

ನ್ಯೂಯಾರ್ಕ್: ವಿಶ್ವ ನಂ.1 ತಾರೆಯರಾದ ಇಟಲಿಯ ಜನ್ನಿಕ್ ಸಿನ್ನರ್, ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಜತೆಗೆ ಮಾಜಿ ಚಾಂಪಿಯನ್ ಡೇನಿಯಲ್ ಮೆಡ್ವೆಡೇವ್, 5ನೇ ಶ್ರೇಯಾಂಕಿತೆ ಜಾಸ್ಮಿನ್ ಪಾವೋಲಿನಿ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ 4ನೇ ಸುತ್ತಿಗೇರಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಜೋಡಿ ಕ್ವಾರ್ಟರ್‌ೈನಲ್‌ಗೆ ಲಗ್ಗೆಯಿಟ್ಟಿದೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯನ್ ಓಪನ್ ವಿಜೇತ ಜನ್ನಿಕ್ ಸಿನ್ನರ್ 6-1, 6-4, 6-2 ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಕ್ರಿಸ್ಟೋರ್ ಓ ಕಾನೆಲ್ ಎದುರು ಸುಲಭ ಗೆಲುವು ದಾಖಲಿಸಿದರು. ಒಂದು ಗಂಟೆ 33 ನಿಮಿಷಗಳ ಹೋರಾಟದಲ್ಲಿ ಮೇಲುಗೈ ಸಾಧಿಸಿದ ಸಿನ್ನರ್, ಜೋಕೊವಿಕ್ ಮತ್ತು ಅಲ್ಕರಾಜ್ ನಿರ್ಗಮನ ಬಳಿಕ ಪ್ರಶಸ್ತಿ ೇವರಿಟ್ ಎನಿಸಿದ್ದಾರೆ. ಮುಂದಿನ ಸುತ್ತಿನಲ್ಲಿ 14ನೇ ಶ್ರೇಯಾಂಕಿತ ಟಾಮಿ ಪೌಲ್ ಸವಾಲು ಎದುರಿಸಲಿದ್ದಾರೆ.
ದಿನದ ಇನ್ನೊಂದು ಪಂದ್ಯದಲ್ಲಿ 2021ರ ಚಾಂಪಿಯನ್, ರಷ್ಯಾದ ಡೇನಿಯಲ್ ಮೆಡ್ವೆಡೇವ್ 6-3, 6-4,6-3 ಸೆಟ್‌ಗಳಿಂದ ಇಟಲಿಯ ್ಲಾವಿಯೊ ಕೊಬೊಲ್ಲಿ ಅವರನ್ನು ಮಣಿಸಿ 4ನೇ ಸುತ್ತಿಗೇರಿದರು. ಅಮೆರಿಕದ ಟಾಮಿ ಪೌಲ್ 6-7,6-3,6-1,7-6 ಕೆನಡದ ಗ್ಯಾಬ್ರಿಲ್ ಡಿಯಲೊ ಎದುರು 3 ಗಂಟೆ 26 ನಿಮಿಷಗಳ ಹೋರಾಟದಲ್ಲಿ ಪ್ರಯಾಸಕರ ಗೆಲುವು ಒಲಿಸಿಕೊಂಡರು. ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೋರ್ 6-3, 6-7, 6-0, 6-0 ರಿಂದ ಬ್ರಿಟನ್ ಡೇನಿಯಲ್ ಇವಾನ್ಸ್ ಅವರನ್ನು ಮಣಿಸಿದರು. ಇದರೊಂದಿಗೆ 2004ರ ಬಳಿಕ ಒಂದೇ ವರ್ಷದಲ್ಲಿ 4 ಗ್ರಾಂಡ್ ಸ್ಲಾಂ ಟೂರ್ನಿಯ 16ರ ಘಟ್ಟಕ್ಕೇರಿದ ಆಸ್ಟ್ರೇಲಿಯಾದ ಮೊದಲ ಆಟಗಾರ ಎನಿಸಿದರು. ಬ್ರಿಟನ್ ಜಾಕ್ ಡಾರ್ಪರ್ 6-3, 6-4,6-2 ರಿಂದ ಬೊಟಿಕ್ ದಿ ಝಂಡ್‌ಸ್ಕಲ್ಪ್ ವಿರುದ್ಧ ಗೆದ್ದು ಬೀಗಿದರು. ಈ ಮೂಲಕ 2003ರ ಬಳಿಕ ಮೊದಲ ಬಾರಿಗೆ ಯುಎಸ್ ಓಪನ್ ಪ್ರಿಕ್ವಾರ್ಟರ್‌ೈನಲ್‌ನಲ್ಲಿ ನಾಲ್ವರು ಅಮೆರಿಕದ ಆಟಗಾರರು ಕಣಕ್ಕಿಳಿಯಲಿದ್ದಾರೆ.
