ಈ ನಿರ್ಧಾರ ತಂಡಕ್ಕೆ ಉತ್ತಮ... ಎರಡನೇ ಪಂದ್ಯಕ್ಕೂ ಮುನ್ನ Rohit Sharma ತ್ಯಾಗದ ಹೇಳಿಕೆ ವೈರಲ್​

Rohit Sharma
Published on

ಅಡಿಲೇಡ್​: ಡಿಸೆಂಬರ್​ 06ರಂದು ಇಲ್ಲಿನ ಅಡಿಲೇಡ್​ ಓವಲ್​ ಮೈದಾನದಲ್ಲಿ (Adelaide Oval) ನಡೆಯಲಿರುವ ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಟೆಸ್ಟ್​ ಸರಣಿಯ (Test Series) ಎರಡನೇ ಪಂದ್ಯಕ್ಕೆ ಈಗಾಗಲೇ ಉಭಯ ತಂಡಗಳು ತಯಾರಿ ನಡೆಸಿದ್ದು, ಸರಣಿಯ ಮೊದಲ ಪಂದ್ಯವನ್ನು ಗೆದ್ದು ಬೀಗಿರುವ ಭಾರತ ತನ್ನ ಗೆಲುವಿನ ಓಟವನ್ನು ವಿಸ್ತರಿಸಲು ಸಜ್ಜಾಗಿದ್ದು, ಪಿಂಕ್​ಬಾಲ್​ ಟೆಸ್ಟ್​ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನೂ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ರೋಹಿತ್​ ಶರ್ಮ (Rohit Sharma) ಹಾಗೂ ಶುಭಮನ್​ ಗಿಲ್​ (Shubman Gill) ಎರಡನೇ ಮ್ಯಾಚ್​​ನಲ್ಲಿ ತಂಡವನ್ನು ಕೂಡಿಕೊಳ್ಳುತ್ತಿದ್ದು, ತಂಡದಲ್ಲಿ ಕೆಲ ಬದಲಾವಣೆಗಳು ಆಗುವುದು ಖಾತ್ರಿಯಾಗಿದೆ. ಪಿಂಕ್​ಬಾಲ್​ ಟೆಸ್ಟ್​​​ಗೂ ಮುನ್ನ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (Rohit Sharma) ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸರಣಿಯ ಎರಡನೇ ಪಂದ್ಯದಲ್ಲಿ ಕೆ.ಎಲ್​. ರಾಹುಲ್​ (KL Rahul) ಇನ್ನಿಂಗ್ಸ್ ಆರಂಭಿಸಲಿದ್ದಾರೆ. ನಾನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಆಡುತ್ತೇನೆ. ಕಷ್ಟವಾದರೂ ಈ ವಿಚಾರ ತಂಡದ ಪಾಲಿಗೆ ಉತ್ತಮವಾಗಿದೆ. ಮೊದಲ ಟೆಸ್ಟ್​ ಪಂದ್ಯದಲ್ಲಿ ಜಡೇಜಾ ಹಾಗೂ ಅಶ್ವಿನ್​ರಂತಹ ಹಿರಿಯ ಆಟಗಾರರನ್ನು ಹೊರಗಿಡುವುದು ಯಾವಾಗಲೂ ಕಷ್ಟಕರವಾಗಿದ್ದು, ಇದು ಎಂದಿಗೂ ಸುಲಭವಲ್ಲ.

ಜಡೇಜಾ-ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಟ್ಟಿತ್ತು. ಇದರ ಜೊತೆಗೆ ಹರ್ಷಿತ್ ರಾಣಾ ಮತ್ತು ನಿತೀಶ್ ರೆಡ್ಡಿಗೆ ಪದಾರ್ಪಣೆ ಮಾಡಲು ಅವಕಾಶ ನೀಡಿತ್ತು. ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರ ಸರಿ ಎಂದು ಸಾಬೀತಾಗಿದ್ದು, ತಂಡವೂ ಪಂದ್ಯವನ್ನು ಗೆದ್ದುಕೊಂಡಿತು. ಆ ಸಮಯದಲ್ಲಿ ತಂಡಕ್ಕೆ ಯಾವುದು ಉತ್ತಮ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮ್ಯಾನೇಜ್‌ಮೆಂಟ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ಸರಣಿಯ ಉಳಿದ ಪಂದ್ಯಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.

ಸರಣಿಯ ಮೊದಲ ಪಂದ್ಯದಲ್ಲಿ ಆಡಿದ ವಾಷಿಂಗ್ಟನ್​ ಸುಂದರ್ ತನಗೆ ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾನೆ. ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಆತ ಏನು ಮಾಡಬಹುದು ಎಂದು ತೋರಿಸಿದ್ದಾನೆ. ಆತ ಎಲ್ಲಿಯಾದರೂ ಆಡುವ ತಂತ್ರವನ್ನು ಹೊಂದಿದ್ದಾನೆ. ಸುಂದರ್​ ನಮ್ಮ ತಂಡಕ್ಕೆ ಮುಖ್ಯ ಆಟಗಾರನಾಗಿದ್ದಾನೆ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (Rohit Sharma) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net