ಕೊಹ್ಲಿಯನ್ನು... ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸುತ್ತಿದ್ದಂತೆ ಕಾಂಗ್ರೆಸ್ ವಕ್ತಾರೆಯ ಹೇಳಿಕೆ ವೈರಲ್​

Shama Kohli
Published on

ನವದೆಹಲಿ: ಈ ಹಿಂದೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಬಗ್ಗೆ ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್​ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಈ ಬಾರಿ ವಿರಾಟ್ ಕೊಹ್ಲಿ ಹಾಗೂ ಟೀಮ್​ ಇಂಡಿಯಾ ಪ್ರದರ್ಶನದ ಕುರಿತು ಟ್ವೀಟ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಶಮಾ ಮೊಹಮ್ಮದ್​, ರೋಹಿತ್ ಶರ್ಮ ನಾಯಕತ್ವದಲ್ಲಿ ಭಾರತ ತಂಡ ಸೆಮಿಫೈನಲ್ ಗೆದ್ದಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ. 84 ರನ್​ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್ ಕೊಹ್ಲಿ ಅವರನ್ನು ನಾನು ಅಭಿನಂದಿಸುತ್ತೇನೆ. ಫೈನಲ್ ಪಂದ್ಯವನ್ನು ನಾನು ಎದುರು ನೋಡುತ್ತಿದ್ದು, ಉತ್ಸುಕಳಾಗಿದ್ದೇನೆ ಎಂದು ಶಮಾ ಮೊಹಮ್ಮದ್ ಹೇಳಿದ್ದಾರೆ.

ರೋಹಿತ್ ಶರ್ಮ ಬಗ್ಗೆ ಟೀಕೆ

ರೋಹಿತ್ ಶರ್ಮಾ ಓರ್ವ ದಡೂತಿ ಕ್ರೀಡಾಪಟು. ಆತ ತೂಕ ಇಳಿಸಿಕೊಳ್ಳಬೇಕು. ಅಲ್ಲದೆ, ರೋಹಿತ್​ ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ ಎಂದು ಟೀಕಿಸಿದ್ದರು. ಶಮಾ ಮೊಹಮ್ಮದ್​ ಅವರ ಈ ಹೇಳಿಕೆಗಳು ವಿಶೇಷವಾಗಿ ಬಿಜೆಪಿ ನಾಯಕರು ಮತ್ತು ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ರೋಹಿತ್​ ಶರ್ಮ ಓರ್ವ “ವಿಶ್ವ ದರ್ಜೆಯ ಆಟಗಾರ” ಎಂದು ಕಾಮೆಂಟ್​ ಮಾಡಿದ ನೆಟ್ಟಿಗನಿಗೆ ಪ್ರತಿಕ್ರಿಯೆ ನೀಡಿರುವ ಶಮಾ ಮೊಹಮ್ಮದ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ಕಪಿಲ್ ದೇವ್ ಅವರಂತಹ ಭಾರತೀಯ ಕ್ರಿಕೆಟ್ ದಿಗ್ಗಜರಿಗೆ ಹೋಲಿಸಿದಾಗ ರೋಹಿತ್​ರಲ್ಲಿ ವಿಶ್ವ ದರ್ಜೆ ಅನ್ನುವಂಥದ್ದು ಏನಿದೆ? ಭಾರತದ ನಾಯಕನಾಗುವ ಅದೃಷ್ಟ ಪಡೆದ ಸಾಧಾರಣ ಆಟಗಾರ ಎನ್ನುವ ಮೂಲಕ ಉರಿಯುವ ಬೆಂಕಿಗೆ ಶಮಾ ಮತ್ತಷ್ಟು ತುಪ್ಪ ಸುರಿದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net