

ನವದೆಹಲಿ: ಕ್ರಿಕೆಟ್ ಜತೆಗೆ ಸಂಗೀತ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಮಾಡುತ್ತಿರುವ ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇಯ್್ನ ಬ್ರಾವೊ, ಈಗಾಗಲೆ ‘ಚಾಂಪಿಯನ್ಸ್’ ಆಲ್ಬಂ ಮೂಲಕ ಗಮನಸೆಳೆದಿದ್ದಾರೆ. ಇದೀಗ ಮತ್ತೊಂದು ಹೊಸ ಹಾಡು ಸಿದ್ಧಪಡಿಸುತ್ತಿದ್ದಾರೆ.
ತಮ್ಮ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಬಗೆಗಿನ ಹಾಡು ಇದಾಗಿರುವುದು ವಿಶೇಷ. ನಟಿ ಸನ್ನಿ ಲಿಯೋನ್ ಜತೆಗಿನ ಇನ್ಸ್ಟಾಗ್ರಾಂ ಲೈವ್ ಕಾರ್ಯಕ್ರಮದ ವೇಳೆ ಬ್ರಾವೊ ಇದನ್ನು ಬಹಿರಂಗಪಡಿಸಿದ್ದಾರೆ. ‘ನಾನೀಗ ನಂಬರ್ 7 ಎಂಬ ಹೊಸ ಹಾಡು ಸಿದ್ಧಪಡಿಸುತ್ತಿದ್ದೇನೆ.
ಅದು ಎಂಎಸ್ ಧೋನಿ ಅವರಿಗಾಗಿಯೇ ಬರೆದಿರುವ ಹಾಡು. ಅವರ ವೃತ್ತಿಜೀವನ, ಸಾಧನೆ ಮತ್ತು ಎಲ್ಲ ಕ್ರಿಕೆಟಿಗರು ಅವರ ಮೇಲಿಟ್ಟಿರುವ ಪ್ರೀತಿಯ ಬಗೆಗಿನ ಹಾಡು ಇದಾಗಿದೆ. ಹೀಗಾಗಿ ನಂಬರ್ 7 ಎಂದೇ ಹೆಸರು ಇಟ್ಟಿರುವೆ’ ಎಂದು ಬ್ರಾವೊ ವಿವರಿಸಿದ್ದಾರೆ.