೆ ಎಂದರು.
ಬೆಂಗಳೂರು ್ರಾಂಚೈಸಿ ಸ್ಟಾರ್ ಆಟಗಾರರ ಹಿಂದೆ ಹೋಗುವುದಿಲ್ಲ. ಯುವ ಆಟಗಾರನ್ನು ತಂಡಕ್ಕೆ ಕರೆತಂದು ಸ್ಟಾರ್ ಆಟಗಾರರನ್ನಾಗಿ ಮಾಡಲಾಗುತ್ತದೆ. ಹಿಂದಿನ ಆವೃತ್ತಿಗಳಲ್ಲಿ ಮಂಜಿತ್ ಚಿಲ್ಲರ್, ಅಜಯ್ ಠಾಕೂರ್, ಪವನ್ ಶೆರಾವತ್ ಎಲ್ಲರೂ ಎಲೆಮರೆಕಾಯಿಯಂತೆ ಇದ್ದರು. ಪ್ರೊ ಕಬಡ್ಡಿಯ ಯಶಸ್ಸಿನ ನಂತರ ಭಾರತ ತಂಡದಲ್ಲಿ ಆಡಿ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಖೇಲೋ ಇಂಡಿಯಾ ಯುನಿರ್ವಸಿಟಿ ಗೇಮ್ಸ್‌ನಲ್ಲಿ ಭರತ್ ಆಟದಿಂದ ಪ್ರಭಾವಿತನಾಗಿ ಎನ್‌ವೈಪಿ (ಯುವ ಆಟಗಾರ) ಕೋಟಾದಲ್ಲಿ ತಂಡದಲ್ಲಿ ಕರೆತರಲಾಯಿತು. ಅದರ ಲಿತಾಂಶ ಸೀಸನ್‌ನ ಬೆಸ್ಟ್ ರೈಡರ್ ಎನಿಸಿದರು. ಈ ಬಾರಿಯೂ ಕರ್ನಾಟಕದ ರಕ್ಷಿತ್, ಬಂಟಿ, ಅಮನ್‌ರಂಥ ಯುವ ರೈಡರ್‌ಗಳ ಬಲವಿದೆ ಎಂದು ರಣಧೀರ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ತಂಡದ ನಾಯಕ ಸೌರಭ್ ನಂದಲ್, ಭರತ್, ವಿಕಾಸ್ ಕಂಡೋಲಾ ಹಾಗೂ ಸುರ್ಜಿತ್ ಸಿಂಗ್ ಇದ್ದರು. ಶುಕ್ರವಾರದಿಂದ ಬೆಂಗಳೂರು ಚರಣದ ಪಂದ್ಯಗಳು ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಬುಲ್ಸ್ ತಂಡ ಮೊದಲ ಪಂದ್ಯದಲ್ಲಿ ದಬಾಂಗ್ ದೆಹಲಿ ವಿರುದ್ಧ ಸೆಣಸಲಿದೆ.
ಸಂವಹನ ಕೊರತೆಯಿಂದ ಸೋಲು: 10ನೇ ಆವೃತ್ತಿಗೂ ಮುನ್ನ 45-50 ದಿನಗಳ ಶಿಬಿರ ಆಯೋಜಿಸಲಾಗಿತ್ತು. ಕಾರಣಾಂತರಗಳಿಂದ ರೈಡರ್ ಭರತ್ ತಡವಾಗಿ ತಂಡ ಕೂಡಿಕೊಂಡರು. ಆದ್ದರಿಂದ ಆಟಗಾರರ ನಡುವೆ ಕಾರ್ಯತಂತ್ರದ ಸಂವಹನ ಕೊರತೆಯಿಂದ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಬೇಕಾಯಿತು. ಬುಲ್ಸ್ ಪ್ರತಿ ಬಾರಿ ದ್ವಿತೀಯಾರ್ಧದಲ್ಲಿ ಕಂಬ್ಯಾಕ್ ಮಾಡಿ ಯಶಸ್ಸು ಸಾಧಿಸಿದೆ. ಈ ಬಾರಿ ತವರಿನ ಅಭಿಮಾನಿಗಳ ಎದುರು ಗೆಲುವಿನ ಖಾತೆ ತೆರೆಯುವ ಮೂಲಕ ಪುಟೆದೇಳಲಿದ್ದೇವೆ. ಸತತ 10 ಆವೃತ್ತಿಯಿಂದಲೂ ಒಂದೇ ್ರಾಂಚೈಸಿಯ ತರಬೇತುದಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಬೇರೆ ತಂಡಗಳ ಆರ್‌ಗಳನ್ನು ನಿರಾಕರಿಸಿದೆ. ಅದಕ್ಕೆ ಕಾರಣ ಬೆಂಗಳೂರು ಜನತೆಯ ಪ್ರೀತಿ, ಕಾಳಜಿ ಅವರಿಗೆ ನಾನು ಎಂದಿಗೂ ಮರೆಯಲಾರೆ. ಜತೆಗೆ ಮುಂದೆ ಬೇರೆ ್ರಾಂಚೈಸಿಗಳಿಗೆ ತರಬೇತಿ ನೀಡುವ ಆಲೋಚನೆಯೂ ಇಲ್ಲ ಎಂದು ರಣಧೀರ್ ತಿಳಿಸಿದರು.