ಚಹಾಲ್-ಧನಶ್ರೀ ವರ್ಮಾ ವಿಚ್ಛೇದನ: ಕೋರ್ಟ್​​ನಲ್ಲಿ ಇಂದೇ ಆಗಲಿದ್ಯಾ ಅಂತಿಮ ನಿರ್ಧಾರ... Yuzvendra Chahal and Dhanashree Verma divorce case

Dhanashree Verma
Published on

ಮುಂಬೈ: ( Yuzvendra Chahal and Dhanashree Verma divorce case ) ಭಾರತದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ  ಸುಮಾರು ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಾರ್ಚ್ 20 ರೊಳಗೆ ಅವರ ವಿಚ್ಛೇದನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ವರದಿಯಾಗಿದೆ.

ಐಪಿಎಲ್‌ನಲ್ಲಿ ಚಾಹಲ್ ಅವರ ಬಿಡುವಿಲ್ಲದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು, ಗುರುವಾರದೊಳಗೆ ವಿಚ್ಛೇದನ ಪ್ರಕ್ರಿಯೆಗಳ ಕುರಿತು ತೀರ್ಪು ನೀಡುವಂತೆ ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ ಎನ್ನುವ ಸುದ್ದಿಯೊಂದು  ವರದಿಯಾಗಿದೆ.

ಚಾಹಲ್ ಮತ್ತು ಧನಶ್ರೀ ಫೆಬ್ರವರಿ 5 ರಂದು ಪರಸ್ಪರ ಒಪ್ಪಿಗೆಯೊಂದಿಗೆ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.  ಕುಟುಂಬ ನ್ಯಾಯಾಲಯವು ಆರು ತಿಂಗಳ ಕೂಲಿಂಗ್-ಆಫ್ ಅವಧಿಯನ್ನು ಮನ್ನಾ ಮಾಡಲು ನಿರಾಕರಿಸಿತು. ಅದಾದ ನಂತರ, ಇಬ್ಬರೂ ಕುಟುಂಬ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು.  ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B ವಿಚ್ಛೇದನಕ್ಕೆ ಆರು ತಿಂಗಳ ಕೂಲಿಂಗ್-ಆಫ್ ಅವಧಿಯನ್ನು ಬಯಸುತ್ತದೆ, ಇದು ದಂಪತಿ ಒಟ್ಟಿಗೆ ವಾಸಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ. ವಿವಾದವನ್ನು ಪರಿಹರಿಸಲು ಯಾವುದೇ ಸಾಧ್ಯತೆ ಇಲ್ಲದಿದ್ದರೆ, ಕೂಲಿಂಗ್ ಆಫ್ ಅವಧಿಯನ್ನು ಮನ್ನಾ ಮಾಡಬಹುದು.ನ್ಯಾಯಮೂರ್ತಿ ಮಾಧವ್ ಅವರು ಕೂಲಿಂಗ್ ಅವಧಿಯನ್ನು ರದ್ದುಗೊಳಿಸಿದರು, ಇಬ್ಬರೂ ಸುಮಾರು ಎರಡೂವರೆ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಮತ್ತು ಜೀವನಾಂಶಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಒಪ್ಪಿಕೊಂಡ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿದ್ದಾರೆ ಎಂದು ಗಮನಿಸಿದರು. ಕುಟುಂಬ ನ್ಯಾಯಾಲಯದ ಪ್ರಕಾರ, ಚಾಹಲ್ ಧನಶ್ರೀಗೆ 4.75 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಅವರು ಈಗಾಗಲೇ ಅದರಲ್ಲಿ 2.37 ಕೋಟಿ  ರೂ. ನೀಡಿದ್ದಾರೆ.

ಮಾರ್ಚ್ 22 ರಿಂದ ಚಾಹಲ್ ಐಪಿಎಲ್ 2025 ರಲ್ಲಿ ಬ್ಯುಸಿಯಾಗಿರುತ್ತಾರೆ. ಈ ಬಾರಿ ಅವರು ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಪಂಜಾಬ್ ತಂಡವು ಮಾರ್ಚ್ 25 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ತನ್ನ ಆಟವನ್ನು ಪ್ರಾರಂಭಿಸಲಿದೆ. ಮೆಗಾ ಹರಾಜಿನಲ್ಲಿ ಪಂಜಾಬ್ ತಂಡ ಚಾಹಲ್ ಅವರನ್ನು 18 ಕೋಟಿ ರೂ.ಗೆ ಖರೀದಿಸಿತು. ಚಾಹಲ್ ತಮ್ಮ ವಕೀಲರೊಂದಿಗೆ ಮಾತನಾಡಿದ್ದಾರೆ ಎಂದು ನ್ಯಾಯಮೂರ್ತಿ ಮಾಧವ್ ಜಂದಾರ್ ಅವರ ಪೀಠ ಹೇಳಿದೆ. ಮಾರ್ಚ್ 21 ರ ನಂತರ, ಐಪಿಎಲ್‌ನಲ್ಲಿ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಚಹಾಲ್ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿ, ಮಾರ್ಚ್ 20 ರೊಳಗೆ ವಿಚ್ಛೇದನ ಪ್ರಕರಣದಲ್ಲಿ ತೀರ್ಪು ನೀಡುವಂತೆ ಕುಟುಂಬ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ  ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net