ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್ ಜಯ ; ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿತ

bengaluru bulls win third win for web
Published on

ಬೆಂಗಳೂರು: ಸ್ಟಾರ್ ರೈಡರ್ ಪವನ್ ಶೆರಾವತ್ (22ಅಂಕ) ಭರ್ಜರಿ ರೈಡಿಂಗ್ ಲವಾಗಿ ಬೆಂಗಳೂರು ಬುಲ್ಸ್ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು. ಪ್ರಸಕ್ತ ಲೀಗ್‌ನಲ್ಲಿ ಹ್ಯಾಟ್ರಿಕ್ ಜಯ ಕಂಡ ಮೊದಲ ತಂಡ ಎನಿಸಿಕೊಂಡಿತು. ಗುರುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 42-28ರಿಂದ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಸೋಲಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿತು.

ಆರಂಭಿಕ 7 ನಿಮಿಷಗಳವರೆಗೂ ಹಿನ್ನಡೆ ಅನುಭವಿಸಿದ ಬುಲ್ಸ್ ಪಂದ್ಯ ಸಾಗುತ್ತಿದ್ದಂತೆ ಹಿಡಿತ ಸಾಧಿಸಿತು. 7ನೇ ನಿಮಿಷದಲ್ಲಿ 5-4 ರಿಂದ ಮುನ್ನಡೆ ಸಾಧಿಸಿ ಬುಲ್ಸ್ 9ನೇ ನಿಮಿಷದಲ್ಲಿ ಹರಿಯಾಣ ತಂಡವನ್ನು ಆಲೌಟ್ ಮಾಡುವ ಮೂಲಕ 10-5 ರಿಂದ ಮುನ್ನಡೆ ಹಿಗ್ಗಿಸಿಕೊಂಡಿತು. 14ನೇ ನಿಮಿಷದಲ್ಲಿ ನಾಯಕ ಪವನ್ ಭರ್ಜರಿ ರೈಡಿಂಗ್ ಮೂಲಕ ಗಮನಸೆಳೆದರು. ಮೊದಲಾರ್ಧದಲ್ಲಿ ಬುಲ್ಸ್ ತಂಡ 19-13 ರಿಂದ ಮುನ್ನಡೆ ಕಂಡುಕೊಂಡಿತು.

ದ್ವಿತೀಯಾರ್ಧದ ಆರಂಭಿಕ ಹಂತದಲ್ಲೇ ಹಿಡಿತ ಸಾಧಿಸಿದ ಪವನ್ ಪಡೆ ಮುನ್ನಡೆ ಹಿಗ್ಗಿಸಿಕೊಳ್ಳುತ್ತಾ ಸಾಗಿತು. 29ನೇ ನಿಮಿಷದಲ್ಲಿ ಹರಿಯಾಣ ತಂಡವನ್ನು ಎರಡನೇ ಬಾರಿಗೆ ಆಲೌಟ್ ಮಾಡುವ ಮೂಲಕ 31-18 ರಿಂದ ಮುನ್ನಡೆ ಗಳಿಸಿತು. ಅಂತಿಮ ನಿಮಿಷಗಳಲ್ಲಿ ಬುಲ್ಸ್ ಆಲೌಟ್ ಆಗುವ ಹಂತಕ್ಕೆ ತಲುಪಿದರೂ ಪವನ್ ಅವಕಾಶ ನೀಡಲಿಲ್ಲ. ಸೋಲಿನೊಂದಿಗೆ ಲೀಗ್ ಅಭಿಯಾನ ಆರಂಭಿಸಿದ್ದ ಬುಲ್ಸ್ ಸತತ ಮೂರು ಗೆಲುವಿನ ಮೂಲಕ ಗಮನಸೆಳೆದಿದೆ.

*ಗೆಲುವಿನ ಹಳಿಗೆ ಯು ಮುಂಬಾ

ಆರಂಭಿಕ ನಿಮಿಷಗಳಿಂದಲೂ ಪಂದ್ಯದಲ್ಲಿ ಹಿಡಿತ ಸಾಧಿಸಿದ ಯು ಮುಂಬಾ ತಂಡ ದಿನದ ಮೊದಲ ಪಂದ್ಯದಲ್ಲಿ 37-28ರಿಂದ ಜೈಪುರ ಪಿಂಕ್‌ಪ್ಯಾಂಥರ್ಸ್‌ ತಂಡವನ್ನು ಸೋಲಿಸಿತು. ಹಿಂದಿನ ಎರಡೂ ಹಣಾಹಣಿಯಲ್ಲಿ ಗೆಲುವು ದಾಖಲಿಸಲು ವಿಲವಾಗಿದ್ದ ಯು ಮುಂಬಾ ಭರ್ಜರಿ ನಿರ್ವಹಣೆ ನಿರ್ವಹಣೆ ಮೂಲಕ ಜಯದ ಹಳಿಗೇರಿತು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಜೈಪುರ ತಂಡ ನಿರಾಸೆ ಅನುಭವಿಸಿತು. ಮೊದಲಾರ್ಧದಲ್ಲಿ ಮುಂಬೈ ತಂಡ 21-12 ರಿಂದ ಮುನ್ನಡೆ ಸಾಧಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net