ಸತತ 4ನೇ ವರ್ಷ 16ರ ಘಟ್ಟಕ್ಕೆ ಸ್ವಿಯಾಟೆಕ್: ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ. 1 ಇಗಾ ಸ್ವಿಯಾಟೆಕ್ 6-4, 6-2 ನೇರ ಸೆಟ್‌ಗಳಿಂದ 25ನೇ ಶ್ರೇಯಾಂಕಿತೆ ರಷ್ಯಾದ ಅನಸ್ತಾಸಿಯಾ ಪಾವ್ಲ್ಯಚೆಂಕೋವಾ ಎದುರು ಸುಲಭ ಗೆಲುವು ದಾಖಲಿಸಿದರು. ಇದರೊಂದಿಗೆ ಸತತ 4ನೇ ವರ್ಷವೂ ಟೂರ್ನಿಯ 16ರ ಘಟ್ಟಕ್ಕೇರಿದರು. ಅಮೆರಿಕದ ಜೆಸ್ಸಿಕಾ ಪೆಗುಲಾ 6-3, 6-3 ರಿಂದ ಸ್ಪೇನ್‌ನ ಜೆಸ್ಸಿಕಾ ಕೂಲ್ ಬೌಜೌಸ್ ಎದುರು ಜಯ ದಾಖಲಿಸಿದರೆ, ಇಟಲಿಯ ಜಾಸ್ಮಿನ್ ಪಾವೋಲಿನಿ 6-3,6-4 ರಿಂದ ಯೂಲಿಯಾ ಪುಟಿನ್ಟ್ಸೆವಾ ಅವರನ್ನು ಮಣಿಸಿದ ಹಾಲಿ ಋತುವಿನ 4ನೇ ಗ್ರಾಂಡ್ ಸ್ಲಾಂನ 4ನೇ ಸುತ್ತಿಗೆ ಅರ್ಹತೆ ಪಡೆದರು. ಇದರೊಂದಿಗೆ ಈ ಸಾಧನೆ ಮಾಡಿದ ಇಟಲಿಯ ಮೊದಲ ಆಟಗಾರ್ತಿ ಎನಿಸಿದರು. ಕರೋಲಿನಾ ಮುಚೋವಾ 6-4, 6-2 ರಿಂದ ಅನಸ್ತಾಸಿಯಾ ಪೊಟಪೋವಾ ಎದುರು ಗೆದ್ದು ಮುಂದಿನ ಸುತ್ತಿಗೆ ಅರ್ಹತೆ ಪಡೆದರು.
ಕ್ವಾರ್ಟರ್‌ೈನಲ್‌ಗೆ ಬೋಪಣ್ಣ ಜೋಡಿ: ಮಿಶ್ರ ಡಬಲ್ಸ್‌ನಲ್ಲಿ ಭಾರತದ ಅಗ್ರ ತಾರೆ ರೋಹನ್ ಬೋಪಣ್ಣ ಹಾಗೂ ಇಂಡೋನೇಷ್ಯಾದ ಅಲ್‌ದಿಲಾ ಸುಟ್‌ಜಿಯಾದಿ ಜೋಡಿ 0-6, 7-6, 10-7 ರಿಂದ ಆಸ್ಟ್ರೇಲಿಯಾದ ಜಾನ್ ಪಿರ್ಸ್, ಜೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಕೋವಾ ವಿರುದ್ಧ 1 ಗಂಟೆ 13 ನಿಮಿಷಗಳ ಹೋರಾಟದಲ್ಲಿ ಕಠಿಣ ಗೆಲುವು ದಾಖಲಿಸಿತು. 43 ವರ್ಷದ ಬೋಪಣ್ಣ-ಸುಟ್‌ಜಿಯಾದಿ ಜೋಡಿ ಕ್ವಾರ್ಟರ್‌ೈನಲ್‌ನಲ್ಲಿ 4ನೇ ಶ್ರೇಯಾಂಕಿತ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್-ಬಾರ್ಬೋವಾ ಕ್ರೆಜ್ಸಿಕೋವಾ ಕೋಡಿಯನ್ನು ಎದುರಿಸಲಿದೆ. ಪುರುಷರ ಡಬಲ್ಸ್‌ನಲ್ಲಿ ಎಬ್ಡೆನ್ ಅವರು ರೋಹನ್ ಬೋಪಣ್ಣ ಜತೆಗಾರನಾಗಿದ್ದಾರೆ.