

ಪಟನಾ: ಬಿಹಾರದ ಎಡಗೈ ಸ್ಪಿನ್ನರ್ ಸುಮನ್ ಕುಮಾರ್ 19 ವಯೋಮಿತಿಯ ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಹ್ಯಾಟ್ರಿಕ್ನೊಂದಿಗೆ ಇನಿಂಗ್ಸ್ನ ಎಲ್ಲ 10 ವಿಕೆಟ್ ಕಬಳಿಸಿದ ಅಪರೂಪದ ಸಾಧನೆ ಮಾಡಿದ್ದಾರೆ.
ಸುಮನ್ ಮೊದಲ ಇನಿಂಗ್ಸ್ನಲ್ಲಿ 33.5 ಓವರ್ಗಳ ಸುದೀರ್ ಸ್ಪೆಲ್ನಲ್ಲಿ 20 ಮೇಡನ್ ಸಹಿತ 53 ರನ್ಗಳಿಗೆ 10 ವಿಕೆಟ್ ಕಬಳಿಸಿದರು. ಇದರೊಂದಿಗೆ ಬಿಹಾರದ 467 ರನ್ಗಳಿಗೆ ಪ್ರತಿಯಾಗಿ ರಾಜಸ್ಥಾನ 182 ರನ್ಗಳಿಗೆ ಸರ್ವಪತನ ಕಂಡು ಫಾಲೋಆನ್ಗೆ ಸಿಲುಕಿತು.
2ನೇ ಇನಿಂಗ್ಸ್ನಲ್ಲಿ 5 ವಿಕೆಟ್ಗೆ 410 ರನ್ ಗಳಿಸುವ ಮೂಲಕ ರಾಜಸ್ಥಾನ ಡ್ರಾ ಸಾಧಿಸಿತು. 2ನೇ ಇನಿಂಗ್ಸ್ನಲ್ಲಿ ಸುಮನ್ 49 ಓವರ್ ಎಸೆದು 88 ರನ್ಗಳಿಗೆ 1 ವಿಕೆಟ್ ಗಳಿಸಲಷ್ಟೇ ಶಕ್ತರಾದರು.