

ಅಡಿಲೇಡ್: ಪ್ರಮುಖ ಬ್ಯಾಟರ್‌ಗಳ ವೈಲ್ಯದಿಂದಾಗಿ ಪ್ರವಾಸಿ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಎರಡನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದ ಮೊದಲ ದಿನ ಆಸ್ಟ್ರೇಲಿಯನ್ನರಿಗೆ ಮೇಲುಗೈ ಬಿಟ್ಟುಕೊಟ್ಟಿದೆ. ಪರ್ತ್ ಟೆಸ್ಟ್ ಗೆಲುವಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಭಾರತ ತಂಡ, ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (48ಕ್ಕೆ 6) ಜೀವನಶ್ರೇಷ್ಠ ಬೌಲಿಂಗ್ ದಾಳಿಗೆ ತತ್ತರಿಸಿ ಸಾಧಾರಣ ಮೊತ್ತಕ್ಕೆ ಕುಸಿಯಿತು. ಇದಕ್ಕೆ ಉತ್ತರವಾಗಿ ಯುವ ಬ್ಯಾಟರ್ ನಾಥನ್ ಮೆಕ್‌ಸ್ವೀನಿ (38* ರನ್, 97 ಎಸೆತ, 6 ಬೌಂಡರಿ) ಹಾಗೂ ಅನುಭವಿ ಮಾರ್ನಸ್ ಲಬುಶೇನ್ (20* ರನ್,67 ಎಸೆತ, 3 ಬೌಂಡರಿ) ದಿಟ್ಟ ಜತೆಯಾಟದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ದಿನದಾಟದ ಗೌರವ ಸಂಪಾದಿಸಿದೆ.
*3: ಜಸ್‌ಪ್ರೀತ್ ಬುಮ್ರಾ ಹಾಲಿ ವರ್ಷ 50 ವಿಕೆಟ್ ಕಬಳಿಸಿದ ಮೊದಲ ಮತ್ತು ಒಟ್ಟಾರೆ ಮೂರನೇ ಭಾರತೀಯ ಬೌಲರ್ ಎನಿಸಿದರು. ಕಪಿಲ್ ದೇವ್ (1979: 74, 1983: 75), ಜಹೀರ್ ಖಾನ್ (2002: 51) ಹಿಂದಿನ ಸಾಧಕರು.
*2: ಮಿಚೆಲ್ ಸ್ಟಾರ್ಕ್ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಮೂರನೇ ದೃಷ್ಟಾಂತ ಇದಾಗಿದೆ. 2016ರಲ್ಲಿ ಶ್ರೀಲಂಕಾ ವಿರುದ್ಧ, 2021ರಲ್ಲಿ ಇಂಗ್ಲೆಂಡ್ ಎದುರು ಈ ಸಾಧನೆ ಮಾಡಿದ್ದರು. ವಿಂಡೀಸ್‌ನ ಪೆಡ್ರೊ ಕಾಲಿನ್ಸ್ ಈ ಸಾಧನೆ ಮಾಡಿರುವ ಮತ್ತೊಬ್ಬ ವೇಗಿ.
*1: ಮಿಚೆಲ್ ಸ್ಟಾರ್ಕ್ (48ಕ್ಕೆ 6) ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಎದುರು ಮೊದಲ ಬಾರಿ ಮತ್ತು ಒಟ್ಟಾರೆ 15ನೇ ಬಾರಿ 5 ವಿಕೆಟ್ ಸಾಧನೆ ಮಾಡಿದರು. ಇದು ಅವರ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ನಿರ್ವಹಣೆ ಎನಿಸಿದೆ.
4: ಜಸ್‌ಪ್ರೀತ್ ಬುಮ್ರಾ ಜನ್ಮದಿನದಂದು ಟೆಸ್ಟ್‌ನಲ್ಲಿ ಡಕೌಟ್ ಆದ 4ನೇ ಭಾರತೀಯ ಎಂಬ ಅನಪೇಕ್ಷಿತ ದಾಖಲೆ ಬರೆದರು. ಸೈಯದ್ ಕಿರ್ಮಾನಿ (1979), ವಿ.ರಾಜು (1996), ಇಶಾಂತ್ ಶರ್ಮ (2018) ಮೊದಲ ಮೂವರು.
*7: ಯಶಸ್ವಿ ಜೈಸ್ವಾಲ್ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ಔಟಾದ ಭಾರತದ 7ನೇ ಬ್ಯಾಟರ್. ಗಾವಸ್ಕರ್ (1974,1983, 1987), ಸುಧೀರ್ ನಾಯ್ಕ (1974), ಡಬ್ಲುೃವಿ ರಾಮನ್ (1990), ಶಿವ ಸುಂದರ್ ದಾಸ್ (2002), ವಾಸಿಂ ಜಾಫರ್ (2007), ಕೆಎಲ್ ರಾಹುಲ್ (2017) ಹಿಂದಿನವರು.
*53. ಮಿಚೆಲ್ ಸ್ಟಾರ್ಕ್ (53) ಅಡಿಲೇಡ್ ಓವಲ್ 50 ಪ್ಲಸ್ ವಿಕೆಟ್ ಕಬಳಿಸಿದ ಮೂರನೇ ಬೌಲರ್. ನಥಾನ್ ಲ್ಯಾನ್ (63), ಶೇನ್ ವಾರ್ನ್ (56) ಮೊದಲಿಗರು.